ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ(ಇಂದು) 2021-22ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಲಿದ್ದು, 2019 ರಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಂಡಿಸುತ್ತಿರುವ ಎರಡನೆ ಬಜೆಟ್ ಇದಾಗಿದೆ.
ಕರ್ನಾಟಕ ಬಜೆಟ್ ಮಂಡನೆಯನ್ನು ನೀವು ನಾನುಗೌರಿ ಪೇಸ್‌ಬುಕ್ ಪೇಜ್ ಮೂಲಕ ಲೈವ್ ಆಗಿ ವೀಕ್ಷಿಸಬಹುದು ಅಥವಾ ಇಲ್ಲಿ ಕೂಡಾ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತ!
ರಾಜ್ಯದಲ್ಲಿ ಆರ್ಥಿಕ ಕುಸಿತ, ಪ್ರವಾಹ, ಹೆಚ್ಚಾದ ಸಾಲ ಪ್ರಮಾಣಗಳ ನಡುವೆ ಮುಖ್ಯಮಂತ್ರಿ ಮಂಡಿಸುವ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ರಾಜ್ಯವು ಈಗಾಗಲೆ ಮೂರು ಲಕ್ಷ ಕೋಟಿ ಸಾಲದಲ್ಲಿದ್ದು, ಜೊತೆಗೆ ಕೇಂದ್ರದಿಂದ ಸಿಗಬೇಕಾಗಿದ್ದ ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಸಿಕ್ಕಿಲ್ಲ. ಈ ನಡುವೆ ಕೊರೊನಾದಿಂದಾಗಿ ಉಂಟಾದ ಆರ್ಥಿಕ ಕುಸಿತದ ಒತ್ತಡವು ರಾಜ್ಯದ ಮೇಲೆ ಇದೆ. ಹಾಗಾಗಿ ಇಂದು ಮಂಡಿಸಲಿರುವ ಬಜೆಟ್‌ಗಳ ಮೇಲೆ ಜನರ ದೃಷ್ಟಿ ನೆಟ್ಟಿದೆ.
ಬಜೆಟ್ ಗಾತ್ರಗಳಿಗಿಂಲೂ ರಾಜ್ಯದ ಸಾಲವೆ ಹಚ್ಚಿದ್ದು, ಈ ಬಾರಿ ಮಂಡಿಸಲಿರುವ ಬಜೆಟ್ ಅನ್ನು ‘ವಿಕಾಸ ಪತ್ರ’ ಎಂದು ಅವರು ಕರೆದಿದ್ದಾರೆ. ಬಜೆಟ್ ಮಂಡನೆಯು ಪೂರ್ಣಗೊಂಡ ಬಳಿಕ ಉಭಯ ಸದನಗಳಲ್ಲಿ ಏಪ್ರಿಲ್ 1 ರವರೆಗೂ ಬಜೆಟ್ ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ.
ಇದನ್ನೂ ಓದಿ: ಪ.ಬಂಗಾಳ: 3 ರೈಲು ಬಾಡಿಗೆಗೆ ಪಡೆದು ಪ್ರಧಾನಿಯ ರ್‍ಯಾಲಿಗೆ ಜನ ಸೇರಿಸಿದ ಬಿಜೆಪಿ!


