Homeಮುಖಪುಟಎಂಎಸ್‌ಪಿ ಕುರಿತು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ಎಐಕೆಎಂಎಸ್ ಆರೋಪ

ಎಂಎಸ್‌ಪಿ ಕುರಿತು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ಎಐಕೆಎಂಎಸ್ ಆರೋಪ

ಭಾರತೀಯ ಸಂಪನ್ಮೂಲಗಳನ್ನು ವಿದೇಶಿ ಕಂಪನಿಗಳಿಗೆ ಹಸ್ತಾಂತರಿಸುವುದನ್ನು ಪ್ರಧಾನ ಮಂತ್ರಿ “ಆತ್ಮ್ ನಿರ್ಭರ್” ಎಂದು ಕರೆಯುತ್ತಾರೆ.

- Advertisement -
- Advertisement -

ಪ್ರಮುಖ ರೈತ ಸಂಘಟನೆಗಳಲ್ಲಿ ಒಂದಾದ ಆಲ್ ಇಂಡಿಯಾ ಕಿಸಾನ್ ಮಜ್ದೂರ್ ಸಭಾ, (ಎಐಕೆಎಂಎಸ್) ಪ್ರಧಾನ ಮಂತ್ರಿಯವರು ರೈತರ ಕುರಿತು ಸಂಸತ್ತಿನಲ್ಲಿ ಅಪಹಾಸ್ಯ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಮ್ಮದೇ ದೇಶದ ಹೆಣಗಾಡುತ್ತಿರುವ ರೈತರನ್ನು ‘ವಿದೇಶಿ ವಿನಾಶಕಾರಿ ಸಿದ್ಧಾಂತಕ್ಕೆ’ (FDI-Foreign Destructive Ideology) ತಲೆ ಒಡ್ಡಿದವರು ಮತ್ತು ರೈತರ ಹೋರಾಟದ ವಿಷಯಗಳ ಬಗ್ಗೆ ಅಜ್ಞಾನವನ್ನು ಹೊಂದಿದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಹೇಳಿಕೆಗೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಹಕ್ಕೊತ್ತಾಯಗಳನ್ನು ಮುಂದಿಡುತ್ತಿರುವ ರೈತರಿಗೆ ‘ಆಂದೋಲನ್ ಜೀವಿ’ ಎಂಬ ಹಣೆಪಟ್ಟೆ ಕಟ್ಟುವುದು ರೈತರಿಗೆ ಮಾಡಿದ ಅವಮಾನ ಮತ್ತು ಅವರ ಅಧಿಕಾರದ ದುರುಪಯೋಗವಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಆಶಿಶ್ ಮಿತ್ತಲ್ ತಿಳಿಸಿದ್ದಾರೆ.

11 ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ರೈತರ ಹಕ್ಕುಗಳನ್ನು ಸ್ಪಷ್ಟವಾಗಿ ಹಾಳುಮಾಡುವ ವಿವಿಧ ಷರತ್ತುಗಳ ಕುರಿತು ರೈತ ಮುಖಂಡರು ಗಮನಸೆಳೆದಿದ್ದಾರೆ. ಇದೆಲ್ಲ ಪ್ರಧಾನ ಮಂತ್ರಿಗೆ ತಿಳಿದಿಲ್ಲ ಅನ್ನುವುದನ್ನು ಒಪ್ಪಲಾದೀತೆ? ಇದು ತಮಾಷೆಯಲ್ಲ, ಸತ್ಯವೆಂದರೆ ಪ್ರಧಾನಿ ಸಮಸ್ಯೆಯನ್ನು ಪರಿಹರಿಸಲು ಬಯಸುವುದಿಲ್ಲ ಮತ್ತು ಕಾರ್ಪೊರೇಟ್ ಲೂಟಿಯನ್ನು ಉತ್ತೇಜಿಸಲು ಮುಂದುವರಿಯಲು ಬಯಸುತ್ತಾರೆ ಎಂದು ಸಂಘಟನೆ ಆರೋಪಿಸಿದೆ.

ಮಂಡಿ ಬೈಪಾಸ್ ಕಾಯ್ದೆಯ ಸೆಕ್ಷನ್ 5 ಸ್ಪಷ್ಟವಾಗಿ ಹೇಳುವಂತೆ, ಖಾಸಗಿ ಮಂಡಿ ಮಾಲೀಕರು ಬೆಳೆ ದರವನ್ನು ಲೈನ್ (ರೂಟಿನ್) ವ್ಯಾಪಾರಕ್ಕೆ ಅನುಗುಣವಾಗಿ ನಿರ್ಧರಿಸುತ್ತಾರೆ, ಆದರೆ ಎಂಎಸ್ಪಿ ಪ್ರಕಾರವಲ್ಲ. ಇದರರ್ಥ ಖಾಸಗಿ ಮಂಡಿಗಳು ಪಂಜಾಬ್ ರೈತರಿಗೆ ಭತ್ತಕ್ಕಾಗಿ ಕ್ವಿಂಟಲ್‌ಗೆ 900 ರೂ. ದರವನ್ನು ನೀಡುತ್ತವೆ, ಆದರೆ 1886 ರೂ.ಗಳ ಎಂಎಸ್ಪಿ ನೀಡುವುದಿಲ್ಲ…..’ ಎಂದು ಎಐಕೆಎಂಎಸ್ ಆರೋಪಿಸಿದೆ.

ಸೆಕ್ಷನ್ 5 (2) ರ ಪ್ರಕಾರ ಖಾಸಗಿ ಕಂಪನಿಗಳು ತಮ್ಮದೇ ಆದ ವ್ಯಾಪಾರದ ನಿಯಮಗಳನ್ನು ನಿರ್ಧರಿಸುತ್ತವೆ ಮತ್ತು ಬೆಳೆ ವ್ಯಾಪಾರದ ಎಲ್ಲಾ ವಿವಾದ ಇತ್ಯರ್ಥಗಳು ಅವರ ನಿಯಮಗಳ ಪ್ರಕಾರವೇ ನಡೆಯುತ್ತವೆ, ಆದರೆ ಎಂಎಸ್ಪಿ ಪ್ರಜಾರ ಅಲ್ಲಿ ವಹಿವಾಟು ನಡೆಯುವುದೇ ಇಲ್ಲ’ ಎಂದು ಎಐಕೆಎಂಎಸ್ ವಿವರಣೆ ನೀಡಿದೆ.

‘ಗುತ್ತಿಗೆ ಕಾಯ್ದೆಯ ಸೆಕ್ಷನ್ 9, ರೈತರಿಗೆ ಸಾಲಕ್ಕಾಗಿ ಬ್ಯಾಂಕುಗಳೊಂದಿಗೆ ಭೂಮಿಯನ್ನು ಅಡಮಾನ ಇಡಲು ಆದೇಶಿಸುತ್ತದೆ. ಸೆಕ್ಷನ್ 14 (2 ಮತ್ತು 7) ರ ಪ್ರಕಾರ ಅವರು ಪ್ರಾಯೋಜಕ ಕಂಪನಿಯಿಂದ ಮುಂಗಡ ಪಡೆದರೆ, ವಸೂಲಿಗಳು ‘ಭೂ ಆದಾಯದ ಬಾಕಿ’ ಆಗಿರುತ್ತವೆ….’
‘ಈ ಕಾಯಿದೆಗಳು ಆಹಾರಧಾನ್ಯವನ್ನು ಅನಧಿಕೃತವಾಗಿ ಶೇಖರಿಸಲು, ಕಪ್ಪು ಮಾರುಕಟ್ಟೆ (ಬ್ಲಾಕ್ ಮಾರ್ಕೆಟ್) ಸೃಷ್ಟಿಸಲು, ಆಹಾರದ ಬೆಲೆಗಳನ್ನು ಹೆಚ್ಚಿಸಲು ಮತ್ತು ಸರ್ಕಾರಿ ಖರೀದಿ ಮತ್ತು ಪಿಡಿಎಸ್ ಅನ್ನು ರದ್ದುಗೊಳಿಸಲು ಪರವಾನಗಿ ನೀಡುತ್ತವೆ’ ಎಂದು ಎಐಕೆಎಂಎಸ್ ಆರೋಪಿಸಿದೆ.

‘ಈ ಕಾಯ್ದೆಗಳ ಯಾವುದೇ ವಿಳಂಬ ಅನುಷ್ಠಾನ / ಅಮಾನತು ಪ್ರಕ್ರಿಯೆಗಳನ್ನು ಸ್ವೀಕರಿಸಲು ರೈತರು ನಿರಾಕರಿಸುವುದು ಈ ಕಾಯಿದೆಗಳಲ್ಲಿನ ಅಂತಹ ನಿಬಂಧನೆಗಳು ಅವರ ವಿರುದ್ಧ ಇವೆ ಎಂಬ ಕಾರಣಕ್ಕೇ. ಈ ಕಾನೂನುಗಳನ್ನು ಖಾಸಗಿ ಬಂಡವಾಳಶಾಹಿಗಳ ಲಾಭಕ್ಕಷ್ಟೇ ಜಾರಿ ಮಾಡಲಾಗಿದೆ’ಎಂದು ಎಐಕೆಎಂಎಸ್ ಪ್ರಕಟನೆಯಲ್ಲಯ ತಿಳಿಸಿದೆ.

ಸಿಂಘು
ಟಿಕ್ರಿ ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿರುವುದು

ಭಾರತೀಯ ಪಶುಸಂಗೋಪನೆ ಮತ್ತು ಹಸಿರು ಕ್ರಾಂತಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಸತ್ಯವನ್ನು ತಪ್ಪಾಗಿ ನಿರೂಪಿಸಿದ್ದಾರೆ. ಹಾಲು ಉತ್ಪಾದನೆಯು ರೈತರಿಗೆ ಪ್ರಯೋಜನಕಾರಿಯಾಗಿದೆ, ಅಲ್ಲಿ ಸರ್ಕಾರ ಸಹಕಾರಿ ಹಾಲು ವಲಯವು ಲಾಭದಾಯಕ ದರವನ್ನು ನೀಡಿದರೆ, ಹಸಿರು ಕ್ರಾಂತಿಯು ಎಂಎಸ್ಪಿ ದರಗಳು ಮತ್ತು ಸರ್ಕಾರಿ ಸಂಗ್ರಹಣೆಯ ಮೇಲೆ ಮಾತ್ರ ಉಳಿದಿದೆ. ಈಗ ಈ ಕಾನೂನುಗಳ ಪ್ರಕಾರ ಸರ್ಕಾರಿ ಖರೀದಿ ಮತ್ತು ಸರ್ಕಾರಿ ಮಂಡಳಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಈ ವರ್ಗದ ರೈತರು ಸಹ ತಮ್ಮ ಭೂಮಿ ಮತ್ತು ಜೀವನೋಪಾಯದಿಂದ ವಂಚಿತರಾಗುತ್ತಾರೆ.

ಸರ್ಕಾರವು ಕಿವುಡ ಕಿವಿ ಹೊಂದಿದ್ದು, ಕಾರಣಗಳನ್ನು ಸ್ಪಷ್ಟಪಡಿಸಲು ಶಕ್ತಿ ಇಲ್ಲದ ಕಾರಣಕ್ಕೆ ರೈತರನ್ನು ದೂಷಿಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಎಐಕೆಎಂಎಸ್ ಹೇಳಿದೆ.
ಒಬ್ಬ ಪ್ರಧಾನ ಮಂತ್ರಿಯು ತನ್ನ ಜನರನ್ನು ಮರುಳು ಮಾಡಲು ಇಂತಹ ಮಟ್ಟಕ್ಕೆ ಇಳಿಯಬಹುದು ಎಂಬುದು ವಿಚಿತ್ರವಾಗಿದೆ! ದೇಶದ ಸಂಸತ್ತು ಭಾರತೀಯ ಕಾರ್ಪೊರೇಟ್‌ನೊಂದಿಗೆ ಸಂಪರ್ಕ ಹೊಂದಿದ್ದು, ವಿದೇಶಿ ಶೋಷಕ ಕಾರ್ಪೊರೇಟ್ ಶಕ್ತಿಗಳ ಗುಲಾಮ ಆಗಿರುವುದನ್ನು ಇದು ಸೂಚಿಸುತ್ತದೆಯಲ್ಲವೆ? ಸಂಪೂರ್ಣ ಕೃಷಿ ಪ್ರಕ್ರಿಯೆಗಳು, ಕೃಷಿ ಭೂಮಿ, ನೈಸರ್ಗಿಕ ಸಂಪನ್ಮೂಲಗಳು, ಕೃಷಿ ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರುಕಟ್ಟೆಗಳ ಮೇಲಿನ ನಿಯಂತ್ರಣವನ್ನು ಎಂಎನ್ಸಿ ಮತ್ತು ಭಾರತೀಯ ಕಾರ್ಪೊರೇಟ್ಗೆ ಹಸ್ತಾಂತರಿಸಲು ಕಾನೂನುಗಳು ಅವಕಾಶ ಮಾಡಿಕೊಡುತ್ತಿವೆ. ಇದು ಆರ್ಎಸ್ಎಸ್ ನಿಯಮ ಮತ್ತು ಅದರ ಮೋಸಗೊಳಿಸುವ ಸಿದ್ಧಾಂತದ ಲಕ್ಷಣವಾಗಿದೆ ಎಂದು ಎಐಕೆಎಂಎಸ್ ವಿವರಿಸಿದೆ. ಭಾರತೀಯ ಸಂಪನ್ಮೂಲಗಳನ್ನು ವಿದೇಶಿ ಕಂಪನಿಗಳಿಗೆ ಹಸ್ತಾಂತರಿಸುವುದನ್ನು ಪ್ರಧಾನ ಮಂತ್ರಿ “ಆತ್ಮ್ ನಿರ್ಭರ್” ಎಂದು ಕರೆಯುತ್ತಾರೆ. ವಿದೇಶಿ ಶೋಷಕರ ಸೇವೆ, ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಜನರಿಗೆ ದ್ರೋಹ ಬಗೆದ ಅವರ ಪಾತ್ರದ ಪುನರಾವರ್ತನೆಯಾಗಿದೆ ಎಂದು ಸಂಘಟನೆ ಹೇಳಿಕೆ ನೀಡಿದೆ.


ಇದನ್ನೂ ಓದಿ: ಆಂದೋಲನ್ ಜೀವಿಗಳಾಗಲು ಹೆಮ್ಮೆ ಪಡುತ್ತೇವೆ: ಮೋದಿಗೆ ತಿರುಗೇಟು ನೀಡಿದ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಪ್ರಚಾರಕ್ಕೆ ಸಿಂಗಾಪುರದ ರೈಲ್ವೆ ನಿಲ್ದಾಣದ ಫೋಟೋ ಬಳಸಿದ ಬಿಜೆಪಿ

0
ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹಿಂಭಾಗದಲ್ಲಿ ಮೆಟ್ರೋ ರೈಲು ಸಾಗುತ್ತಿರು ಚಿತ್ರವಿರುವ ಈ ಪೋಸ್ಟರ್‌...