ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶದಾದ್ಯಂತ ಶನಿವಾರ ಚಕ್ಕಾ ಜಾಮ್(ರಸ್ತೆ ದಿಗ್ಭಂಧನ) ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಿಭಟನಾ ನಿರತ ರೈತರ ಕರೆಗೆ ದೇಶದಾದ್ಯಂತ ಜನರು ಓಗೊಟ್ಟಿದ್ದು ಯಶಸ್ವಿ ರಸ್ತೆ ದಿಗ್ಬಂಧನ ನಡೆಯುತ್ತಿದೆ.
ದೆಹಲಿ, ಉತ್ತರ ಪ್ರದೇಶ, ಉತ್ತರಖಂಡ್ ಹೊರತುಪಡಿಸಿ ಉಳಿದ ರಾಜ್ಯಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರೈತರು ಕರೆ ನೀಡಿದ್ದರು. ಇದಕ್ಕೆ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಜನಬೆಂಬಲ ವ್ಯಕ್ತವಾಗಿದೆ. ಅದರಲ್ಲೂ ಪಂಜಾಬ್, ಹರಿಯಾಣ, ರಾಜಸ್ಥಾನ್ ರಾಜ್ಯಗಳಲ್ಲಿ ಭಾರಿ ಜನಬೆಂಬಲ ವ್ಯಕ್ತವಾಗಿದೆ.
ಪಂಜಾಬ್‌ನ ಮೆಹಲ್ ಕಲನ್ ಬರ್ನಾಲ ಟೋಲ್ ಪ್ಲಾಜಾ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಲೈವ್ ವಿಡಿಯೋ ನೋಡಿ.
ಹರಿಯಾಣದ ಕರ್ನಾಲ್‌ನಲ್ಲಿ ರಸ್ತೆ ದಿಗ್ಭಂಧನ ನಡೆಸಿ ರೈತರಿಗೆ ಬೆಂಬಲ ನೀಡಲಾಯಿತು.
Visuals from Chakka Jam today: Karnal, Haryanapic.twitter.com/nH8ZZMseSZ
— Sandeep Singh (@PunYaab) February 6, 2021
ನಾಸಿಕ್-ಔರಂಗಾಬಾದ್ ಹೆದ್ದಾರಿಯನ್ನು ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯು, ನಾಸಿಕ್‌ನ ನಿಫಾದ್‌ನಲ್ಲಿ ತೆಡೆದು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ದೆಹಲಿ-ಚಂಡೀಘಡ್ ಹೆದ್ದಾರಿಯನ್ನು ರೈತರು ಕರ್ನಾಲ್‌ನಲ್ಲಿ ತಡೆಹಿಡಿದಿದ್ದಾರೆ.
ಹರಿಯಾಣದಲ್ಲಿರುವ ಭಿವಾನಿ-ಜಿಂದ್ ಹೆದ್ದಾರಿಯನ್ನು ರೈತರು ತಡೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 44 ಅನ್ನು ಲೂಧಿಯಾನದಲ್ಲಿ ತಡೆಯಲಾಗಿದೆ. ಅಲ್ಲದೆ ಅಮೃತಸರ ಪ್ರವೇಶ ಮಾಡುವ ಹೆದ್ದಾರಿ ಬಳಿ ಭಾರಿ ಸಂಖ್ಯೆಯ ರೈತರು ನರೆದಿದ್ದಾರೆ. ಶಹಜಹಾನ್‌ಪುರ್ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲಾಗಿದೆ.
ಹರಿಯಾಣದ ಫತೇಹಾಬಾದ್ ಜಿಲ್ಲೆಯ ’ಲಾಲ್ ಬತ್ತಿ’ ಹೆದ್ದಾರಿಯನ್ನು ಬಂದ್ ಮಾಡಲಾಯಿತು.

ಹರಿಯಾಣದ ಮಹಾಮ್-ಗೊಹಾನ ರಸ್ತೆಯನ್ನು ತಡೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ-1 ಅನ್ನು ರೈತರು ಕರ್ನಾಲ್‌ನಲ್ಲಿ ತಡೆದರು.
ಉಕ್ಲಾನಾ ಮಂಡಿಯ ಸುರೇವಾಲಾ ಚೌಕ್‌ನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಜಮಾಯಿಸಿದ್ದಾರೆ. ರಸ್ತೆ ತಡೆಯನ್ನು ಮಾಡಲಿದ್ದಾರೆ.
किसानों के बुलाए गए जाम के समर्थन में उकलाना मंडी के सुरेवाला चौक पर भारी तादाद में किसान जमा हुए हैं. किसानों तिरंगा हाथों में लेकर सुरेवाला चौक पर पहुंचे हैं. pic.twitter.com/tSnYulCXYY
— Praveen (@praveenpscs) February 6, 2021
ಪಾಣಿಪತ್-ರೋಹ್ಟಕ್ ರಸ್ತೆಯನ್ನು ರೈತರು ತಡೆದಿದ್ದಾರೆ. ರೋಹ್ಟಕ್-ಹಿಸಾರ್ ರಸ್ತೆಯಲ್ಲಿರುವ ಮದೀನಾ ಟೋಲ್‌ನಲ್ಲಿ ರೈತರು ಸಭೆ ನಡೆಸಿ ಅಲ್ಲಿ ರಸ್ತೆ ತಡೆ ಮಾಡಿದ್ದಾರೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಗ್ರಾಮವಾದ ನಿಂಡಾನಾದಲ್ಲಿನ ಹೆದ್ದಾರಿಯನ್ನು ರೈತರು ದಿಗ್ಬಂಧನ ಮಾಡಿದ್ದಾರೆ.
ಸಂಗೂರ್‌ನ ಕಲಾಝಾರ್ ಟೋಲ್ ಪ್ಲಾಝಾದಲ್ಲಿ ರೈತರು ರಸ್ತೆ ತಡೆ ಮಾಡಿ ದಿಗ್ಬಂಧನ ಮಾಡಿದ್ದಾರೆ.

ಹಿಸಾರ್-ಚಂಡೀಗಡ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಡ್ಡೋಪಟ್ಟಿ ಟೋಲ್ ಪ್ಲಾಜಾದಲ್ಲಿ ರೈತರು ರಸ್ತೆ ದಿಗ್ಭಂಧನ ಮಾಡಿದ್ದಾರೆ. ಅಲ್ಲಿನ ಚೌಧರಿವಾಸ್, ಮಯ್ಯದ್ ಮತ್ತು ಲ್ಯಾಂಡ್ಹಾಲಿ ಟೋಲ್ ಪ್ಲಾಜಾಗಳಲ್ಲಿಯೂ ಸಹ ಚಕ್ಕಾ-ಜಾಮ್ ಮಾಡಲಾಗಿದೆ.
ಪಂಜಾಬ್‌ನ ಪಾಟಿಯಾಲದ ಹಳ್ಳಿಯಾದ ಬರ್ನ್‌ನಲ್ಲಿ ರೈತರು ರಸ್ತೆ ತಡೆ ನಡೆಸಿದ್ದಾರೆ.
ರಾಜಸ್ಥಾನ್‌ನ ನೋಹರ್‌ನಲ್ಲಿ ರೈತರು ರಸ್ತೆ ತಡೆ ನಡೆಸಿದರು.

AIKMS ಸಂಘಟನೆಯು ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ರಸ್ತೆತಡೆಯನ್ನು ನಡೆಸಿ ರೈತರಿಗೆ ಬೆಂಬಲ ಸೂಚಿಸಿತು.
ಹೈದರಾಬಾದ್‌ನಲ್ಲಿ ರೈತರನ್ನು ಬೆಂಬಲಿಸಿ ರಸ್ತೆ ತಡೆಯನ್ನು ಮಾಡಲಾಯಿತು.
ಇದನ್ನೂ ಓದಿ: ರೈತ ಹೋರಾಟ: ಏನಿದು ‘ಚಕ್ಕಾ ಜಾಮ್’ ರಸ್ತೆ ತಡೆ ಪ್ರತಿಭಟನೆ? ಹೇಗಿರುತ್ತದೆ?


