ಕಳೆದ ನವೆಂಬರ್‌ನಿಂದ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರು, ಶನಿವಾರ(ಇಂದು) ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ದ ಪ್ರತಿಭಟಿಸಲು ಮೂರು ಗಂಟೆಗಳ ಚಕ್ಕಾ ಜಾಮ್‌ಗೆ ಕರೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರವು ತನ್ನ ದಬ್ಬಾಳಿಕೆಯನ್ನು ಮತ್ತೇ ಮುಂದುವರೆಸಿದೆ.
ಗೃಹ ವ್ಯವಹಾರಗಳ ಸಚಿವಾಲಯವು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್ನೆಟ್ ಸ್ಥಗಿತವನ್ನು ಮುಂದುವರೆಸಿದ್ದು, ಅದು ಈ ದಿನದ ಅಂತ್ಯದವರೆಗೆ ಇರುತ್ತದೆ ಎಂದು ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಚಕ್ಕಾ ಜಾಮ್‌ಗಿಂತ ಒಂದು ದಿನ ಮುಂಚಿತವಾಗಿಯೆ ಹೊರಡಿಸಲಾಗಿತ್ತು.
ಇದನ್ನೂ ಓದಿ: ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ
“ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಮತ್ತು ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಲಾಗಿದೆ” ಎಂದು ಫೆಬ್ರವರಿ 5 ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಸಿಂಘು, ಗಾಜಿಪುರ, ಟಿಕ್ರಿ ಗಡಿಗಳು ಸುತ್ತಮುತ್ತಲಿನ ಪ್ರದೇಶಗಳು ಈ ಅಮಾನತು ಆದೇಶದ ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?
ಜನವರಿ 26 ರಂದು ರೈತರ ಟ್ರಾಕ್ಟರ್ ರ್‍ಯಾಲಿಯಲ್ಲಿ ನಡೆದ ಅಹಿತಕರ ಘಟನೆಯ ಗೃಹ ಸಚಿವಾಲಯವು ಮೊದಲ ಬಾರಿಗೆ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಅಂದಿನಿಂದ, ಈ ಗಡಿ ಪ್ರದೇಶಗಳಲ್ಲಿ ನಿಯಮಿತವಾಗಿ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತಿದೆ.
ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡವನ್ನು ಹೊರತುಪಡಿಸಿ ದೇಶಾದ್ಯಂತ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ತಡೆಹಿಡಿಯುವಂತೆ ಪ್ರತಿಭಟನಾ ನಿರತ ರೈತರು ಕರೆ ನೀಡಿತ್ತು.
ಇದನ್ನೂ ಓದಿ: ‘ಕಾಣೆಯಾದವರ’ ಪರ ಹೋದವರನ್ನೂ ಸಿಲುಕಿಸುತ್ತಿರುವ ದೆಹಲಿ ಪೊಲೀಸರು: ವಕೀಲರಿಂದ ಫೆ. 8ಕ್ಕೆ ಪ್ರತಿಭಟನೆ


