Homeಮುಖಪುಟ’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

- Advertisement -
- Advertisement -

ಮಧ್ಯಪ್ರದೇಶದ ಪ್ರಸಿದ್ಧ ವಿಡಂಬನಕಾರ ಹರಿಶಂಕರ್ ಪಾರ್ಸಾಯಿ ಅವರು ಗಣರಾಜ್ಯೋತ್ಸವದಂದು ’ತಿಥುರ್ತಾ ಗಣತಂತ್ರ್ ಔರ್ ಭೀಗ್ತಿ ಸ್ವತಂತ್ರ್’ (ನಡುಗುತ್ತಿರುವ ಗಣತಂತ್ರ ಮತ್ತು ಸೊರಗುತ್ತಿರುವ ಸ್ವಾತಂತ್ರ್ಯ ದಿವಸ) ಎಂಬ ಶೀರ್ಷಿಕೆಯ ಕಿರು ಪ್ರಬಂಧವನ್ನು ಬರೆದಿದ್ದಾರೆ. ಇದರಲ್ಲಿ ’ನಮ್ಮ ಗಣರಾಜ್ಯ ದಿನ ನಡುಗುತ್ತಿದೆ, ಸ್ವಾತಂತ್ರ್ಯ ದಿನ ಸೊರಗುತ್ತಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಈ ರಾಷ್ಟ್ರೀಯ ದಿನಗಳು ಮತ್ತು ಅಧಿಕೃತ ರಜಾದಿನಗಳ ಹಿನ್ನೆಲೆಯಲ್ಲಿ ಪಾರ್ಸಾಯಿ ಈ ವಿಡಂಬನೆ ಬರೆದಿದ್ದಾರೆ. ದೆಹಲಿಯಲ್ಲೆ ನಡೆದ ಗಣರಾಜ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಮೆರವಣಿಗೆಯ ವಾತಾವರಣವನ್ನು ಪಾರ್ಸಾಯಿ ವಿವರಿಸಿದ್ದಾರೆ. ರೇಡಿಯೊ ಅನೌನ್ಸರ್ (ಉದ್ಘೋಷಕಿ), ’ಜೋರಾಗಿ ಚಪ್ಪಾಳೆ ಕೇಳಿಸುತ್ತಿವೆ’ ಎಂದು ವಿವರಿಸುವುದನ್ನು ಲೇಖಕ ಕೇಳಿಸಿಕೊಳ್ಳುತ್ತಾರೆ. ಆದರೆ ಪಾರ್ಸಾಯ್‌ಗೆ ಆ ಚಪ್ಪಾಳೆಗಳು ಎಲ್ಲಿಂದ ಬರುತ್ತವೆ ಎಂದು ನೋಡಲು/ತಿಳಿಯಲು ಸಾಧ್ಯವಾಗುವುದಿಲ್ಲ. ಓವರ್‌ಕೋಟ್ ಧರಿಸಿ, ಕುರ್ಚಿಗಳ ಮೇಲೆ ಕುಳಿತ ಪ್ರೇಕ್ಷಕರಿಂದ ಈ ಚಪ್ಪಾಳೆಗಳು ಬರುತ್ತಿಲ್ಲ. ಕೈ ಬೆಚ್ಚಗಾಗಲು ಓವರ್‌ಕೋಟ್ ಪಾಕೆಟ್‌ಗಳಿಲ್ಲದ, ನೆಲದ ಮೇಲೆ ಕುಳಿತಿರುವ ಜನರ ನಿರಂತರ ಚಪ್ಪಾಳೆಯಿಂದ ಈ ಶಬ್ದ ಬರುತ್ತಿದೆ. ಈ ನಡುಗುವ ಕೈಗಳ ಚಪ್ಪಾಳೆಯನ್ನು ಗಣತಂತ್ರವು ಹಿಡಿದಿಟ್ಟುಕೊಂಡಿದೆ ಎಂದು ತೋರುತ್ತದೆ.

ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತೀಕ್ಷ್ಣ ವಿಡಂಬನೆ ಮತ್ತು ವ್ಯಾಖ್ಯಾನಕ್ಕೆ ಹೆಸರುವಾಸಿಯಾದ ಪಾರ್ಸಾಯಿ ವಸ್ತುಸ್ಥಿತಿಯನ್ನು ಬಿಂಬಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಪುನರಾವರ್ತಿತ ಭರವಸೆಗಳಿಂದ ಮತ್ತೆ ಮತ್ತೆ ಮೂರ್ಖರಾಗುವ ಜನರನ್ನು ಸಹ ಅವರು ಟೀಕಿಸಿದ್ದಾರೆ. ಬಹುಷಃ ಪಾರ್ಸಾಯಿ ಹೇಳಿದಂತೆ, ಚಪ್ಪಾಳೆ ಹೊಡಿ ಯುತ್ತಿರುವ ಕೈಗಳ ಶಾಖದ ಹೊರತಾಗಿ ಜನರ ಬಳಿ ಏನೂ ಇಲ್ಲ.

ಚಳವಳಿಯ ಬೆಂಕಿ

ಪ್ರತಿಯೊಬ್ಬ ಸಿನಿಕ ವ್ಯಕ್ತಿಯ ಹಿಂದೆ ಒಬ್ಬ ನಿರಾಶೆಗೊಂಡ ಆದರ್ಶವಾದಿ ಇರುತ್ತಾನೆ

– ಜಾರ್ಜ್ ಕ್ಯಾರ್ಲಿನ್.

ಪರ್ಸಾಯಿ ಅವರ ವಿಡಂಬನೆಯು ಜಯಪ್ರಕಾಶ್ ನಾರಾಯಣರು ನೀಡಿದ್ದ ಭರವಸೆಗಳ ವೈಫಲ್ಯ ಮತ್ತು ಲೋಹಿಯಾವಾದಿ ಚಳವಳಿಯಿಂದಾದ ನಿರಾಸೆಯಿಂದ ಹುಟ್ಟುತ್ತದೆ.

ರೈತ ಹೋರಾಟವನ್ನು ನೋಡಲು ಅವರು ಬದುಕಿರಬೇಕಿತ್ತೆಂದು ನನಗೆಷ್ಟು ಅನ್ನಿಸುತ್ತಿದೆ ನೋಡಿ.
ಅವರಂತಹ ಸಿನಿಕ ವ್ಯಕ್ತಿಯನ್ನು ಅದು ಜನಶಕ್ತಿಯ ಮೇಲೆ ಭರವಸೆಯಿಟ್ಟಿರುವ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಿತ್ತು.

ಮಾಸ್ಟರ್‌ಸ್ಟ್ರೋಕ್

ದೆಹಲಿಯಲ್ಲಿ ಇಳಿಯುವ ಮುಂಚೆ ಕುಟುಂಬ ಮತ್ತು ಸ್ನೇಹಿತರು ದೆಹಲಿಯ ಚಳವಳಿಯ ಕುರಿತು ಮತ್ತು ಸರ್ಕಾರ ಹಾಗೂ ಚಳವಳಿಕಾರರಿಂದ ಉಂಟಾಗಬಹುದಾದ ಹಿಂಸೆಯ ಕುರಿತು ಎಚ್ಚರಿಸಿದ್ದರು. ದೆಹಲಿಯ ಚಳಿಯು ದಿನೇ ದಿನೇ ಹೆಚ್ಚೆಚ್ಚು ಕೊರೆಯುತ್ತಿದ್ದು, ಪ್ರತೀ ವರ್ಷ 20-40-50 ವರ್ಷಗಳ ದಾಖಲೆಯನ್ನು ಮುರಿಯುತ್ತಲೇ ಇದೆ. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧಳಾಗಿಯೇ ಬಂದಿದ್ದೆ. ಸಿಂಘು ಗಡಿಯಲ್ಲಿ ಬೆಳಿಗಿನ ಚಳಿಯು ಮಂಜಿನ ಕಾರಣದಿಂದ ಇನ್ನೂ ತೀವ್ರವಾಗಿತ್ತು. ಸಿಂಘು ಗಡಿಯ ಪ್ರವೇಶದಲ್ಲಿ ವಿಪರೀತವಾಗಿ ನಿಯೋಜಿಸಲಾಗಿದ್ದ ಪೊಲೀಸ್ ಮತ್ತು ಮೀಸಲುಪಡೆಯು ಪ್ರತಿಭಟನಾಕಾರರನ್ನು ಸದೆಬಡಿಯಲು ದೆಹಲಿ ಪೊಲೀಸರ ಕುಪ್ರಸಿದ್ಧ ಆಯುಧಗಳಾದ ಜಲಫಿರಂಗಿ, ಲಾಠಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿತು.

ಆ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನನ್ನೊಳಗೆ ಭಯವೂ ಪ್ರವೇಶಿಸಿತು. ಆದರೆ, ಇನ್ನಷ್ಟು ಒಳಗೆ ಹೋದಂತೆ ರೈತರ ಬೆಚ್ಚಗಿನ ನಡವಳಿಕೆಯಿಂದ ಚಳಿಯು ಮಾಯವಾಯಿತು. ಈ ರೈತರು 60 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಇಲ್ಲಿದ್ದು ಕಟ್ಟಿರುವ ಚಳವಳಿಯು ಇನ್ನೂ ಎಷ್ಟೋ ಚಳವಳಿಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಮ್ಮ ಮೊದಲ ಅನಿಸಿಕೆಯು ಅದುವರೆಗೆ ಮನದಲ್ಲಿ ಮೂಡಿರುವ ಪೂರ್ವಗ್ರಹಗಳಿಂದ ರೂಪುಗೊಳ್ಳುತ್ತದೆ ಮತ್ತು ಪಂಜಾಬಿನ ಕುರಿತು ಅಂತಹವು ಸಾಕಷ್ಟಿವೆ. ಪಂಜಾಬಿನ ಸಂಪತ್ತು ಮತ್ತು ಮಹಿಳೆಯರ ಕುರಿತಂತೆ ಇರುವ ಪಾಪ್ ಹಾಡುಗಳು ಮತ್ತು ರ್‍ಯಾಪ್ ಸಂಗೀತವು ಬಹಳ ಸಾಮಾನ್ಯ. ಆದರೆ ಈ ಚಳವಳಿಯು ವಿದೇಶದಿಂದ ಬಂದ ಸಂಪತ್ತು ಮತ್ತು ಉಪಭೋಗಿತನದಲ್ಲಿ ಬಹುಕಾಲ ಮುಳುಗಿದ್ದ ಪಂಜಾಬಿನ ಇನ್ನೊಂದು ಮುಖದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಬಹುತೇಕ ಕುಟುಂಬಗಳ ಒಬ್ಬ ಸದಸ್ಯ ವಿದೇಶದಲ್ಲಿದ್ದು, ಇನ್ನೊಬ್ಬರು ಕೃಷಿ ಮಾಡುತ್ತಿರುವುದನ್ನು ನೀವು ನೋಡಬಹುದು.

ಈ ಚಳವಳಿಯು ಪಂಜಾಬನ್ನು ಎಷ್ಟರಮಟ್ಟಿಗೆ ಬಡಿದೆಬ್ಬಿಸಿದೆಯೆಂದರೆ, ತಪ್ಪುದಾರಿಗೆ ಹೋಗಿರುವವರನ್ನೂ ಸರಿದಾರಿಗೆ ಕರೆತರುವ ರೀತಿಯ ಬದಲಾವಣೆಗೆ ಕಾರಣವಾಗಿ, ಸರ್ವರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಿದೆ. ಪ್ರತೀ ಮೂಲೆಗೂ ಏನೋ ಒಂದು ಸೌಲಭ್ಯ ಕಲ್ಪಿಸುವ ಜನರಿದ್ದಾರೆ. ಅದು ಊಟದ ಮನೆಯಾಗಿರಬಹುದು, ಶೂ ಪಾಲಿಷ್, ಕಾಲಿನ ಮಸಾಜ್, ಹೊದಿಕೆಗಳು, ಟೆಂಟುಗಳು ಇತ್ಯಾದಿ ಇತ್ಯಾದಿ. ನೀವು ದೂರದ ಊರಿಂದ ಹೋರಾಟವನ್ನು ಬೆಂಬಲಿಸಲು ಬಂದಿದ್ದೀರೆಂದು ಗೊತ್ತಾದರೆ ಇಲ್ಲಿನ ಜನರು ಬಹಳ ಸಂತಸಗೊಳ್ಳುತ್ತಾರೆ.
ಹಿಂದೆಂದೂ ಹೋರಾಟದಲ್ಲಿ ಪಾಲ್ಗೊಂಡ ಅನುಭವವಿಲ್ಲದ ರೈತರು ಈ ಸಾರಿಯ ಹೋರಾಟದಲ್ಲಿ ಸೇರಿಕೊಂಡು ಸಂಗಾತಿಗಳು, ಸ್ನೇಹಿತರು, ಕುಟುಂಬಸ್ಥರೇ ಆಗಿ ಹೋಗಿದ್ದಾರೆ. ಈ ಆಂದೋಲನದಲ್ಲಿ ಅವರು ಹೊಸ ಮನುಷ್ಯರೇ ಆಗಿದ್ದಾರೆ. ಕೆನಡಾಕ್ಕೆ ಹೋಗುವುದಕ್ಕಿಂತ ಸಾರ್ಥಕವಾದ ಹೊಸ ಬದುಕು ಇಲ್ಲಿನ ಬಾಂಧವ್ಯದಲ್ಲಿದೆ ಎನ್ನುವಂತಾಗಿದೆ. ಸಮಾಜದ ಕುರಿತಾದ ವಿಶೇಷ ಚಿಂತನೆಯ ಅಗತ್ಯವಿಲ್ಲದಂತೆ ಗಂಡು ಹೆಣ್ಣಿನ ಪಾತ್ರಗಳಲ್ಲೂ ನಿಧಾನದ ಬದಲಾವಣೆ ಕಾಣಸಿಗುತ್ತದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುತ್ತಾ ಗಂಡು ಹೆಣ್ಣುಗಳಿಬ್ಬರೂ ಒಟ್ಟಿಗೆ ಅಡಿಗೆ ಮಾಡುತ್ತಾರೆ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು ಹಾಗೂ ವಿಶ್ವವಿದ್ಯಾಲಯಗಳ ಖಾಸಗೀಕರಣದ ಕುರಿತು ಚರ್ಚಿಸುವ ವಿದ್ಯಾರ್ಥಿಗಳು ಈ ಹೋರಾಟದ ನಂತರ ಮೂಡಿಬರುವ ಹೊಸ ಹೋರಾಟಗಳ ಕುರಿತು ಭರವಸೆಯಿಂದ ಚರ್ಚಿಸುತ್ತಾರೆ. ಚೆ, ಕ್ಯಾಸ್ಟ್ರೋ ಮತ್ತು ಚೇತನ್ ಭಗತ್‌ರನ್ನೂ ಅವರಲ್ಲಿ ಓದುತ್ತಿದ್ದಾರೆ. ಸಂಜೆಯ ಚಹಾ ಮತ್ತು ತಡರಾತ್ರಿಯವರೆಗಿನ ಚರ್ಚೆಗಳು ದೇಶವನ್ನು ಕಾಡುತ್ತಿರುವ ಸಂಗತಿಗಳು ಮತ್ತು ಅಸಮಾನತೆ, ಜಾತಿ, ಜೆಂಡರ್‌ಗಳ ಸಂಕೋಲೆಗಳನ್ನು ಒಡೆದು ಅವರವರ ಹಕ್ಕುಗಳನ್ನು ಪಡೆಯುವ ಬಗ್ಗೆ ನಡೆಯುತ್ತವೆ.

ಇಂದು ನಡುಗುತ್ತಿರುವ ಗಣರಾಜ್ಯದಲ್ಲಿ ಜನರು ಚಪ್ಪಾಳೆಗಳ ಮೂಲಕ ಬೆಚ್ಚಗಾಗುತ್ತಿಲ್ಲ; ಬದಲಿಗೆ ಅವರ ಜಠರದಲ್ಲಿ ಉರಿಯುತ್ತಿರುವ ಬೆಂಕಿ ಮತ್ತು ಹೃದಯದ ಬೆಚ್ಚಗಿನ ಭಾವನೆಗಳು ಬೆಚ್ಚಗಾಗಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...