ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮೂಲಕ ರಾಷ್ಟ್ರೀಯ ಕಾಮಧೇನು ಆಯೋಗ್ (ಆರ್‌ಕೆಎ) ಮುಂದಿಟ್ಟ ರಾಷ್ಟ್ರವ್ಯಾಪಿ ಆನ್‌ಲೈನ್ ಹಸು ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಗೋ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ದಿ ಹಿಂದು, ಮನಿಕಂಟ್ರೋಲ್.ಕಾಂ ವರದಿ ಮಾಡಿವೆ.
ಭಾರತೀಯ ಗೋವಿನ ಬಗ್ಗೆ ತಿಳಿಯಲು ಇನ್ನೂ ಏನು ಉಳಿದಿದೆ ಎಂದು ಹಲವರು ಕೇಳಿದ್ದರು.
2019 ರಲ್ಲಿ ಚಂದ್ರನ ಕಾರ್ಯಾಚರಣೆಗೆ ಅಂದಾಜು 135 ಮಿಲಿಯನ್ ಡಾಲರ್ ಖರ್ಚು ಮಾಡಿದ ರಾಷ್ಟ್ರಕ್ಕೆ ಇಂತಹ ಪರೀಕ್ಷೆಗಳ ಪ್ರಸ್ತುತತೆ ಇದೆಯೇ ಎಂದು ಟೀಕಾಕಾರರು ಕೇಳಿದ್ದರು.
ದೆಹಲಿ, ಜಾಧವಪುರ ಮುಂತಾದ ವಿವಿಗಳ ಪ್ರೊಫೆಸರ್ ಸಂಘಗಳು, ಯುಜಿಸಿ ಈ ಅವೈಜ್ಞಾನಿಕ ಪರೀಕ್ಷೆ ಪ್ರಮೋಟ್ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದವು.
2019 ರಲ್ಲಿ 750 ಕೋಟಿ ರೂ.ಗಳ ಬಜೆಟ್‌ನೊಂದಿಗೆ ಸರ್ಕಾರ ಸ್ಥಾಪಿಸಿದ ಕಾಮಧೇನು ಆಯೋಗವು, ಪರೀಕ್ಷೆ ರದ್ದತಿಗೆ ಯಾವುದೇ ಕಾರಣ ನೀಡಿಲ್ಲ.
ಪಶು ಸಂಗೋಪನೆ ಇಲಾಖೆ ಅದಿಕಾರಿಯೊಬ್ಬರು, ಮುಂದೆ ಈ ಪರೀಕ್ಷೆ ನಡೆದರೂ ವೈಜ್ಞಾನಿಕ ಪಠ್ಯಕ್ರಮವನ್ನು ಹೊಂದಿರಲಿದೆ. ಕಾಮಧೇನು ಆಯೋಗ್ ಅಧ್ಯಕ್ಷ ವಲ್ಲಭ್‌ಭಾಯ ಕಥಿರಿಯಾ ಅವರ ಅವಧಿ ಫೆ. 20ಕ್ಕೆ ಮುಗಿದಿದೆ’ ಎಂದು ತಿಳಿಸಿದ್ದಾರೆ.
ವ್ಯಾಪಕ ಟೀಕೆಯ ನಂತರ ಆಯೋಗ ಪಠ್ಯಕ್ರಮವನ್ನು ತನ್ನ ವೆಬ್‌ಸೈಟ್‌ನಿಂದ ಹಿಂದೆ ಪಡೆದಿತ್ತು. ಸುಮಾರು ಐದೂವರೆ ಲಕ್ಷ ಜನರು ಪರೀಕ್ಷೆಗೆ ನೋದಾಯಿಸಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: 25ರಂದು ಆನ್‌ಲೈನ್ ಗೋ ಪರೀಕ್ಷೆ: ಯುಜಿಸಿಯ ರಾಯಭಾರ – ಸುಳ್ಳು, ಅರ್ಧ ಸತ್ಯಗಳ ಸಿಲಬಸ್!


