ಯುವ ವಿದ್ಯಾರ್ಥಿನಿಯೊಬ್ಬರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಪ್ರಶ್ನಿಸಲು ಎದ್ದು ನಿಂತು, “ಸರ್, ನಾನು ಇಲ್ಲಿದ್ದೇನೆ” ಎಂದು ಕಿಕ್ಕಿರಿದು ಸೇರಿದ್ದ ವಿದ್ಯಾರ್ಥಿನಿಯರ ನಡವೆಯಿಂದ ಜೋರಾಗಿ ಹೇಳುತ್ತಾಳೆ.
“ಕೇಳು, ನನ್ನ ಹೆಸರು ಸರ್ ಅಲ್ಲ. ನನ್ನ ಹೆಸರು ರಾಹುಲ್, ಆದ್ದರಿಂದ ನನ್ನನ್ನು ರಾಹುಲ್ ಎಂದು ಕರೆಯಿರಿ” ಎಂದು ರಾಹುಲ್ ಗಾಂಧಿ. ವಿದ್ಯಾರ್ಥಿಗಳ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ನಡುವೆ ತಾವೂ ವಿದ್ಯಾರ್ಥಿಯಂತಾಗಿ ಹೋದರು.
ಬುಧವಾರ ಪುದುಚೇರಿಯ ಭಾರತಿದಾಸನ್ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನಡೆದ ಘಟನೆಯಿದು.
50 ವರ್ಷದ ಕಾಂಗ್ರೆಸ್ ಸಂಸದ ರಾಹುಲ್, “ನಿಮ್ಮ ಪ್ರಾಂಶುಪಾಲರನ್ನು ಮತ್ತು ಶಿಕ್ಷಕರನ್ನು ’ಸರ್ ’ಎಂದು ಕರೆಯಬಹುದು. ಆದರೆ ನೀವು ನನ್ನನ್ನು ರಾಹುಲ್ ಎಂದು ಕರೆದರೆ ಸಾಕು” ಎಂದಾಗ ಹುಡುಗಿಯರು ಹೋ ಎಂದು ಮೆಚ್ಚುಗೆ ಸೂಚಿಸಿದರು.
ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ವೇದಿಕೆಯ ಮೇಲೊಮ್ಮೆ ಮತ್ತೆ ಕೆಳಗೊಮ್ಮೆ ಹತ್ತುತ್ತ, ಇಳಿಯುತ್ತ ವಿದ್ಯಾರ್ಥಿನಿಯರೊಂದಿಗೆ ಸರಳವಾಗಿ ಒಡನಾಡಿದಾಗ ವಿದ್ಯಾರ್ಥಿಗಳು ಮತ್ತೆ ಜೋರಾಗಿ ಚಪ್ಪಾಳೆಗಳ ಮೆರಗು ನೀಡಿದರು.
ಇದನ್ನೂ ಓದಿ: ಹೈಕಮಾಂಡ್ ನೀಡಿದ ನೋಟಿಸ್‌ಗೆ ಉತ್ತರಿಸಿದ ಯತ್ನಾಳ್: ಯಡಿಯೂರಪ್ಪ ವಿರುದ್ಧ 11 ಪುಟಗಳ ಆರೋಪ
ಪ್ರಶ್ನೆ ಕೇಳಲು ಬಯಸಿದ ವಿದ್ಯಾರ್ಥಿನಿ ಚಪ್ಪಾಳೆ ತಟ್ಟಿ ನಂತರ ಮೈಕ್ರೊಫೋನ್ ತೆಗೆದುಕೊಳ್ಳಲು ಮುಂದಾದಳು. ವೇದಿಕೆಯ ಯಾರೋ ಒಬ್ಬರು, “ಸರ್, ಅವರು ನಿಮ್ಮನ್ನು ರಾಹುಲ್ ಅಣ್ಣಾ ಎಂದು ಕರೆಯಬಹುದೇ?” ಎಂದರು. “ನೀವು ನನ್ನನ್ನು ರಾಹುಲ್ ಅಣ್ಣಾ ಎಂದು ಕರೆಯಬಹುದು, ಅದು ಒಳ್ಳೆಯದು” ಎಂದಾಗ ಮತ್ತೆ ಹರಷೋದ್ಗಾರ ಜೈಕಾರ.
ಈ ವಿಡಿಯೋವನ್ನು ಗುರುವಾರ ಮುಂಜಾನೆ ಹೊತ್ತಿಗೆ ಸುಮಾರು 28,000 ಬಾರಿ ವೀಕ್ಷಿಸಲಾಗಿದೆ ಮತ್ತು ಕಾಂಗ್ರೆಸ್ ಈ ವೀಡಿಯೊವನ್ನು “ಒಂದು ಆತ್ಮೀಯ ಕ್ಷಣ” ಎಂದು ಲೇಬಲ್ ಮಾಡಿದೆ.
ವೀಡಿಯೋ ನೋಡಿ: ರಾಹುಲ್ ಗಾಂಧಿಯವರ ಸಹಿ ಪಡೆದು ಹರ್ಷ ವ್ಯಕ್ತಪಡಿಸಿದ ಯುವತಿ
ಇದನ್ನೂ ಓದಿ: ‘2014 ರಲ್ಲಿ ನಿಮ್ಮನ್ನು ನಾನೂ ನಂಬಿದ್ದೆ, ಆದರೆ…!’ – ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಂಕರ್ ಬಿದರಿ



??