ಸೂರತ್ ಸ್ಥಳೀಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗಮನಾರ್ಹ ಸಾಧನೆಯು ಗುಜರಾತ್‌ನಲ್ಲಿನ ಹೊಸ ರಾಜಕೀಯ ಆರಂಭದ ಸೂಚನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಇದು ಪ್ರಾಮಾಣಿಕತೆಗೆ ಸಿಕ್ಕ ಜಯವಾಗಿದ್ದು, ಆಯ್ಕೆಯಾಗಿರುವ ಪ್ರತಿಯೊಬ್ಬ ಆಪ್ ಅಭ್ಯರ್ಥಿಯು ಪ್ರಾಮಾಣಿಕತೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೂರತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಪ್ 27 ಸ್ಥಾನಗಳಲ್ಲಿ ಜಯಗಳಿಸಿದೆ. ಗುಜರಾತ್‌ನ ಒಟ್ಟು 576 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 483 ಸ್ಥಾನಗಳಿಸಿ ಮಹತ್ವದ ಸಾಧನೆಗೈದಿದೆ. ಕಾಂಗ್ರೆಸ್ ಕೇವಲ 55 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ಮುಖಭಂಗ ಅನುಭವಿಸಿದೆ. ಆದರೆ ಮೊದಲ ಬಾರಿಯೇ 27 ಸ್ಥಾನಗಳಲ್ಲಿ ಜಯಿಸುವ ಮೂಲಕ ಆಪ್ ಭರ್ಜರಿ ಆರಂಭ ಮಾಡಿದೆ. ಸೂರತ್ ಮಹಾನಗರ ಪಾಲಿಕೆಯ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಪಕ್ಷದ ವಿಜಯದ ಕುರಿತು ವಿಡಿಯೋ ಸಂದೇಶ ನೀಡಿರುವ ಅರವಿಂದ್ ಕೇಜ್ರಿವಾಲ್ “ಹೊಸ ರಾಜಕೀಯವನ್ನು ಪ್ರಾರಂಭಿಸಿದ ಗುಜರಾತ್ ಜನರಿಗೆ ಅಭಿನಂದನೆಗಳು. ಆಮ್ ಆದ್ಮಿ ಪಕ್ಷದ ಗುಜರಾತ್ ಘಟಕದ ಎಲ್ಲ ಕಾರ್ಯಕರ್ತರ ಶ್ರಮಕ್ಕೆ ನಮಸ್ಕಾರ ಮತ್ತು ಎಲ್ಲರಿಗೂ ಅಭಿನಂದನೆಗಳು. ಭವಿಷ್ಯದಲ್ಲಿ ಉತ್ತಮ ರಾಜಕೀಯವನ್ನು ಸ್ವಾಗತಿಸಲು ಈಗ ಇಡೀ ಗುಜರಾತ್ ಸಿದ್ಧವಾಗಿದೆ ಎಂದು ಸೂರತ್‌ನ ಮತದಾರರು ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದ್ದಾರೆ.
कभी आपने सोचा था कि सरकारी काम वक्त से पहले और कम पैसों में होंगे?
दिल्ली में ऐसा हो रहा है। पिछले 6 साल में आपकी सरकार ने फ्लाईओवर निर्माण में 500 करोड़ से भी ज़्यादा रुपए बचा लिए हैं। pic.twitter.com/YVAzrir8um
— Arvind Kejriwal (@ArvindKejriwal) February 22, 2021
“125 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಜನತೆ ಆಪ್ ಕೈ ಹಿಡಿದಿದ್ದಾರೆ. ಆಪ್‌ನಿಂದ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯು ಪ್ರಾಮಾಣಿಕತೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಗುಜರಾತ್‌ನ ಜನರಿಗೆ ಅಭಿನಂದನೆ ತಿಳಿಸಲು ಫೆಬ್ರವರಿ 26 ರಂದು ಸೂರತ್‌ಗೆ ಭೇಟಿ ನೀಡಲಿದ್ದೇನೆ” ಎಂದು ತಿಳಿಸಿದ್ದಾರೆ.
ಆಪ್‌ನ ಜಯವು ಗುಜರಾತ್‌ನಲ್ಲಿ ಹೊಸ ರಾಜಕೀಯದ ಸೂಚನೆಯಾಗಿದೆ. ಪ್ರಾಮಾಣಿಕ ರಾಜಕಾರಣ, ಉತ್ತಮ ಶಾಲೆಗಳಿಗಾಗಿ ರಾಜಕಾರಣ, ಕಡಿಮೆ ದರದಲ್ಲಿ 24 ಗಂಟೆಗಳ ವಿದ್ಯುತ್ ನೀಡುವುದು ನಮ್ಮ ಆದ್ಯತೆ. ಜನರ ಸಹಭಾಗಿತ್ವದೊಂದಿಗೆ ಗುಜರಾತ್ ಅನ್ನು ಅಭಿವೃದ್ದಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಮೇಲಾ-ಡ್ರಗ್ಸ್ ಪ್ರಕರಣ : ಬಂಗಾಳ ಬಿಜೆಪಿ ನಾಯಕ ರಾಕೇಶ್ ಅರೆಸ್ಟ್


