ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಂಗಳವಾರ ಸಂಜೆ ಯೋಗ ಗುರು ಬಾಬಾ ರಾಮದೇವ್ ಅವರ ಕಾರ್ಟೂನ್ ಅನ್ನು ಟ್ವೀಟ್ ಮಾಡುವ ಮೂಲಕ ಪೆಟ್ರೋಲ್ ದರ ಏರಿಕೆಯನ್ನು ಟೀಕಿಸಿದ್ದಾರೆ.
ಕಾರ್ಟೂನ್‌ನಲ್ಲಿ ಬಾಬಾ ರಾಮ್‌ದೇವ್ ಅವರನ್ನು ಪೆಟ್ರೋಲ್ ಬಂಕ್‌ವೊಂದರಲ್ಲಿ ತಲೆಕೆಳಗೆ ಮಾಡಿ-ಕಾಲು ಮೇಲೆ ಮಾಡಿದ ಭಂಗಿಯಲ್ಲಿ ತೋರಿಸಲಾಗಿದೆ. ಮೇಲ್ಗಡೆ “ಲೀಟರ್ ರೂ. 90” ಪಠ್ಯವನ್ನು ಹೊಂದಿರುವ ಬೋರ್ಡ್ ಇದೆ. ಚಿತ್ರವು ಮಲಯಾಳಂನಲ್ಲಿ ಶೀರ್ಷಿಕೆಯನ್ನು ಸಹ ಹೊಂದಿದೆ, ಇದನ್ನು ತರೂರ್ ತಮ್ಮ ಟ್ವೀಟ್‌ನೊಂದಿಗೆ ಅನುವಾದಿಸಿ ಪೋಸ್ಟ್ ಮಾಡಿದ್ದಾರೆ.
“ನೀವು ಬಾಬಾ ರಾಮ್‌ದೇವ್ ಅವರಿಂದ ಯೋಗ ಪಾಠಗಳನ್ನು ತೆಗೆದುಕೊಂಡರೆ, ನೀವೂ ಸಹ ಪೆಟ್ರೋಲ್ ದರವನ್ನು ಲೀಟರ್‌ಗೆ 06 ರೂಪಾಯಿಗೆ ನೋಡಬಹುದು!” ಎಂದು ವ್ಯಂಗ್ಯ ಮಾಡಲಾಗಿದೆ.
If you took yoga lessons from BabaRamdev, you too could see petrol prices at 06 rupees a litre! pic.twitter.com/zatuS6t6cs
— Shashi Tharoor (@ShashiTharoor) February 16, 2021
ತೈಲ ಮಾರುಕಟ್ಟೆ ಕಂಪನಿಗಳು ಸತತ ಎಂಟನೇ ದಿನಕ್ಕೆ ದರಗಳನ್ನು ಹೆಚ್ಚಿಸಿದ ನಂತರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಂಗಳವಾರ ನಾಲ್ಕು ಮಹಾನಗರಗಳಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದವು. ತೈಲದರ ಎಂಟನೆ ಸಲ ಸುಮಾರು 30 ಪೈಸೆ ಏರಿಕೆಯಾಗಿದೆ.
ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಈಗ ರೂ. 89.29 (ದೆಹಲಿ) ಮತ್ತು ರೂ. 95.75 (ಮುಂಬೈ) ನಡುವೆ ಮಾರಲ್ಪಡುತ್ತಿದೆ.
ಡೀಸೆಲ್ ಬೆಲೆ ರೂ. 79.70 (ದೆಹಲಿ) ಮತ್ತು ರೂ. 86.72 (ಮುಂಬೈ) ನಡುವೆ ಇದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಫೆಬ್ರವರಿ 14 ರಂದು ಪ್ರೀಮಿಯಂ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 100 ತಲುಪಿದೆ.
ಜನವರಿ 6 ರಿಂದ ಇಂಧನ ಬೆಲೆಗಳು ಭಾರತದಾದ್ಯಂತ ಏರಿಕೆಯಾಗುತ್ತಿದ್ದು, ಅದಕ್ಕೂ ಮೊದಲು ಸುಮಾರು ಒಂದು ತಿಂಗಳವರೆಗೆ ಬದಲಾಗದೆ ಉಳಿದಿದ್ದವು.. ದೇಶಗಳು ಲಸಿಕಾ ಅಭಿಯಾನ ನಡೆಸುತ್ತಿರುವ ಈ ಸಂದರ್ಭದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳ ದರ ಕಡಿಮೆ ಇದ್ದರೂ ಈ ಹೆಚ್ಚಳವಾಗಿದೆ. ಮಾರುಕಟ್ಟೆಗಳು ಮತ್ತು ವ್ಯವಹಾರಗಳು ಕೋವಿಡ್ ಪೂರ್ವದ ಸಾಮಾನ್ಯ ಪ್ರಮಾಣದ ದರವನ್ನು ನಿರೀಕ್ಷಿಸುತ್ತಿವೆ.
ಕಳೆದ ವಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಅಂತರರಾಷ್ಟ್ರೀಯ ‘ಬೆಲೆ ಯಾಂತ್ರಿಕ ವ್ಯವಸ್ಥೆ’ಯಿಂದ ನಿಯಂತ್ರಿಸುತ್ತಾರೆ ಮತ್ತು “ಸುಮಾರು 250 ದಿನ (ಕಳೆದ 300 ದಿನಗಳಲ್ಲಿ) ಕೇಂದ್ರವು ಬೆಲೆಗಳನ್ನು ಹೆಚ್ಚಿಸಿಲ್ಲ ಅಥವಾ ಕಡಿಮೆ ಮಾಡಿಲ್ಲ” ಎಂದು ಸೂಚಿಸಿದ್ದರು.
ಸೋಮವಾರ ಒರಿಸ್ಸಾದ ಕಾಂಗ್ರೆಸ್ ಮುಖಂಡರೊಬ್ಬರು, ಪ್ರಧಾನಿ ನರೇಂದ್ರ ಮೋದಿಯವರಂತೆ ಉಡುಗೆ ತೊಟ್ಟು, ಎತ್ತಿನ ಬಂಡಿಯಲ್ಲಿ ಭುವನೇಶ್ವರ ಸುತ್ತ ಸಂಚರಿಸುತ್ತ, ಪೆಟ್ರೋಲ್ ಬೆಲೆ ಕಡಿಮೆಯಾಗಿದೆಯೇ ಎಂದು ಜನರನ್ನು ಕೇಳಿದ್ದರು.
ಕಳೆದ ವಾರ ಸಮಾಜವಾದಿ ಪಕ್ಷದ ಸಂಸದ ವಿಶಾಂಬರ ಪ್ರಸಾದ್ ನಿಷಾದ್ ಅವರು ರಾಜ್ಯಸಭೆಯಲ್ಲಿ ಹೀಗೆ ವ್ಯಂಗ್ಯ ಮಾಡಿದ್ದರು: “ಮಾತೆ ಸೀತಾ ಅವರ ನೇಪಾಳ ಮತ್ತು ರಾವಣನ ಭೂಮಿ ಲಂಕಾದಲ್ಲಿ ಪೆಟ್ರೋಲ್ ಅಗ್ಗವಾಗಿದೆ. ಆದರೆ ಇಲ್ಲಿ ರಾಮನ ಭೂಮಿಯಲ್ಲಿ ಮಾತ್ರ ಇಲ್ಲ…..”
ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ಎದುರಿಸುತ್ತಿರುವ ಅಸ್ಸಾಂ ಮತ್ತು ಮೇಘಾಲಯ ಬೆಲೆಗಳನ್ನು ಕಡಿತಗೊಳಿಸಿವೆ. ಕೆಲವು ವಾರಗಳಲ್ಲಿ ಬಿಜೆಪಿ ಮರುಚುನಾವಣೆಗೆ ಹೋಗುತ್ತಿರುವ ಅಸ್ಸಾಂ, ಕಳೆದ ವಾರ ಪ್ರತಿ ಲೀಟರ್‌ಗೆ ರೂ. 5 ದರವನ್ನು ಕಡಿತಗೊಳಿಸಿತು. ಈ ಹಿಂದೆ ಪ್ರತಿ ಲೀಟರ್‌ಗೆ ರೂ. 2 ರಷ್ಟು ಬೆಲೆ ಕಡಿತಗೊಳಿಸಿದ ಮೇಘಾಲಯ ಮಂಗಳವಾರ ರಾತ್ರಿ ಪ್ರತಿ ಲೀಟರ್‌ಗೆ ರೂ 5.40 ಕಡಿತಗೊಳಿಸುವುದಾಗಿ ಘೋಷಿಸಿತು.
ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅವಲಂಬಿಸಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಳವು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಹೆಚ್ಚಳಕ್ಕೆ ಕಾರಣವಾಗಿದೆ, ಇದಕ್ಕಾಗಿ ಕಾಂಗ್ರೆಸ್ ಸೋಮವಾರ “ನರೇಂದ್ರ ಮೋದಿಯವರ ನಿರ್ದಯ ಮತ್ತು ಅನೈತಿಕ ಸರ್ಕಾರ” ದ ವಿರುದ್ಧ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕೇಂದ್ರವು ಹೆಚ್ಚಿಸಿದ ನಂತರ ಇದು ಸಬ್ಸಿಡಿ ರಹಿತ ಸಿಲಿಂಡರ್‌ಗೆ ಈಗ ರೂ. 769ಕ್ಕೆ ಏರಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈ ಹೆಚ್ಚಳವನ್ನು ಟೀಕಿಸಿದ್ದರು, ಮೋದಿ ಸರ್ಕಾರವು ಸಾರ್ವಜನಿಕರಿಂದ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ; ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ: ಕತ್ತೆ, ಕುದುರೆ ಮೊರೆ ಹೋದ ಜನತೆ


