ಇಂದು ಸಾಮಾಜಿಕ ಜಾಲತಾಣಗಳಲ್ಲಿ #andolanjeevi ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅದರೊಟ್ಟಿಗೆ ಮೋದಿಯವರ ಹಳೆಯ ಹೋರಾಟದ ಫೋಟೊಗಳನ್ನು ಹಂಚಿಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಹಾಗಾದ್ರೆ ಈ ಆಂದೋಲನ್ ಜೀವಿ ಅಂದ್ರೆ ಏನಂತ ನೋಡೋಣ ಬನ್ನಿ.
ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತು ಮಾತನಾಡಿದ ಪ್ರಧಾನಿ ಮೋದಿಯವರು “ದೇಶದಲ್ಲಿ ಆಂದೋಲನ್ ಜೀವಿ (ಹೋರಾಟಗಾರರು) ಎಂಬ ಹೊಸ ಸಮುದಾಯವೊಂದು ಹುಟ್ಟಿಕೊಂಡಿದೆ. ಪ್ರತಿ ಪ್ರತಿಭಟನೆಯಲ್ಲಿಯೂ ಅವರನ್ನು ನೋಡಬಹುದು, ಅವರು ದೇಶಕ್ಕೆ ಪರವಾಲಂಬಿಯಾಗಿದ್ದಾರೆ” ಎಂದು ಹೇಳಿದ್ದಾರೆ.
ಮುಂದುವರಿದು ಶ್ರಮ ಜೀವಿ ಮತ್ತು ಬುದ್ದಿಜೀವಿ ಎಂಬ ಪದಗಳನ್ನು ಕೇಳಿದ್ದೇವೆ. ಆದರೆ, ಈ ದೇಶದಲ್ಲಿ ಕೆಲವು ಸಮಯದಿಂದ ಆಂದೋಲನ್ ಜೀವಿ ಎಂಬ ಹೊಸ ಅಸ್ತಿತ್ವವು ಬಂದಿರುವುದನ್ನು ನಾನು ನೋಡುತ್ತಿದ್ದೇನೆ. ವಿದ್ಯಾರ್ಥಿ ಹೋರಾಟದಲ್ಲಿಯೂ ಇರುತ್ತಾರೆ, ರೈತರ ಹೋರಾಟದಲ್ಲಿಯೂ ಇರುತ್ತಾರೆ, ವಕೀಲರ ಅಥವಾ ಕಾರ್ಮಿಕರ ಹೋರಾಟದಲ್ಲಿಯೂ ಇರುತ್ತಾರೆ. ಕೆಲವೊಮ್ಮೆ ವೇದಿಕೆಯ ಮುಂದಿದ್ದರೆ ಕೆಲವೊಮ್ಮೆ ಹಿಂದಿದ್ದು ಕೆಲಸ ಮಾಡುತ್ತಾರೆ. ಹೋರಾಟಗಳಿಲ್ಲದೆ ಅವರು ಬದುಕುವುದಿಲ್ಲ. ನಾವು ಅಂತಹ ಜನರನ್ನು ಗುರುತಿಸಬೇಕು ಮತ್ತು ಅವರಿಂದ ರಾಷ್ಟ್ರವನ್ನು ರಕ್ಷಿಸಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿಯವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಡಿಪಾರ್ ಜೀವಿಯಾಗುವುದಕ್ಕಿಂತ ಆಂದೋಲನ್ ಜೀವಿಯಾಗುವುದು ಉತ್ತಮ ಎಂದು ಹಲವರು ಹೇಳಿದರೆ, ಮತ್ತೆ ಕೆಲವರು ಮೋದಿಯವರೆ ನೀವು ಸಹ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದಿದ್ದು ಎಂಬುದನ್ನು ಮರೆಯಬೇಡಿ ಎಂದು ಛೇಡಿಸಿದ್ದಾರೆ. ಮೋದಿಯವರು ಭಾಗವಹಿಸಿದ ಹೋರಾಟದ ಹಳೆಯ ಫೋಟೊಗಳನ್ನು ಹಾಕಿ #andolanjeevi ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ರೋಲ್ ಮಾಡುತ್ತಿದ್ದಾರೆ.
I am an Andolan Jivi because I care
— T M Krishna (@tmkrishna) February 8, 2021
ನಾನು ಕಾಳಜಿವಹಿಸುತ್ತೇನೆ ಹಾಗಾಗಿ ನಾನು ಆಂದೋಲನ್ ಜೀವಿ ಎಂದು ಖ್ಯಾತ ಸಂಗೀತಗಾರ ಟಿ.ಎಂ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.
Made something for the #andolanjivi people. pic.twitter.com/Tm7WyWacqu
— Mando ? (@MandoMunda) February 8, 2021
ಶಾಂತಿಯುತವಾಗಿ ಹೋರಾಟ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಸಂವಿಧಾನದ 19(1)(ಎ) ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 19(1)(ಬಿ) ನಿರಾಯುಧವಾಗಿ ಪ್ರತಿಭಟಿಸುವ, ಹರತಾಳ ಆಚರಿಸುವ ಹಕ್ಕು ನೀಡಿದೆ ಎಂದು ಮಂಡೋ ಎಂಬುವವರು ಟ್ವೀಟ್ ಮಾಡಿದ್ದಾರೆ.
The original Andolan Jeevi at Mahad Satyagraha!
Be an Andolan Jeevi like Dr. Ambedkar: Educate, Agitate, Organize! pic.twitter.com/RfCro02ORD
— Jignesh Mevani (@jigneshmevani80) February 8, 2021
ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ “ಮಹಾಡ್ ಸತ್ಯಾಗ್ರಹದ ಮೂಲ ಆಂದೋಲನ್ ಜೀವಿ ಇವರು. ಅಂಬೇಡ್ಕರ್‌ರವರಂತೆ ಆಂದೋಲನ್ ಜೀವಿಯಾಗಿ, ಶಿಕ್ಷಣ ಪಡೆಯಿರಿ, ಸಂಘಟಿತರಾಗಿ ಮತ್ತು ಹೋರಾಡಿ” ಎಂದು ಕರೆ ನೀಡಿದ್ದಾರೆ.
The March on Washington, August 28, to advocate for the civil and economic rights of African Americans Dr. Martin Luther King Jr., standing in front of the Lincoln Memorial, delivered his historic "I Have a Dream" speech in which he called for an end to racism. #andolanjeevi pic.twitter.com/CPGePbp8eP
— Anjolie Singh (@AnjolieSingh) February 8, 2021
ಇವಿಷ್ಟು ನಾವು ಆಂದೋಲನ್ ಜೀವಿಗಳು ಎಂದು ಹೆಮ್ಮೆಯಿಂದ ಹೇಳಿಕೊಂಡರೆ ಇನ್ನು ಕೆಲವರು ಮೋದಿಯವರು ಸಹ ಹೋರಾಟ ಮಾಡಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ತಮ್ಮ ದಾರಿಯನ್ನು ಮರೆತು ಬೇರೆಯವರನ್ನು ಟೀಕಿಸುತ್ತಿದ್ದಾರೆ. ಈ ಇಬ್ಬಂದಿತನವನ್ನು ಖಂಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮೋದಿಯವರ ಹಳೆಯ ಫೋಟೊಗಳನ್ನು ಹಾಕಿ ಟ್ರೋಲ್ ಮಾಡಿದ್ದಾರೆ. ಅಂತಹ ಕೆಲವು ಇಲ್ಲಿವೆ.
“Andolanjivi” defined by @PMOIndia spotted pic.twitter.com/gZUGwtfRCO
— Swati Chaturvedi (@bainjal) February 8, 2021
Evolution of an old "Andolan Jeevi" pic.twitter.com/43l1YJQf1X
— Ravi Nair (@t_d_h_nair) February 8, 2021
We proudly say that we are#andolanjivi not Chokidaar like you:;) pic.twitter.com/NixLeCrOXf
— Vishal Lochab Farmer (@VishalLochab6) February 8, 2021
ಗಡ್ಡ ಬೆಳೆದಂತೆ ಮೋದಿಜಿಗೆ ಮೆಮರಿ ಲಾಸ್ ಸಮಸ್ಯೆ ಏನಾದರೂ ಶುರುವಾಗಿದೆಯೇ? ತಾವು ಮಾಡಿದ ಟ್ವೀಟ್ ಗಳನ್ನು ತಾವೇ ಮರೆತುಹೋದರೆ ಹೆಂಗೆ? ಅಮ್ನೇಷಿಯಾಗೆ ಟ್ರೀಟ್ ಮೆಂಟ್ ಇರುವುದರಿಂದ ಆ ಕಡೆ ಗಮನಹರಿಸಲಿ ಎಂದು ಕಾಳಜಿಯಿಂದ ವಿನಂತಿಸುತ್ತೇನೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು. pic.twitter.com/qKYh2ohIa0
— Dinesh Kumar Dinoo (@dinoosacham) February 8, 2021
Be cautious of people whose actions dont match there words..#andolanjivi pic.twitter.com/PGBEu0UiUU
— South Goa Congress (@INCSGoa) February 8, 2021
#andolanjivi from Bollywood pic.twitter.com/QEZDNyH0pq
— Exsecular (@ExSecular) February 8, 2021
#andolanjivi https://t.co/IOKHo8iRuj
— Mohammed Zubair (@zoo_bear) February 8, 2021
#andolanjivi https://t.co/ELSaVWsVzU
— Mohammed Zubair (@zoo_bear) February 8, 2021
ಇದನ್ನೂ ಓದಿ: ಕೇಂದ್ರ ಸರ್ಕಾರದ ಪರ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್: ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರ್ಕಾರ


