ಈ ವಾರ ರಾಜಸ್ಥಾನದಲ್ಲಿ ಸಂಯುಕ್ತ್ ಕಿಸಾನ್ ಮೋರ್ಚಾ ಆಯೋಜಿಸಿರುವ ಕೃಷಿ ಕಾನೂನುಗಳ ವಿರುದ್ಧದ ಮಹಾಪಂಚಾಯತ್‌ಗಳ ಸರಣಿಯಲ್ಲಿ, ಇಂದು ಕರೌಲಿ ಜಿಲ್ಲೆಯ ಮೀನಾ ಸಮುದಾಯದ ಭದ್ರಕೋಟೆಯಾದ ಕರಿರಿಯಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಬೃಹತ್ ಜನಸ್ತೋಮ ಸೇರಿತ್ತು ಎಂದು ದಿ ಕಾರವಾನ್ ವರದಿ ಮಾಡಿದೆ.
ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮಾತನ್ನು ಕೇಳಲು ಬೃಹತ್ ಸಭೆ ಇಡೀ ದಿನ ಬಿಸಿಲಿನಲ್ಲಿ ಕಾದಿತ್ತು. “ಇದು ಎಂಎಸ್‌ಪಿ ಕುರಿತ ಹೋರಾಟ, ಇದು ರೈತರ ಉಳಿವಿಗಾಗಿ ಹೋರಾಟ, ನಿಮ್ಮ ಜಾತಿಗೂ ಇದಕ್ಕೂ ಸಂಬಂಧವಿಲ್ಲ, ಇದು ಎಲ್ಲರ ಹೋರಾಟ” ಎಂದು ಟಿಕಾಯತ್ ಹೇಳಿದರು.
ಅಂಚಿನ ಬೆಟ್ಟದ ಇಳಿಜಾರುಗಳಲ್ಲಿಯೂ ರೈತ-ಕಾರ್ಮಿಕರು ಕುಳಿತು ಭಾಷಣ ಆಲಿಸಿದರು. ಮೀನಾ ಸಮುದಾಯ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಅಡಿಯಲ್ಲಿ ಬರುತ್ತದೆ. ರಾಜ್ಯದ ಕೃಷಿ ಪ್ರದೇಶದಲ್ಲಿನ ಜಾತಿ ವರ್ಣಪಟಲದಾದ್ಯಂತ ಕೃಷಿ ಕಾನೂನುಗಳ ವಿರೋಧವು ಸ್ಥಿರವಾಗಿರುತ್ತದೆ ಎಂದು ಸಭೆ ದೃಢಪಡಿಸಿತು.
ಇದನ್ನೂ ಓದಿ: ಪಕ್ಷೇತರ ಸಂಸದನ ಅಸಹಜ ಸಾವು: ಡೆತ್‌ನೋಟ್‌ನಲ್ಲಿ ಬಿಜೆಪಿ ನಾಯಕನ ಹೆಸರಿದೆಯೇ?
ಆದರೆ, ಟಿಕಾಯತ್ ಹೊರತುಪಡಿಸಿ ಇತರ ನಾಯಕರ ಬಗ್ಗೆ ಜನಸಂದಣಿಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಆಕ್ಟಿವಿಸ್ಟ್ ಮತ್ತು ರಾಜಕಾರಣಿ ಯೋಗೇಂದ್ರ ಯಾದವ್ ಅವರನ್ನು “ಕೃಷಿ ಕಾನೂನುಗಳ ಬಗ್ಗೆ ಆಳವಾಗಿ ಬಲ್ಲ ಚಿಂತಕ’ ಎಂದು ಪರಿಚಯಿಸಲಾಯಿತು. ಆದರೆ ಪ್ರೇಕ್ಷಕರಿಂದ ಅವರು ಸಾಧಾರಣ ಪ್ರತಿಕ್ರಿಯೆಯನ್ನು ಪಡೆದರು.
ಎರಡು ದಿನಗಳ ಹಿಂದೆ ಸಿಕಾರ್‌ನಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಕಾರ್ಯಕ್ರಮದ ತಾರೆಯಾಗಿದ್ದ ರೈತ ಮುಖಂಡ ಅಮ್ರಾ ರಾಮ್, ಮಾಡರೇಟರ್ ರಕ್ಷಣೆಗೆ ಬರುವ ಮುನ್ನ ವೇದಿಕೆಯಿಂದ ಹೊರಗುಳಿದಿದ್ದರು. ಅವರು ಕೂಡ ಮಾತನಾಡಿದರು. ಆದರೆ ಘೋಷಣೆಗಳಿಂದಾಗಿ ಅವರ ಕೂಗು ಸಹ ತೀವ್ರವಾದ ಮೌನವನ್ನು ಎದುರಿಸಿತು. ಜಾಟ್ ನಾಯಕರಾದ ರಾಮ್ ಮತ್ತು ರಾಜಾರಾಮ್ ಮೀಲ್ ಒಟ್ಟು ಒಂದು ನಿಮಿಷಕ್ಕಿಂತ ಕಡಿಮೆ ಕಾಲ ಮಾತನಾಡಿದರು.
ಪಂಜಾಬ್ ಮತ್ತು ಹರಿಯಾಣಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿನ ಮಹಾಪಂಚಾಯತ್‌ಗಳು, ಹಾಗೆಯೇ ರಾಜ್ಯದ ಜಾಟ್ ಭದ್ರಕೋಟೆಗಳಲ್ಲಿನ ಮಹಾಪಂಚಾಯತ್‌ಗಳು ಪ್ರತಿಭಟನೆಗಳಿಗೆ ರಾಜಸ್ಥಾನದ ಜಾಟ್ ಸಮುದಾಯದ ಬೆಂಬಲವನ್ನು ಸೂಚಿಸುತ್ತದೆ. ಏತನ್ಮಧ್ಯೆ, ಪೂರ್ವ ರಾಜಸ್ಥಾನ ಪಟ್ಟಣವಾದ ದೌಸಾದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನಡೆಸಿದ ಬೃಹತ್ ರ್‍ಯಾಲಿಯು ಗುರ್ಜರ್ ಸಮುದಾಯದಲ್ಲೂ ಚಳುವಳಿಗೆ ಬೆಂಬಲವನ್ನು ತೋರಿಸಿತು.
ಇದನ್ನೂ ಓದಿ: ದೆಹಲಿಯಲ್ಲಿ ಜನವರಿ 26ರ ಟ್ರಾಕ್ಟರ್ ರ್‍ಯಾಲಿಯಲ್ಲಿ ನಿಜವಾಗಿಯೂ ನಡೆದಿದ್ದೇನು? ಪ್ರತ್ಯಕ್ಷ ದರ್ಶಿಯ ವರದಿ
2011 ರ ಜನಗಣತಿಯ ಪ್ರಕಾರ ಕೇವಲ 2,288 ಜನಸಂಖ್ಯೆಯನ್ನು ಹೊಂದಿರುವ ಕರಿರಿಯಲ್ಲಿ ಶೇಕಡಾ 72 ಕ್ಕಿಂತಲೂ ಹೆಚ್ಚು ಪರಿಶಿಷ್ಟ ಪಂಗಡದವರಿದ್ದಾರೆ. ಇಂದಿನ ರ್‍ಯಾಲಿಯಲ್ಲಿ ಬೃಹತ್ ಹಾಜರಾತಿಯು ಒಟ್ಟು ನಿವಾಸಿಗಳನ್ನು ಹಲವು ಪಟ್ಟುಗಳಲ್ಲಿ ಮೀರಿಸಿತ್ತು.
ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ಶಹಜಹಾನ್‌ಪುರದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ತಮ್ಮೊಂದಿಗೆ ಸೇರಲು ಸಿದ್ಧರಾಗಿರಬೇಕು ಎಂದು ಟಿಕಾಯತ್, ಯಾದವ್ ಮತ್ತು ಮತ್ತೊಬ್ಬ ಕೃಷಿ ಮುಖಂಡ ಯುಧ್ವೀರ್ ಸಿಂಗ್ ಕೇಳಿದರು. ಮಧ್ಯಾಹ್ನ ಪೂರ್ತಿ, ಮಹಾಪಂಚಾಯತ್‌ನಲ್ಲಿ ಸಬೆಯ ನಿರೂಪಕರು, ಗಡಿಯಲ್ಲಿ ಪ್ರತಿಭಟನೆಗೆ ಕುಳಿತವರ ಸಹಾಯಕ್ಕಾಗಿ ಪಡೆದ ಕೊಡುಗೆಗಳನ್ನು ಘೋಷಿಸಿದರು- 1,100 ರೂ.ನಿಂದ 1,25000 ರೂ.ವರೆಗೆ ಸಹಾಯಧನವನ್ನು ಡಜನ್‌ಗೂ ಹೆಚ್ಚು ಜನ/ಸಂಘಗಳು ನೀಡಿದ್ದರು.
“ನಾವು ನಿಮ್ಮನ್ನು ಅಲ್ಲಿಗೆ ಸ್ವಾಗತಿಸುತ್ತೇವೆ ಮತ್ತು ನಿಮ್ಮನ್ನು ನೋಡಿಕೊಳ್ಳುತ್ತೇವೆ, ಆದರೆ ನಾವು ನಿಮ್ಮನ್ನು ಕರೆದಾಗ ಪ್ರತಿ ಕುಟುಂಬದಿಂದ ಒಬ್ಬ ವ್ಯಕ್ತಿ ಬರಬೇಕಾಗುತ್ತದೆ” ಎಂದು ಟಿಕಾಯತ್ ಹೇಳಿದರು.
“ನಾವೆಲ್ಲರೂ ಸಂಪೂರ್ಣವಾಗಿ ಇಲ್ಲಿದ್ದೇವೆ. ಸಂಪೂರ್ಣವಾಗಿ ರಾಕೇಶ್ ಟಿಕಾಯತ್ ಅವರೊಂದಿಗೆ. ನಾವು ಮೋದಿಯ ಮುಖವನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಗೆ ಅವರ ಶಾಸಕರನ್ನು ಗ್ರಾಮಕ್ಕೆ ಪ್ರವೇಶಿಸಲು ನಾವು ಅನುಮತಿಸುವುದಿಲ್ಲ” ಎಂದು ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡಿದ್ದ ಕರಿರಿ ನಿವಾಸಿ ರಾಮ್‌ಲಾಲ್ ಮೀನಾ ದಿನದ ಕೊನೆಯಲ್ಲಿ ಮಾಧ್ಯಮಗಳಿಗೆ ಹೇಳಿದರು.
ಇದನ್ನೂ ಓದಿ: ನಾಳೆ ಯುವ ಕಿಸಾನ್ ದಿನ: ದೆಹಲಿಯ ರೈತ ವೇದಿಕೆಗೆಳು ಯುವಜನರಿಗೆ ಮೀಸಲು!


