Homeಮುಖಪುಟದಿಶಾ ಬಂಧನ: ದೆಹಲಿ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗದ ನೋಟಿಸ್

ದಿಶಾ ಬಂಧನ: ದೆಹಲಿ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗದ ನೋಟಿಸ್

ಸದ್ಯ ಶಾಂತನು ಅವರಿಗೆ ಟ್ರಾನ್ಸಿಟ್ ಜಾಮೀನು ದೊರೆತಿದೆ. ನಿಕಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ.

- Advertisement -
- Advertisement -

‘ಟೂಲ್‌ಕಿಟ್’ ಪ್ರಕರಣದಲ್ಲಿ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವ ಕುರಿತು ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದೆ ಮತ್ತು ಆಕೆಯ ಆಯ್ಕೆಯ ವಕೀಲರನ್ನು ಏಕೆ ಒದಗಿಸಲಿಲ್ಲ ಎಂಬ ವಿಷಯಗಳ ಬಗ್ಗೆ ವರದಿ ಕೋರಿದೆ.

ಮಾಧ್ಯಮ ವರದಿಗಳನ್ನು ಅರಿತುಕೊಂಡು, ಮಂಗಳವಾರ ದೆಹಲಿ ಮಹಿಳಾ ಆಯೋಗ ಹೊರಡಿಸಿದ ಹೇಳಿಕೆಯಲ್ಲಿ, ದಿಶಾರನ್ನು ದೆಹಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಲಾಗಿದೆ.

ಮಾಧ್ಯಮ ವರದಿಗಳು ಮತ್ತು ಆಕ್ಟಿವಿಸ್ಟರ ವಿರೋಧವನ್ನು ಉಲ್ಲೇಖಿಸಿರುವ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದಿಶಾ ರವಿಯನ್ನು ಪೊಲೀಸರು ಬಂಧಿಸಿ ಬೆಂಗಳೂರಿನಿಂದ ದೆಹಲಿಗೆ ಕರೆದೊಯ್ದರು ಮತ್ತು ಆಕೆ ಇರುವ ಸ್ಥಳವನ್ನು ಆಕೆಯ ಪೋಷಕರಿಗೆ ಸಹ ತಿಳಿಸಿರಲಿಲ್ಲ ಎಂದು ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ದೆಹಲಿಗೆ ಕರೆತರುವ ಮೊದಲು ಪೊಲೀಸರು ಟ್ರಾನ್ಸಿಟ್ ರಿಮಾಂಡ್‌ಗಾಗಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಅದು ಆರೋಪಿಸಿದೆ.

ಈ ವಿಷಯದಲ್ಲಿ ನೋಂದಾಯಿತ ಎಫ್‌ಐಆರ್ ನಕಲನ್ನು ಒದಗಿಸುವಂತೆ ಡಿಸಿಡಬ್ಲ್ಯು ದೆಹಲಿ ಪೊಲೀಸರನ್ನು ಕೇಳಿದೆ, ಟ್ರಾನ್ಸಿಟ್ ರಿಮಾಂಡ್‌ಗಾಗಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸದಿರುವ ಕಾರಣಗಳು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ತನ್ನ ಆಯ್ಕೆಯ ವಕೀಲರನ್ನು ಒದಗಿಸದೇ ಇರುವುದಕ್ಕೆ ಕಾರಣಗಳು, ಇಲ್ಲಿವರೆಗೆ ತೆಗೆದುಕೊಂಡ ಕ್ರಮಗಳ ವಿವರವಾದ ವರದಿ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಶುಕ್ರವಾರದ ವೇಳೆಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ಆಯೋಗ ಸೂಚಿಸಿದೆ.

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವನ್ನು ಬೆಂಬಲಿಸುವ ಪ್ರತಿಭಟನಾ ಟೂಲ್‌ಕಿಟ್ ರಚಿಸಿ ಹಂಚಿಕೊಂಡ ಆರೋಪದ ಮೇಲೆ ದಿಶಾರನ್ನು ದೆಹಲಿ ಪೊಲೀಸರು ಶನಿವಾರ ಬೆಂಗಳೂರಿನಲ್ಲಿ ಬಂಧಿಸಿದ್ದರು.

ದಿಶಾ, ಮುಂಬೈ ವಕೀಲೆ ನಿಕಿತಾ ಜಾಕೋಬ್ ಮತ್ತು ಪುಣೆ ಎಂಜಿನಿಯರ್ ಶಾಂತನು ಮುಲುಕ್ ಅವರು ಟೂಲ್ಕಿಟ್ ರಚಿಸಿ ಭಾರತದ ಚಿತ್ರಣವನ್ನು ಕೆಡಿಸಲು ಇತರರೊಂದಿಗೆ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಸೋಮವಾರ ಹೇಳಿದ್ದರಲ್ಲದೇ ನಿಕಿತಾ ಮತ್ತು ಶಾಂತನು ಬಂಧನಕ್ಕೆ ಜಾಮೀನುರಹಿತ ವಾರೆಂಟ್ ಹೊರಡಿಸಿದ್ದರು. ಸದ್ಯ ಶಾಂತನು ಅವರಿಗೆ ಟ್ರಾನ್ಸಿಟ್ ಜಾಮೀನು ದೊರೆತಿದೆ. ನಿಕಿತಾ ಅವರ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ.


ಇದನ್ನೂ ಓದಿ: ದಿಶಾ ರವಿ ಬಂಧನ ಖಂಡಿಸಿದ ‘ಭಾರತದ ಗ್ರೇಟಾ ಥನ್‌ಬರ್ಗ್’ ರಿಧಿಮಾ ಪಾಂಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...