ಕರ್ನಾಟಕದ ಹುಡುಗ ಕೃಷ್ಣಪ್ಪ ಗೌತಮ್ ಪ್ರತಿಭಾನ್ವಿತ ಆಲ್‌ರೌಂಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಿನ್ನೆ ಆತನೇ ಅಚ್ಚರಿಪಡುವಂತೆ ಬಿಡ್ಡಿಂಗ್‌ನಲ್ಲಿ ಮೂರು ತಂಡಗಳು ಈ ಹುಡುಗನ ಖರೀದಿಗೆ ಪೈಪೋಟಿಗೆ ಬಿದ್ದಿದ್ದವು.
ಮೊದಲಿಗೆ ಕೊಲ್ಕೊತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೌತಮ್‌ಗಾಗಿ ಬಿಡ್ ನಡೆಸಿತು. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಗೌತಮ್ ಮೇಲೆ ಬಿಡ್ ಮಾಡತೊಡಗಿತು. ಇವೆರಡೂ ತಂಡಗಳ ನಡುವೆ ಪೈಪೋಟಿಯ ಬಿಡ್ಡಿಂಗ್ ಸಮರ ಶುರುವಾಗಿತು. 20 ಲಕ್ಷ ಮೂಲಬೆಲೆಯ ಗೌತಮ್ ಬೆಲೆ ಹೆಚ್ಚುತ್ತಲೇ ಹೋಯಿತು.
ನಡುವೆ ನುಗ್ಗಿದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 9.25 ಕೋಟಿಗೆ ಗೌತಮ್‌ನನ್ನು ಎತ್ತಿಕೊಂಡು ಹೋಯಿತು.
292 ಆಟಗಾರರು ನಿನ್ನೆ ಬಿಡ್ಡಿಂಗ್‌ನಲ್ಲಿದ್ದು, ಅದರಲ್ಲಿ 164 ಭಾರತೀಯ ಮತ್ತು 125 ವಿದೇಶಿ ಆಟಗಾರರಿದ್ದರು. ಈ ಪೈಪೋಟಿಯಲ್ಲಿ ಕೃಷ್ಣಪ್ಪ ಗೌತಮ್ ಅತಿ ದುಬಾರಿ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
32 ವರ್ಷದ ಈ ಬೆಂಗಳೂರು ಆಲ್‌ರೌಂಡರ್ ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಆಫ್‌ಬ್ರೇಕ್ ಬೌಲರ್. 2011-12 ರಿಂದ ಕರ್ನಾಟಕ ತಂಡದ ಸದಸ್ಯ. ಮುಂಬೈ, ರಾಜಸ್ತಾನ್ ರಾಯಲ್ಸ್, ಪಂಚಾಬ್ ಮತ್ತು ಚೆನ್ನೈ ಐಪಿಎಲ್ ತಂಡಗಳ ಪರ ಆಡಿದ ಅನುಭವವಿದೆ. ಐಪಿಎಲ್‌ನಲ್ಲಿ ಈವರೆಗೆ 49 ಪಂದ್ಯವಾಡಿದ್ದು, 485 ರನ್ ಗಳಿಸಿ, 32 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್: ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಛಾಪು