‘ವಿವಾದಾತ್ಮಕ ಕೃಷಿ ಕಾನೂನುಗಳ ಅನುಷ್ಠಾನವನ್ನು 18 ತಿಂಗಳುಗಳ ಕಾಲ ಅಮಾನತಿನಲ್ಲಿರಿಸುವ ತಮ್ಮ ಸರ್ಕಾರದ ಪ್ರಸ್ತಾವನೆ ಇನ್ನೂ ಜಾರಿಯಾಗಿಲ್ಲ. ಕೋಪಗೊಂಡ ರೈತರೊಂದಿಗೆ ವಾರಗಳ ಕಾಲ ಸ್ಥಗಿತಗೊಂಡಿರುವ ಮಾತುಕತೆ ಮುಂದುವರೆಸುವ ಪ್ರಯತ್ನ ಸಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳನ್ನು ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಒಂಬತ್ತು ಸುತ್ತಿನ ಮಾತುಕತೆ ಪ್ರಗತಿಯನ್ನು ನೀಡಲು ವಿಫಲವಾದ ನಂತರ ಈ ತಿಂಗಳ ಆರಂಭದಲ್ಲಿ ಕೇಂದ್ರದಿಂದ ಮಂಡಿಸಲಾದ ಪ್ರಸ್ತಾಪವನ್ನು ತಿರಸ್ಕರಿಸಿದ್ದ ರೈತರು ಎಲ್ಲಾ ಮೂರು ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.
“ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಸರ್ಕಾರ ರೈತರ ಸಮಸ್ಯೆಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುತ್ತದೆ ಎಂದು ಭರವಸೆ ನೀಡಿದರು. ಜನವರಿ 22 ರಂದು ಇದ್ದಂತೆ ಸರ್ಕಾರದ ನಿಲುವು ಕೃಷಿ ಸಚಿವರ ಪ್ರಸ್ತಾಪವೇ (ಕಾಯ್ದೆಗಳನ್ನು 18 ತಿಂಗಳು ಅಮಾನತಿನಲ್ಲಿಡುವ ಪ್ರಸ್ತಾಪ) ಆಗಿದೆ ಎಂದು ಪ್ರಧಾನಿ ಹೇಳಿದರು ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಈ ಕುರಿತು ಜೋಶಿ ಟ್ವೀಟ್ ಕೂಡ ಮಾಡಿದ್ದಾರೆ.
“ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದನ್ನು ಪ್ರಧಾನಿ ಪುನರುಚ್ಚರಿಸಿದರು, ಕೃಷಿ ಸಚಿವರು ಮಾತುಕತೆಗೆ ದೂರವಾಣಿ ಕರೆ ಮಾಡಿದ್ದಾರೆ” ಎಂದು ಜೋಶಿ ಹೇಳಿದರು. ಮೊದಲ ನಿರಾಕರಣೆಯ ನಂತರ ಕಳೆದ ವಾರ ಮತ್ತೊಮ್ಮೆ ಹನ್ನೊಂದನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರದ ಈ ಪ್ರಸ್ತಾಪವನ್ನು (ಕಾಯ್ದೆಗಳನ್ನು 18 ತಿಂಗಳು ಅಮಾನತಿನಲ್ಲಿಡುವ ಪ್ರಸ್ತಾಪ) ನಿರಾಕರಿಸಲಾಯಿತು. ಆಗ ತೋಮರ್ ಅವರು “ಚೆಂಡು ಈಗ ನಿಮ್ಮ (ರೈತರ) ನ್ಯಾಯಾಲಯದಲ್ಲಿದೆ” ಎಂದು ಘೋಷಿಸಬೇಕಾಗಿತು ಎಂದು ತಿಳಿಸಿದ್ದಾರೆ.
ಸೋಮವಾರ ಕೇಂದ್ರ ಬಜೆಟ್ ಮಂಡಿಸುವ ಮೊದಲು ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನ ಮಂತ್ರಿ ಆ ಪ್ರಸ್ತಾಪವನ್ನು ಪುನರಾವರ್ತಿಸಿದರು. 20 ವಿರೋಧ ಪಕ್ಷಗಳು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ ಒಂದು ದಿನದ ನಂತರ ಈ ಸಭೆ ನಡೆಯಿತು. ಇದು ಗಣರಾಜ್ಯೋತ್ಸವದ ಹಿಂಸಾಚಾರದ ಚರ್ಚೆಯನ್ನು ಮತ್ತು ನಿರ್ದಿಷ್ಟವಾಗಿ ಕೆಂಪು ಕೋಟೆಯಲ್ಲಿ ನಡೆದ ಘಟನೆಯ ಚರ್ಚೆಯನ್ನು ಒಳಗೊಂಡಿತ್ತು .
ವಿರೋಧ ಪಕ್ಷಗಳು ಹಿಂಸಾಚಾರವನ್ನು ಖಂಡಿಸಿದವು, ಆದರೆ “ಹೊರಗಿನ ವ್ಯಕ್ತಿಗಳು” ರೈತರ ಆಂದೋಲನಕ್ಕೆ ಹೇಗೆ ನುಸುಳಿದರು ಎಂಬ ಬಗ್ಗೆ ತನಿಖೆಗೆ ಒತ್ತಾಯಿಸಿದವು.
ಈ ವಾರ ರೈತರು ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ, ‘ಪಂಜಾಬಿ ನಟ ದೀಪ್ ಸಿಧು ಘರ್ಷಣೆಯನ್ನು ಪ್ರಚೋದಿಸಿದರು ಮತ್ತು ಕೆಂಪು ಕೋಟೆಯಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ನೆಟ್ಟಿದ್ದಾರೆ’ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ‘ದೆಹಲಿ ಗಡಿಯಲ್ಲಿನ ರೈತ ಪ್ರತಿಭಟನೆಗೆ ಸೇರಿಕೊಳ್ಳಿ’: ಕಾರ್ಯಕರ್ತರಿಗೆ ಮನವಿ ಮಾಡಿದ ಅಕಾಲಿ ದಳ


