ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟ ಈಗ ಸುತ್ತಲಿನ ರಾಜ್ಯಗಳಿಗೆ ಹರಡಿದೆ. ಫೆಬ್ರವರಿ ಆರಂಭದಲ್ಲಿ ಯಾವಾಗ ಸರ್ಕಾರ ಗಡಿಗಳಲ್ಲಿ ಮುಳ್ಳುತಂತಿ, ಬ್ಯಾರಿಕೇಡ್ ಹಾಕಿ ರೈತರೊಂದಿಗೆ ಮಾತುಕತೆ ನಿಲ್ಲಿಸಿತೋ ಅಂದಿನಿಂದ ರೈತರು ದೆಹಲಿ ಸುತ್ತದ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಕಿಸಾನ್ ಮಹಾಪಂಚಾಯತ್ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಸಭೆಗಳಿಗೆ ಲಕ್ಷಾಂತರ ರೈತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿದ್ದಾರೆ. ಈಗಾಗಲೇ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹತ್ತಾರು ಮಹಾಪಂಚಾಯತ್‌ಗಳು ನಡೆದಿವೆ. ಇಂದು ರೈತ ಚಳವಳಿ ಉತ್ತುಂಗದಲ್ಲಿರುವ ಪಂಜಾಬ್‌ನಲ್ಲಿ ಮೊದಲ ಕಿಸಾನ್ ಮಹಾಪಂಚಾಯತ್ ನಡೆದಿದ್ದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.
ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಜಾಗ್ರಾವ್ನ್ ಮಾರುಕಟ್ಟೆಯಲ್ಲಿ ಪಂಜಾಬ್‌ನ 31 ರೈತ ಸಂಘಟನೆಗಳು ಜಂಟಿಯಾಗಿ ಕಿಸಾನ್ ಮಹಾಪಂಚಾಯತ್ ಆಯೋಜಿಸಿದ್ದವು. ಮಾರುಕಟ್ಟೆ ಅಂಗಳದ ತುಂಬೆಲ್ಲಾ ರೈತರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತಾರು ರೈತ ಮುಖಂಡರು ಮಾತನಾಡಿ ಸಂಯುಕ್ತಾ ಕಿಸಾನ್ ಮೋರ್ಚಾದ ಕರೆ ಮೇರೆಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
First kisan mahapanchayat in Punjab today. In Jagraon, Ludhiana. Vid speaks for itself. pic.twitter.com/ndaJ1om1vD
— Krishan Partap Singh (@RaisinaSeries) February 11, 2021
ಭಾರತೀಯ ಕಿಸಾನ್ ಯೂನಿಯನ್‌ನ ಮಂಜೀತ್ ಸಿಂಗ್ ಧಾನರ್, ಬಿಕೆಯು ಉಗ್ರಾಣ್‌ನ ಎಸ್.ಜೋಗಿಂದರ್ ಸಿಂಗ್, ಸುಖದೇವ್ ಸಿಂಗ್ ಕೊಕ್ರಿಕಾಲನ್, ಕುಲ್ವಂತ್ ಸಿಂಗ್ ಸಂಧು ಮುಂತಾದ ರೈತನಾಯಕರು ಮಾತನಾಡಿ ಸಿಂಘು ಗಡಿಯಲ್ಲಿನ ಒಂದು ಭಾಗದ ರೈತರ ಮೇಲೆ ಬಿಜೆಪಿ ಕಾರ್ಯಕರ್ತರ ಕಲ್ಲು ತೂರಾಟವನ್ನು ತೀವ್ರವಾಗಿ ಖಂಡಿಸಿದರು.
ರೈತ ಹೋರಾಟವನ್ನು ಮುನ್ನಡೆಸಲು ಐಕ್ಯತೆಯನ್ನು ಪ್ರದರ್ಶಿಸಿದ ರೈತ ಮುಖಂಡರು ಟಿಕ್ರಿ, ಸಿಂಘು ಮತ್ತು ಇತರ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಸಾಧ್ಯವಾದ ಮಟ್ಟಿಗೆ ಹೋಗಿ ಸೇರಿಕೊಳ್ಳಬೇಕೆಂದು ಕರೆ ನೀಡಿದರು.
S. Joginder Singh Ugrahan, President @Bkuektaugrahan and Manjeet Singh Dhaner From @EktaBku at Mahapanchayat at Jagraon, Distt- Ludhiana, Punjab.#FarmersProtest pic.twitter.com/RHxDHSW1zB
— Journalist SS Sidhu (@SSBathinda) February 11, 2021
ರೈತ ಮುಖಂಡರು ಪಂಜಾಬ್‌ನ ಯಾವುದೇ ರಾಜಕೀಯ ಪಕ್ಷವನ್ನು ಹೊಗಳುವುದನ್ನು ತಪ್ಪಿಸಿದ್ದು, ರೈತರ ಸಮಸ್ಯೆ ಬಗೆಹರಿಯುವುದೇ ತಮ್ಮ ಆದ್ಯತೆ ಎಂದು ಘೋಷಿಸಿದ್ದಾರೆ.
Key take aways from Mahapanchayat
1) show of unity among union leaders
2) some leaders spoke abt stone pelting incident near singhu border
3) calls made to join protesters at tikri, singhu and others
4) leaders avoided praising any political party of Punjab pic.twitter.com/2le9yU6kyK— Mohammad Ghazali (@ghazalimohammad) February 11, 2021
ಲೂಧಿಯಾನ, ಮೊಗಾ ಮತ್ತು ಬರ್ನಾಲಾ ಪ್ರದೇಶಗಳ ರೈತರು ಮತ್ತು ಕಾರ್ಮಿಕರ ಜೊತೆಗೆ ಸ್ಥಳೀಯರು ಸಹ ಮಹಾಪಂಚಾಯತ್‌ನಲ್ಲಿ ಭಾಗವಹಿಸಿ ರೈತ ಹೋರಾಟಕ್ಕೆ ಬೆಂಬಲ ಘೋಷಿಷಿದ್ದಾರೆ.
ಇದನ್ನೂ ಓದಿ: ಟೋಲ್ ಪ್ಲಾಜಾ ಮುತ್ತಿಗೆ, ದೇಶಾದ್ಯಂತ ರೈಲು ತಡೆ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ


