ಏರೋ ಇಂಡಿಯಾ ಸಮಯದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಎಲ್‌ಸಿಎ ತೇಜಸ್ ಯುದ್ಧ ವಿಮಾನದಲ್ಲಿ ವಿಹಾರ ನಡೆಸಿದ್ದು ಬಿಜೆಪಿ ಪಕ್ಷದಲ್ಲೇ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2021 ರ ಸಂದರ್ಭದಲ್ಲಿ ಪಕ್ಷದ ಸಂಸದ ತೇಜಸ್ವಿ ಸೂರ್ಯ ಅವರು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್‌ನಲ್ಲಿ ಹಾರಾಟ ನಡೆಸಿ, ವಿಹರಿಸಿದ್ದರ ಬಗ್ಗೆ ಬಿಜೆಪಿಯಲ್ಲಿ ಎದೆಯುರಿ ಇದೆ.
ಬೆಂಗಳೂರು ದಕ್ಷಿಣ ಸಂಸದರಿಗೆ ಆ ಸವಲತ್ತು ಯಾವ ಸಾಮರ್ಥ್ಯದಲ್ಲಿದೆ ಎಂದು ಅನೇಕ ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಏರೋ ಇಂಡಿಯಾ ನಡೆದ ಸ್ಥಳವು ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೂಡ ಬರುವುದಿಲ್ಲ ಎಂದು ಹಿರಿಯ ನಾಯಕರು ಆಕ್ಷೇಪ ವ್ಯಕ್ತ ಮಾಡಿದ್ದಾರೆ ಎಂದು ದಿ ಪ್ರಿಂಟ್ ಹೇಳಿದೆ.
Why must we #CelebrateLCATejas? It's the pride of Bengaluru
Only a few cities globally have distinction of producing a world-class fighter aircraft & our city is one of them
Tejas is 1 of B'luru's best gifts to the country & I thank PM Modi honouring it at #AeroIndia2021 pic.twitter.com/KztsTQTdNU
— Tejasvi Surya (@Tejasvi_Surya) February 4, 2021
‘ಅವರು ರಕ್ಷಣಾ ಸಂಸದೀಯ ಸಮಿತಿಯ ಸದಸ್ಯರಾಗಿದ್ದರೂ ಸಹ ಅದಕ್ಕೆ ಅವಕಾಶ ಸುಲಭವಲ್ಲ. ಅದೂ ತೇಜಸ್ವಿ ರಕ್ಷಣಾ ಸಂಸದೀಯ ಸಮಿತಿಯ ಸದಸ್ಯರೂ ಅಲ್ಲ” ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ತೇಜಸ್ ಮೇಲೆ ಹಾರಾಟ ನಡೆಸಲೆಂದೇ ಪಕ್ಷದ ನಾಯಕತ್ವವು ಹಲವಾರು ದಿನಗಳವರೆಗೆ ಲೋಕಸಭೆಗೆ ಗೈರುಹಾಜರಾಗಲು ತೇಜಸ್ವಿಗೆ ಅವಕಾಶ ನೀಡಿರುವುದು ಮತ್ತಷ್ಟು ಅಸಮಾಧಾನ ಮೂಡಿಸಿದೆ.
ಇಂತಹ ಸವಾರಿಗಳನ್ನು ಸಾಮಾನ್ಯವಾಗಿ ಪ್ರಮುಖ ಗಣ್ಯರು, ಸರ್ಕಾರದ ಉನ್ನತ ನಾಯಕತ್ವ, ಹಿರಿಯ ಅಧಿಕಾರಿಗಳು ಮತ್ತು ಇಂತಹ ವ್ಯವಸ್ಥೆಯ ಬಗ್ಗೆ ಬರೆಯುವಲ್ಲಿ ಪರಿಣತಿ ಹೊಂದಿರುವ ಪತ್ರಕರ್ತರಿಗೆ ಆಯೋಜಿಸಲಾಗುತ್ತದೆ.
ಕೆಲವು ನಾಯಕರು, ತೇಜಸ್ವಿಯ ಹಾರಾಟವು ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿದೆ ಎಂದು ಟೀಕಿಸಿದ್ದಾರೆ. ಅವಳಿ ಆಸನಗಳ ತೇಜಸ್‌ನ ಒಂದು ಸಣ್ಣ ಅವಧಿಯ ಹಾರಾಟಕ್ಕೆ 8-10 ಲಕ್ಷ ರೂ. ವೆಚ್ಚವಾಗುತ್ತದೆ. ಇದು ಸಾರ್ವಜನಿಕರ ಹಣ ಪೋಲು ಮಾಡಿದಂತೆ ಅಲ್ಲವೆ? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಅಂತಹ ಜಾಯ್ ರೈಡ್‌ಗಳಿಗೆ ಅನುಮತಿಯನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಏಜೆನ್ಸಿ ನೀಡುತ್ತದೆ. ತೇಜಸ್ವಿ ಈ ಅನುಮತಿ ಪಡೆದಿದ್ದರೆ? ಇದಕ್ಕೆ ಅವರು ಅರ್ಹರೆ? ಎಂಬ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಮಾದಕವಸ್ತು ಮಾರಾಟ ಆರೋಪದಡಿ ಬಿಜೆಪಿ ನಾಯಕಿಯ ಬಂಧನವಾಗಿದ್ದು ಹೇಗೆ?


