Homeಮುಖಪುಟರಾಜ್ಯಾದ್ಯಂತ ಯಶಸ್ವಿಯಾಗಿ ಜರುಗಿದ ಸಂಚಾರ ಸ್ಥಗಿತ ಹೋರಾಟ: ಹೆದ್ದಾರಿ ಬಂದ್ ಚಿತ್ರಗಳು

ರಾಜ್ಯಾದ್ಯಂತ ಯಶಸ್ವಿಯಾಗಿ ಜರುಗಿದ ಸಂಚಾರ ಸ್ಥಗಿತ ಹೋರಾಟ: ಹೆದ್ದಾರಿ ಬಂದ್ ಚಿತ್ರಗಳು

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಇಂದು ಚಕ್ಕಾ ಜಾಮ್ ಹೋರಾಟ ನಡೆದಿದೆ. ದೆಹಲಿಯ ರೈತರ ಮೇಲಿನ ಹಲ್ಲೆಯನ್ನು ಒಕ್ಕೊರಲಿನಿಂದ ಖಂಡಿಸಲಾಗಿದೆ.

- Advertisement -
- Advertisement -

ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ 73 ದಿನಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರು ನೀಡಿದ ಚಕ್ಕಾ ಜಾಮ್ (ಸಂಚಾರ ಸ್ಥಗಿತ ಹೋರಾಟ) ಗೆ ಕರ್ನಾಟಕದ ರೈತರು ಅಭೂತಪೂರ್ವವಾಗಿ ಬೆಂಬಲಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಾದ್ಯಂತ ಆರಂಭಗೊಂಡ ಹೆದ್ದಾರಿ ಬಂದ್ ಹೋರಾಟ ಬಹುತೇಕ ಯಶಸ್ವಿಯಾಗಿದೆ.

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಇಂದು ಚಕ್ಕಾ ಜಾಮ್ ಹೋರಾಟ ನಡೆದಿದೆ. ದೆಹಲಿಯ ರೈತರ ಮೇಲಿನ ಹಲ್ಲೆಯನ್ನು ಒಕ್ಕೊರಲಿನಿಂದ ಖಂಡಿಸಲಾಗಿದೆ.

ಸಿಂಧನೂರಿನ ಶ್ರೀಪುರಂ ಜಂಕ್ಷನ್ ನಲ್ಲಿ ಹೆದ್ದಾರಿ ಬಂದ್ ಯಶಸ್ವಿ

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ, ಹೊಸದಿಲ್ಲಿಯಲ್ಲಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ದಿಟ್ಟ ಹೋರಾಟವನ್ನು ಬೆಂಬಲಿಸಿ ದಿನಾಂಕ: 6.02.2021 ಶನಿವಾರ ಶ್ರೀಪುರಂಜಂಕ್ಷನಲ್ಲಿ ರೈತ ವಿರೋಧಿ ಕೃಷಿ ಕಾನೂನು ರದ್ದಿತಿ ಹೋರಾಟ ಸಮಿತಿ ಸಿಂಧನೂರು ವತಿಯಿಂದ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು. ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡಸಿದ ಪ್ರತಿಭಟನೆಕಾರರು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೋರಟಗಾರರಾದ ಡಿ ಎಚ್ ಕಂಬಳಿ ಮಾತನಾಡಿ, “ಕಾರ್ಪೊರೇಟ್ ಕಂಪನಿಗಳಿಗೆ ದೇಶ ಒತ್ತೆ ಇಡುವ ಕಾರಣಕ್ಕಾಗಿ ನರೇಂದ್ರ ಮೋದಿ ಸರ್ಕಾರ ಈ ರೀತಿ ಕರಾಳ ಕಾನೂನುಗಳನ್ನು ತರುವುದರ ಮುಖಾಂತರ ಕೋಟ್ಯಂತರ ರೈತರ ಹೊಟ್ಟಗೆ ಚೂರಿ ಹಾಕಲು ಹೊರಟಿದ್ದಾರೆ. ಅದಕ್ಕೆ ನಾವು ಅವಕಾಸ ನೀಡುವುದಿಲ್ಲ” ಎಂದರು.

ರಸ್ತೆ ತಡೆಯ ಕಾರಣಕ್ಕಾಗಿ ರಸ್ತೆಯ ಎರಡು ಬದಿಯಲ್ಲಿ ಕಿಲೋಮಿಟರ್‌ಗಟ್ಟಲೆ ವಾಹನ ನಿಲುಗಡೆಯಾಗಿದ್ದವು ಹೋರಾಟದಲ್ಲಿ ಒಕ್ಕೂಟದ ಸಂಚಾಲಕ ರಾದ ಚೆಂದ್ರಶೇಖರ್ ಗೊರೆಬಾಳ, ಸಮುದಾಯದ ಎಸ್ ದೇವೇಂದ್ರಗೌಡ, ರೈತ ಸಂಘಟನೆಯ ಶರಣಪ್ಪ ಮಳ್ಳಿ, ಅಮೀನ್ ಪಾಷ, ದಿದ್ದಿಗಿ ಶಿವರಾಜ್, ಬಸವಕೇಂದ್ರದ ವೀರಭದ್ರ ಗೌಡ ಅಮರಾಪುರ, ಜಿಲಾ ನಿಪಾಷ ಜಾಹಗೀರದಾರ್, ಮನುಜಮತ ಬಳಗದ ಖಾದರ ಸುಬಾನಿ, ಬಸವರಾಜ ಬಾದರ್ಲಿ, ಸಮದ್ ಚೌದ್ರಿ, ಮಂಜುನಾಥ ಗಾಂಧಿನಗರ, ಬಿ.ಎನ್ ಯರದಿಹಾಳ, ಬಸರಾಜ ಎಕ್ಕಿ, ರಮೇಶ ಪಾಟೀಲ್ ದೇಶಪ್ರೇಮಿ ಯುವಾಂದೋಲನದ ಚಾಂದ್ ಪಾಷ್, ಯಂಕಪ್ಪ ಕೆಂಗಲ್ ಸೇರಿದಂತೆ ಇತರರಿದ್ದರು.

ಕೋಲಾರ ವರದಿ

ದೆಹಲಿಯ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಗಡಿಗಳಲ್ಲಿ ಇಂಟರ್ನೆಟ್ ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬಂಗಾರಪೇಟೆ – ಕೋಲಾರ ರಸ್ತೆ ತಡೆ ಮಾಡಲಾಯಿತು. ಈ ವೇಳೆ ಹತ್ತಾರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ಪ್ರತಿಭಟನೆ

ರಾಜ್ಯದ್ಯಾಂತ ನಡೆದ ಹೆದ್ದಾರಿ ತಡೆಯ ಚಿತ್ರಗಳು ಕೆಳಗಿನಂತಿವೆ.

ದಾವಣಗೆರೆಯಲ್ಲಿ ಬೃಹತ್ ಹೆದ್ದಾರಿ ತಡೆ ಹೋರಾಟ
ವಿಜಯಪುರದಲ್ಲಿ ರಸ್ತೆ ತಡೆ
ಬಳ್ಳಾರಿಯಲ್ಲಿ ಹೋರಾಟ
ಭದ್ರಾವತಿಯಲ್ಲಿ ಹೋರಾಟ
ಯಲಹಂಕದಲ್ಲಿ ಚಕ್ಕಾ ಜಾಮ್
ಚಿಕ್ಕಬಳ್ಳಾಪುರದಲ್ಲಿ ಹೋರಾಟ
ರಾಯಚೂರಿನಲ್ಲಿ ರಸ್ತೆ ತಡೆ
ಹರಪನಹಳ್ಳಿಯಲ್ಲಿ ರಸ್ತೆ ತಡೆ
ರಾಯಚೂರಿನಲ್ಲಿ ಹೆದ್ದಾರಿ ತಡೆ
ನಾಗಮಂಗಲದಲ್ಲಿ ಹೋರಾಟ
ಬೆಳಗಾವಿಯಲ್ಲಿ ಹೋರಾಟ
ನಂಜನಗೂಡಿನಲ್ಲಿ ಪ್ರತಿಭಟನೆ
ಮೈಸೂರಿನಲ್ಲಿ ರಸ್ತೆ ತಡೆ, ಬಂಧನ
ಧಾರವಾಡದಲ್ಲಿ ನಡೆಯುತ್ತಿರುವ ಪ್ರತಿಭಟನೆ
ಕಲಬುರಗಿಯಲ್ಲಿ ರಾಸ್ತ ರೋಕ್
ಚಿತ್ರದುರ್ಗದಲ್ಲಿ ರೈತರ ಪ್ರತಿಭಟನೆ
ಹಾಸನದಲ್ಲಿ ರಸ್ತೆ ತಡೆ
ಕುರುಗೋಡಿನಲ್ಲಿ ರೈತರ ಪ್ರತಿಭಟನೆ

ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...