ಭಾರತದ ಹೆಸರಾಂತ ರಾಜಕೀಯ ಮತ್ತು ಸಾಂಸ್ಕೃತಿಕ ಜರ್ನಲ್ ದಿ ಕಾರವಾನ್ ಮ್ಯಾಗಜಿನ್ ಕೇಂಬ್ರಿಡ್ಜ್ ಹಾರ್ವರ್ಡ್ ವಿಶ್ವವಿದ್ಯಾನಿಲಯದ 2021 ರ ನೈಮನ್ ಫೌಂಡೇಶನ್ ಫಾರ್ ಜರ್ನಲಿಸಂನ ಲೂಯಿಸ್ ಎಮ್. ಲಿಯಾನ್ಸ್ ಪ್ರಶಸ್ತಿಗೆ ಭಾಜನವಾಗಿದೆ.
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಕುಸಿತದ ಕುರಿತು ಅನನ್ಯ ಮತ್ತು ರಾಜಿಯಾಗದ ವರದಿಗಾರಿಕೆಯನ್ನು ಗುರುತಿಸಿ ನೈಮನ್ ಫೆಲೋಗಳು ದಿ ಕಾರವಾನ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Congratulations to The Caravan, winner of the Lyons Award for Conscience and Integrity in Journalism. Nieman Fellows at @Harvard chose @thecaravanindia for its “uncompromising coverage of the erosion of human rights, social justice and democracy in India." https://t.co/OGx9bcotmB
— Nieman Foundation (@niemanfdn) February 9, 2021
ಕಾರವಾನ್ ಇತ್ತೀಚೆಗೆ ರಾಷ್ಟ್ರವ್ಯಾಪಿ ರೈತರ ಪ್ರತಿಭಟನೆಯನ್ನು ಸಮಗ್ರವಾಗಿ ವರದಿ ಮಾಡಿದೆ. ಹಾಗಾಗಿ ಅದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಕಾರವಾನ್‌ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಯಿಡಿಯುವ ಪ್ರಯತ್ನ ಸಹ ನಡೆದಿತ್ತು. ಅನೇಕ ಕಾರವಾನ್ ಉದ್ಯೋಗಿಗಳ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಲಾಗಿದೆ. ಈ ಎಲ್ಲಾ ಬೆದರಿಕೆಗಳನ್ನು ಮೀರಿ ಕಾರವಾನ್ ಆತ್ಮಸಾಕ್ಷಿ, ಸಮಗ್ರತೆ ಮತ್ತು ಬದ್ಧತೆಯನ್ನು ಕಾಪಾಡಿಕೊಂಡಿದೆ ಎಂದು ನೈಮನ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಾರವಾನ್ ಅವರ ಕೆಲಸವು “ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಅನಿವಾರ್ಯ ವರದಿಯ ಪರಂಪರೆಯ ಮತ್ತೊಂದು ಅಧ್ಯಾಯವಾಗಿದೆ” ಎಂದು ಹೇಳಿಕೆ ತಿಳಿಸಿದೆ.
ಲೂಯಿಸ್ ಎಮ್. ಲಿಯಾನ್ಸ್ ಪ್ರಶಸ್ತಿಯನ್ನು 1964 ರಲ್ಲಿ ಸ್ಥಾಪಿಸಲಾಯಿತು, ಮತ್ತು ಇದನ್ನು ನಿಮನ್ ಫೌಂಡೇಶನ್ ಕ್ಯೂರೇಟರ್ ಹೆಸರಿಡಲಾಗಿದೆ. ಭಾರತೀಯ ಪ್ರಕಟಣೆಯೊಂದು ಈ ಗೌರವವನ್ನು ಪಡೆಯುವುದು ಇದೇ ಮೊದಲಾಗಿದೆ.
ಇದನ್ನೂ ಓದಿ: ನಿಮ್ಮ ಮನೆ 20 ವರ್ಷ ಹಳೆಯದೇ? ಹಾಗಾದರೆ ಕೂಡಲೇ ಕೆಡವಿ ಮತ್ತೆ ಕಟ್ಟಿಸಿ!


