Homeಮುಖಪುಟಲಂಕೇಶ್-86: "ದುಷ್ಟ-ಭ್ರಷ್ಟರಿಗೆ ನೀನಾಗೇ ಜಾಸ್ತಿ ಬೈದು ಬರೀಬೇಡ, ನಿನ್ನ ವರದಿ ಓದಿದವರೇ ಅವರಿಗೆ ಬೈಯ್ಯುವ ಥರ...

ಲಂಕೇಶ್-86: “ದುಷ್ಟ-ಭ್ರಷ್ಟರಿಗೆ ನೀನಾಗೇ ಜಾಸ್ತಿ ಬೈದು ಬರೀಬೇಡ, ನಿನ್ನ ವರದಿ ಓದಿದವರೇ ಅವರಿಗೆ ಬೈಯ್ಯುವ ಥರ ಬರೀಬೇಕು ಮಾರಾಯಾ”

ಮೇಷ್ಟ್ರ ಜತೆ ಸುಮಾರು 10 ವರ್ಷ ಕೆಲಸ ಮಾಡಿದ ಹೆಮ್ಮೆ ನನ್ನದು. ಈ ದಶಕದ ಅವಧಿಯಲ್ಲಿ 2-3 ಕೇಸ್ ಆಗಿತ್ತು. ಕೇಸ್ ಹಾಕಿದವರೇ ಕೆಲವನ್ನು ವಾಪಸ್ ತೆಗೆದುಕೊಂಡರೆ, ಉಳಿದಿದ್ದರಲ್ಲಿ ನಮಗೇ ಜಯವಾಗಿದೆ. ಆರೋಗ್ಯ ಹದಗೆಟ್ಟಿರುವಾಗ, ಕೇಸಾದರೆ ಮೇಷ್ಟ್ರರಿಗೆ ಸ್ವಲ್ಪ ಬೇಜಾರಾಗುತ್ತಿತ್ತು. ದೂರದ ಪ್ರಯಾಣ ಕಷ್ಟವಾಗುತ್ತಿತ್ತು. "ದುಷ್ಟ-ಭ್ರಷ್ಟರಿಗೆ ನೀನಾಗೇ ಜಾಸ್ತಿ ಬೈದು ಬರೀಬೇಡ, ನಿನ್ನ ವರದಿ ಓದಿದವರೇ ಅವರಿಗೆ ಬೈಯ್ಯುವ ಥರ ಬರೀಬೇಕು ಮಾರಾಯಾ" ಅನ್ನುತ್ತಿದ್ದರು.

- Advertisement -
- Advertisement -

ಲಂಕೇಶ್ ಪತ್ರಿಕೆಯ ವರದಿಗಾರರೊಬ್ಬರ ನೆನಪುಗಳು

ಮೇಷ್ಟ್ರು ನನ್ನ “ಆಧ್ಯಾತ್ಮ ಗುರು; ಮನುಷ್ಯತ್ವದ ಕುರಿತು ಧ್ಯಾನಿಸುವ ದೀಕ್ಷೆ ಕೊಟ್ಟವರು. ಜಾತಿ-ಧರ್ಮ-ದೇವರುಗಳ ಮೀರಿ ಜೀವಪರವಾಗಿ ಚಿಂತಿಸುವುದನ್ನ ಕಲಿಸಿದವರು. ನನ್ನ ಮತ್ತು ಮೇಷ್ಟ್ರು ಸಂಬಂಧ ಶುರುವಾಗಿದ್ದು ’ಲಂಕೇಶ್ ಪತ್ರಿಕೆ’ಯಿಂದಲೋ ಅಥವಾ ’ಜಗಳ’ದಿಂದಲೋ ಎಂಬ ಗೊಂದಲ ಇವತ್ತಿಗೂ ಕಾಡುತ್ತಲೇ ಇದೆ! 1980ರ ದಶಕದ ಆರಂಭದ ದಿನಗಳವು. ಲಂಕೇಶ್ ಪತ್ರಿಕೆ ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ ರೂಪುಗೊಂಡಿದ್ದ ಕಾಲಘಟ್ಟದಲ್ಲಿ ನಾನು ಕಾಲೇಜು ಮೆಟ್ಟಿಲು ಹತ್ತಿದ್ದೆ. ಓದುವ ಹವ್ಯಾಸ ಅಪ್ಪನಿಂದ ಬಳುವಳಿಯಾಗಿ ಬಂದಿತ್ತು. ರೈತರಿಗೆ ಸಲಹೆ ನೀಡುವ ಸಣ್ಣ ಸರ್ಕಾರಿ ಚಾಕರಿಯಲ್ಲಿದ್ದ ನನ್ನಪ್ಪ ಬೆಳಿಗ್ಗೆ ನಸುಕಲ್ಲೆ ಸೈಕಲ್ಲೇರಿ ಹಳ್ಳಿಗಳತ್ತ ಹೋದರೆ ರಾತ್ರಿ ಕತ್ತಲಾವರಿಸುವ ಹೊತ್ತಿಗೆ ಬರುತ್ತಿದ್ದ. ಬರುವಾಗ ಯಾವುದಾದರೂ ವೃತ್ತ ಪತ್ರಿಕೆ ತರುತ್ತಿದ್ದ. ಅದನ್ನು ರಾತ್ರಿ 12ರವರೆಗೂ ಒಂದು ಪುಟವೂ ಬಿಡದೆ ಓದುತ್ತಿದ್ದ.

ಅಪ್ಪ ಆಗಾಗ ಲಂಕೇಶ್ ಪತ್ರಿಕೆಯನ್ನೂ ತರುತ್ತಿದ್ದರು. ಅದು ನನ್ನ ಬದುಕಿನ ದಿಕ್ಕನ್ನೇ ಬದಲಿಸುತ್ತದೆಂದು ನಾನಂದುಕೊಂಡಿರಲಿಲ್ಲ. ಅಪ್ಪನ ಕೈಯಲ್ಲಿ ಕಾಸಿದ್ದಾಗ ತರುತ್ತಿದ್ದ ಲಂಕೇಶ್ ಪತ್ರಿಕೆ, ಸಾಂಸ್ಕೃತಿಕ ಲೋಕದ ’ದೈತ್ಯ ಲಂಕೇಶ್ ಮೇಷ್ಟ್ರು ಒಡನಾಟದ ಭಾಗ್ಯ ನನಗೆ ಸಿಗುವಂತೆ ಮಾಡಿತ್ತು! ಕಾಲೇಜಿಗೆಂದು ಪಟ್ಟಣಕ್ಕೆ ಹೋಗುತ್ತಿದ್ದಾಗ ಹಠ ಮಾಡಿ ಅಪ್ಪನಿಂದ ದುಡ್ಡು ಪಡಕೊಂಡು ಲಂಕೇಶ್ ಪತ್ರಿಕೆ ತರುತ್ತಿದ್ದೆ. ಅದರಲ್ಲಿ ಮೇಷ್ಟ್ರು ಮತ್ತಿತರರು ಬರೆಯುತ್ತಿದ್ದ ವಿಚಾರ ಪ್ರಚೋದಕ ಲೇಖನಗಳು ’ಬ್ರಾಹ್ಮಣ್ಯದ ಪರಿಸರದಲ್ಲಿದ್ದ ನನ್ನನ್ನು ’ಸೈತಾನ’ನನ್ನಾಗಿ ಮಾಡಿತ್ತು! ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ವ್ಯಭಿಚಾರ ಕಂಡಾಗೆಲ್ಲ ಕೂಗೋದು ರೂಢಿಯಾಗಿ ಕಾಲೇಜಿನಲ್ಲಿ ಅಧಿಕ ಪ್ರಸಂಗಿ ಅನಿಸಿಕೊಂಡಿದ್ದೆ.

ಬಂಡಾಯ ಮತ್ತು ಬದಲಾವಣೆಗೆ ’ಪತ್ರಿಕೆ’ ಪ್ರೇರಣೆಯಾಗಿತ್ತು. ಕಾಲೇಜಿನ ವಿದ್ಯಾರ್ಥಿಸಂಘದ ಚುನಾವಣೆಗೆ ನಿಲ್ಲುವ ಹುಕ್ಕಿ ಬಂದಿತ್ತು. ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂಥ ಸಹಕಾರಿ ಸಂಘ ಸ್ಥಾಪಿಸಬೇಕು;  ಮಂತ್ಲಿ ಮೀಟಿಂಗ್‌ನ ಚಹಾಪಾರ್ಟಿ ದುಂದುವೆಚ್ಚ ನಿಲ್ಲಿಸಬೇಕೆಂಬ ಧ್ಯೇಯೋದ್ದೇಶ ನನ್ನದಾಗಿತ್ತು. ಹಣವಿಲ್ಲದೆ ಚುನಾವಣೆ ಗೆದ್ದು ತೋರಿಸಬೇಕೆಂಬ ಪ್ಲಾನು ಹಾಕಿದ್ದೆ. ಅಂದಿನ ದಿನಗಳಲ್ಲೇ ಸಾವಿರಾರು ರೂಪಾಯಿ ಹರಿಸಿ ಯೂನಿಯನ್ ಜನರಲ್ ಸೆಕ್ರೆಟರಿ, ಇನ್ನಿತರ ಕಾರ್ಯದರ್ಶಿ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆಯುತ್ತಿತ್ತು. ನಾನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದಾಗ ಸ್ವೀಟು ಹಂಚಲು ಬರೀ 20ರೂ ಖರ್ಚು ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿರಲಿಲ್ಲ! ನನ್ನ ’ದಂಗೆ’ ವಿದ್ಯಾರ್ಥಿವೃಂದಕ್ಕೆ ಅರ್ಥವಾಗದಿದ್ದರೂ ಒಂದಿಷ್ಟು ಮೂಲಭೂತವಾದಿ ಗುರುಗಳ ಕಣ್ಣು ಕೆಂಪಾಗಿಸಿತ್ತು. ಈ ಕಾರಣಕ್ಕೆ ಕಾಲೇಜಿನ ವಾರ್ಷಿಕೋತ್ಸವಕ್ಕೆ ಲಂಕೇಶರನ್ನು ಮುಖ್ಯ ಅತಿಥಿಯಾಗಿ ಕರೆಸಬೇಕೆಂಬ ನನ್ನ ಪ್ರಯತ್ನಕ್ಕೆ ರಹಸ್ಯ ಪ್ರತಿರೋಧ ಎದುರಾಯಿತು.

ಪಟ್ಟುಬಿಡದೆ ಲಂಕೇಶರನ್ನು ಕರೆಸುವುದೆಂದು ಠರಾವು ಮಾಡಿಸಿದೆ. ಮೇಷ್ಟ್ರನ್ನು ಆಹ್ವಾನಿಸಲು ಬೆಂಗಳೂರಿಗೆ ಒಬ್ಬ ಶಿಕ್ಷಕರನ್ನು ಕಳಿಸಲಾಯಿತು. ನಂತರ ಮೇಷ್ಟ್ರು ಬರಲೊಪ್ಪಲಿಲ್ಲ ಎಂದು ಬೇರೆ ಯಾರನ್ನೋ ಕರೆದು ವಾರ್ಷಿಕೋತ್ಸವ ಮುಗಿಸಲಾಯಿತಾದರೂ ನನಗೆ ’ಸಂಶಯ’ ಹಾಗೇ ಉಳಿದಿತ್ತು. ಮೇಷ್ಟ್ರಿಗೊಂದು ಪತ್ರ ಬರೆದೆ “ಸರ್, ನನ್ನ ಕಾಲೇಜಿಂದ ನಿಮ್ಮನ್ನು ಕರೆಯಲು ಹೋದವರಿಗೆ ಬೈದು ಕಳಿಸಿದಿರಂತೆ, ಹೌದಾ?” ಎಂದು ಕೇಳಿದೆ. “ಇಲ್ಲ ಮರಿ, ಬರಲಾಗದೆಂದು ಸ್ವಲ್ಪ ನಿಷ್ಠುರವಾಗಿ ಹೇಳಿರಬಹುದೇ ಹೊರತು, ಬೈಯ್ಯಲು ಸಾಧ್ಯವೇ ಇಲ್ಲ. ಸುಮಾರು ನಾಲ್ಕು ನೂರು ಕಿ.ಮೀ ದೂರದ ಪ್ರಯಾಣದ ತೊಂದರೆಗೆ ಒಲ್ಲೆ ಎಂದಿರಬೇಕಷ್ಟೇ” ಎಂದು ನನ್ನ ಕಾಲೇಜು ವಿಳಾಸಕ್ಕೆ ಪತ್ರ ಬರೆದರು. ಈ ಪತ್ರ ಒಡೆದು ಓದಲು ನನಗೆ ಕೊಡಲಾಯಿತು. ಇದು ನನ್ನನ್ನು ’ಗದ್ಧರ’ ಎಂದು ಬಿಂಬಿಸಿಬಿಟ್ಟಿತು.

ಮರುವರ್ಷ ನನ್ನ ತಮ್ಮ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ. ಆತನೂ ಮೇಷ್ಟ್ರಿಂದ ಪ್ರಭಾವಿತನಾದವನು. ಈ ಬಾರಿ ಗ್ಯಾರಂಟಿ ಮೇಷ್ಟ್ರನ್ನು ಕರೆಸಲೇಬೇಕೆಂದು ತೀರ್ಮಾನಿಸಿದ್ದ. ಮೇಷ್ಟ್ರು ಕರೆಯಲು ’ಹಿರಿಯರು’ ಯಾರೂ ಹೋಗೋದು ಬೇಡ, ತಾನೇ ಹೋಗುತ್ತೇನೆಂದು ಹೋರಾಡಿ ಬೆಂಗಳೂರಿಗೆ ಹೋದ. ಮೇಷ್ಟ್ರನ್ನು ಒಪ್ಪಿಸಿ ಬಂದ. ಫಂಕ್ಷನ್ ಮುಗಿಸಿ ಪ್ರಾಚಾರ್ಯರ ಕೊಠಡಿಗೆ ಬಂದು ಕೂತಿದ್ದ ಮೇಷ್ಟ್ರನ್ನು ಮಾತಾನಾಡಿಸಲು ಗೆಳೆಯರ ಜೊತೆಗೆ ಕರಕೊಂಡು ಹೋಗಿದ್ದೆ. “ಸರ್, ಸಮಾಜವಾದದ ಬಗ್ಗೆ ಬರೆಯುವ ನೀವು ಕಾರಲ್ಲಿ ಓಡಾಡ್ತಿರಿ. ಆರಾಮಾಗಿದ್ದೀರಿ.. ಬಡವರಿಗಿನ್ನೂ ಅನ್ನ, ಸೂರು ಇಲ್ಲಾ.. ನನ್ನೂರಲ್ಲಿರುವ ನಿರ್ಗತಿಕ ಉಪ್ಪಾರರ ಕೇರಿಗೆ ಬನ್ನಿ.. ಬವಣೆ ತೋರಿಸ್ತೇನೆ” ಎಂದು ಏನೇನೋ ಅಸಂಬದ್ಧ ತರ್ಕ ಮಂಡಿಸಿದೆ.

ಮೇಷ್ಟ್ರು ತಮ್ಮ ಕನ್ನಡಕದೊಳಗಿಂದ ಕಣ್ಣನ್ನು ಅಗಲಿಸಿ ನನ್ನನ್ನು ದುರುಗುಟ್ಟಿ ನೋಡಿದರು. ಬೈತಾರೆಂದು ಬೆವರಿಳಿಯಿತು. ಮೇಷ್ಟ್ರು ದೊಡ್ಡದಾಗಿ ನಕ್ಕರು. “ಏ ಮಾರಾಯ, ನಾನು ಜರ್ನಲಿಸ್ಟ್ ನಂಗೇ ಹೇಳ್ತಿಯಲ್ಲ ಕತೆ.. ನಿನ್ನ ತಹತಹ ನಂಗೆ ಅರ್ಥವಾಗುತ್ತದೆ. ವಾಸ್ತವ ಅರ್ಥಮಾಡಿಕೊಳ್ಳಲು ನಿನಗೆ ಸ್ಮಲ್ಪ ಸಮಯ ಬೇಕು. ತಾಳ್ಮೆಯಿಂದ ಯೋಚಿಸು. ನಿಂಗೆ ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ. ನೀನು ಕೇಳಿದ್ದರಲ್ಲಿ ತಪ್ಪೇನಿಲ್ಲ ಎಂದರು. ಮರುದಿನ ಮೇಷ್ಟ್ರನ್ನು ನಮ್ಮ ಮನೆಗೆ ನನ್ನ ತಮ್ಮ ಕರಕೊಂಡು ಬಂದಿದ್ದ. ನನ್ನಪ್ಪ “ಸರ್ ನಮ್ಮ ಹುಡುಗ ತಮ್ಮತ್ರ ದುಡುಕಿ ಮಾತಾಡಿದನಂತೆಬೇ॒ಸರ ಮಾಡಿಕೊಳ್ಳಬೇಡಿ” ಎಂದರು. “ಇಲ್ಲಇ॒ಲ್ಲ. ಅವನೇನೂ ಅಂದಿಲ್ಲ.. ಅವನಿಗೆ ನೀವೇನೂ ಹೇಳಬೇಡಿ. ಇಂಥ ಹುಡುಗರ ಹುಂಬತನದ ಹಿಂದಿನ ಉದ್ದೇಶ ಒಳ್ಳೆಯದಿರುತ್ತದೆ. ನಂಗದು ಗೊತ್ತು” ಎಂದು ಹೇಳುತ್ತ ನನ್ನ ಕರೆದು ಬೆನ್ನು ತಟ್ಟಿ ಹೋದರು.

PC : The Hindu

ಇದಾದ ಎಂಟತ್ತು ತಿಂಗಳಿಗೆ ಮೇಷ್ಟ್ರಿಂದ ತಮ್ಮನಿಗೊಂದು ಪತ್ರ ಬಂತು. “ನೀನು ಅಥವಾ ನಿನ್ನಣ್ಣ ವಿವೇಕ ಉತ್ತರ ಕನ್ನಡದ ಸುತ್ತಲಿನ ವರದಿ ಕಳಿಸಿರಿ ಸಂಭಾವನೆ ಕೊಡುತ್ತೇನೆ. ಓಡಾಟದ ಖರ್ಚು ಕೊಡುತ್ತೇನೆ” ಎಂಬುದು ಪತ್ರದ ಒಕ್ಕಣಿಯಾಗಿತ್ತು. ನನ್ನ ಸಹೋದರ ಎಂಎ ಮಾಡಲು ಹೋಗಿದ್ದರಿಂದ ಮತ್ತು ನಾನು ಬಿ.ಎಸ್‌ಸಿ ಮುಗಿಸಿ ಖಾಲಿ ಇದ್ದುದ್ದರಿಂದ ನಾನೇ ವರದಿ ಮಾಡಲು ಶುರುಹಚ್ಚಿಕೊಂಡೆ. ಆದರೆ ಮೊದಮೊದಲು ನಾನು ಕಳಿಸಿದ ಮೂರ್ನಾಲ್ಕು ವರದಿಗಳು ಪ್ರಕಟವಾಗಲೇ ಇಲ್ಲ. ಆ ವರದಿಗಳನ್ನು ಸಹಾಯಕರು ಮೇಷ್ಟ್ರು ಗಮನಕ್ಕೆ ತಂದಿರಲಿಲ್ಲವಂತೆ. ನಂತರ ಬಂದ ವರದಿ ’ಪತ್ರಿಕೆ’ಯ ಮಧ್ಯದ ಭರ್ತಿ ಎರಡು ಪುಟಗಳದಾಗಿತ್ತು. ಹಲವು ಬಾಕ್ಸ್‌ಗಳು ಮತ್ತು ಸಬ್ ಹೆಡ್ಡಿಂಗ್‌ಗಳ ಆ ವರದಿ ಮೆಚ್ಚಿಕೆಯಾಗಿತ್ತು. ಆದರೆ “ಕಾಗುಣಿತದ ತಪ್ಪು ಬಾಲಿಶ ಮಾರಾಯಾ. ಪತ್ರಿಕೆ, ಲೇಖನ ಓದುವಾಗ ಗಮನವಿಟ್ಟು ಓದಿದರೆ ಹೀಗೆಲ್ಲಾ ಆಗೋದಿಲ್ಲ ಎಂದು ಪಾಠ ಮಾಡಿದ್ದರು!

ಆಗಾಗ ಪತ್ರ ಬರೆದು ನನ್ನ ತಿದ್ದು-ತೀಡಿ ವರದಿಗಾರಿಕೆ ತರಬೇತಿ ಕೊಡುತ್ತಿದ್ದರು. ವರದಿ ಮಾಡುವಾಗ ಸಾಕ್ಷ್ಯಾಧಾರ ಇರಲಿ, ಕೊನೆ ಪಕ್ಷ ನಿನಗಾದರೂ ಕನ್‌ವಿನ್ಸ್ ಆಗಿರಲಿ. ಸಾಮಾಜಿಕ-ರಾಜಕೀಯ ವರದಿ ಬರೆವಾಗ ಎಚ್ಚರ ತಪ್ಪುಬಾರದೆಂದು ನೆನಪಿಸುತ್ತಿದ್ದರು. ಪ್ರತಿ ತಿಂಗಳು ಸಂಬಳ ಸರಿಯಾಗಿ ಕಳಿಸುತ್ತಿದ್ದರು. ಪ್ರಕಟವಾಗದ ವರದಿಯ ಖರ್ಚು-ವೆಚ್ಚವನ್ನೂ ಕೊಡುತ್ತಿದ್ದರು. ನಾನು ಆಫೀಸಿಗೆ ಹೋಗುವುದು ತುಂಬಾ ಕಮ್ಮಿಯಾಗಿತ್ತು. ಪತ್ರಿಕೆ ಹುಟ್ಟುಹಬ್ಬ, ಮೇಷ್ಟ್ರ ಹುಟ್ಟುಹಬ್ಬ ಮತ್ತು ಮೀಟಿಂಗ್‌ಗೆ ಮಾತ್ರ ಹೋಗುತ್ತಿದ್ದೆ. ಹೋದಾಗೆಲ್ಲ ಬಸ್‌ಚಾರ್ಜ್ ಕೊಟ್ಟೇ ಕಳಿಸುತ್ತಿದ್ದರು. ನಾನು ಆಫೀಸಿಗೆ ಬಂದಿದ್ದೇನೆಂದು ಸಹಾಯಕರು ಹೇಳಿದರೆ “ಆತನಿಗೆ ಕಾಫಿ, ಊಟ, ತಿಂಡಿ ಎಲ್ಲಾ ಮಾಡಿಸಿ ಮಧ್ಯಾಹ್ನದ ನಂತರ ನನ್ಹತ್ರ ಕಳಿಸಿ” ಅನ್ನುತ್ತಿದ್ದರು. ಉತ್ತರ ಕನ್ನಡದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕಹೀ॒ಗೆ ಎಲ್ಲದರ ಬಗ್ಗೆ ಮಾತಾಡುತ್ತಿದ್ದರು. ನಾನು ಬರೆದ ವರದಿಗಳಲ್ಲಿ ಯಾವುದು ಚನ್ನಾಗಿತ್ತು, ಯಾವುದು ಸರಿಯಿರಲಿಲ್ಲ ಎಂಬುದು ನೆನಪಿಟ್ಟು ಹೇಳುತ್ತಿದ್ದುದು ಅದ್ಭುತವಾಗಿತ್ತು. ಯಾವುದಾದರೂ ವರದಿಯಿಂದ ಲೋಕಲ್‌ನಲ್ಲಿ ತೊಂದರೆಯಾದರೆ ತಕ್ಷಣ ನೆರವಾಗುತ್ತಿದ್ದರು.

ಮೇಷ್ಟ್ರ ಜತೆ ಸುಮಾರು 10 ವರ್ಷ ಕೆಲಸ ಮಾಡಿದ ಹೆಮ್ಮೆ ನನ್ನದು. ಈ ದಶಕದ ಅವಧಿಯಲ್ಲಿ 2-3 ಕೇಸ್ ಆಗಿತ್ತು. ಕೇಸ್ ಹಾಕಿದವರೇ ಕೆಲವನ್ನು ವಾಪಸ್ ತೆಗೆದುಕೊಂಡರೆ, ಉಳಿದಿದ್ದರಲ್ಲಿ ನಮಗೇ ಜಯವಾಗಿದೆ. ಆರೋಗ್ಯ ಹದಗೆಟ್ಟಿರುವಾಗ, ಕೇಸಾದರೆ ಮೇಷ್ಟ್ರರಿಗೆ ಸ್ವಲ್ಪ ಬೇಜಾರಾಗುತ್ತಿತ್ತು. ದೂರದ ಪ್ರಯಾಣ ಕಷ್ಟವಾಗುತ್ತಿತ್ತು. “ದುಷ್ಟ-ಭ್ರಷ್ಟರಿಗೆ ನೀನಾಗೇ ಜಾಸ್ತಿ ಬೈದು ಬರೀಬೇಡ, ನಿನ್ನ ವರದಿ ಓದಿದವರೇ ಅವರಿಗೆ ಬೈಯ್ಯುವ ಥರ ಬರೀಬೇಕು ಮಾರಾಯಾ” ಅನ್ನುತ್ತಿದ್ದರು. ಒಮ್ಮೆ ಮೇಷ್ಟ್ರು ಬುದ್ಧಿ ಹೇಳುವಾಗ ಅವರ ಟೇಬಲ್ ಮೇಲಿದ್ದ ಬಾಟಲಿಯನ್ನು ಬಗ್ಗಿ ನೋಡಿದೆ. ಮೇಷ್ಟ್ರಿಗೆ ನಗು ಬಂತು. “ಏನೋ ಮಾರಾಯಾ ವಿಷ ಕಂಡ ಹಾಗೆ ನೋಡ್ತಿಯಾ. ಅದು ಹಾರ್ಲಿಕ್ಸ್ ಕಣಯ್ಯ ಎಂದವರೇ ಸಹಾಯಕನ ಕರೆದು ಎರಡು ಕಪ್ ಹಾಲು ತರಲು ಹೇಳಿದರು. ಅದಕ್ಕೆ ಹಾರ್ಲಿಕ್ಸ್ ಹಾಕಿ ನನಗೊಂದು ಕಪ್ ಕೊಟ್ಟು ತಾವೊಂದು ಕಫ್ ಹಾರ್ಲಿಕ್ಸ್ ಕುಡಿಯುತ್ತ “ನಾನು ಹೇಳಿದ್ದು ತಿಳಿತಾ, ಊರಿಗಾದ ತೊಂದರೆ ನಿನಗೆ ಆದಂತೆ ಅನುಭವಿಸಿ ಬರೀತಿಯಾ ನಿಜ, ಆದ್ರೆ ತೀರಾ ಒರಟಾಗಿ ಗೀಚಬೇಡ” ಎಂದರು. ಹುಡ್ಗನಿಗೆ ಬರೋಬರಿ ಕ್ಲಾಸು ತಗೊಂಡಿದ್ದೆ, ಈಗ ಸುಧಾರಿಸಿದ್ದಾನೆಂದು ಆಫೀಸಲ್ಲಿ ಹೇಳುತ್ತಿದ್ದರಂತೆ.

ರಾಜ್ಯಮಟ್ಟದ ವರದಿಗಳನ್ನು ನನ್ನಿಂದ ಮೇಷ್ಟ್ರು ಮಾಡಿಸಿದ್ದರು. ಬೆಂಗಳೂರಿಗೆ ಬಂದು ಉಳಿತಿಯಾ ಎಂದು ಕೇಳಿದ್ದರು. ವೀರಪ್ಪ ಮೊಯ್ಲಿ ಆಡಳಿತದ ಅಂತ್ಯದಲ್ಲಿ ನಡೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರಿಕೆಯನ್ನೂ ವಹಿಸಿದ್ದರು. ದಕ್ಷಿಣ ಕನ್ನಡದ ಅಂದಿನ ಹದಿನೈದು ಶಾಸಕರ ಸಾಧನೆ-ಸಾಹಸದ ವರದಿ ಮೇಷ್ಟ್ರಿಗೆ ತುಂಬಾ ಹಿಡಿಸಿತ್ತು. ಇಲೆಕ್ಷನ್ ಸಮಯದಲ್ಲಿ ದಕ್ಷಿಣ ಕನ್ನಡದಲ್ಲಿ ಪತ್ರಿಕೆ ಜೋರಾಗಿ ಓಡಿತ್ತೆಂದು ದೊಡ್ಡ ಮೊತ್ತದ ಚೆಕ್ ಕಳಿಸಿದ್ದರು. ಬದ್ಧತೆಯಿಂದ ಕೆಲಸ ಮಾಡೋರನ್ನ ಕಂಡರೆ ಅವರಿಗೆ ಖುಷಿಯಾಗುತ್ತಿತ್ತು. ಅಡಚಣೆ ಇದ್ದರೆ ಹೇಳು ಹಣ ಕಳಿಸ್ತೇನೆ ಎಂದು ಆಗಾಗ ಹೇಳುತ್ತಿದ್ದರು. ಮೇಷ್ಟ್ರು ನನ್ನನ್ನು ತುಂಬ ಪ್ರೀತಿಯಿಂದ ನೋಡಿಕೊಂಡಿದ್ದರು. “ನನ್ನ ಮದುವೆ ಹೊತ್ತಲ್ಲಿ ಸ್ವಲ್ಪ ಹಣ ಬೇಕಾಗಬಹುದು ಸಾರ್ ಎಂದಿದ್ದೆ. “ಆಯ್ತು ಮಾರಾಯಾ ಕಳಿಸ್ತೇನೆ.. ರಾತ್ರಿಕಂಡ ಬಾವಿಗೆ ಹಗಲು ಬೀಳಲು ನೀನೂ ರೆಡಿಯಾದ್ಯಾ ಎಂದು ನಕ್ಕಿದ್ದರು. ಆದರೆ ನನ್ನ ಮದುವೆಗೂ ಮೊದಲೇ ಮೇಷ್ಟ್ರು ಹೋಗಿಬಿಟ್ಟರು! ಆದರೆ ಗೌರಿ ಮೇಡಮ್ ಕೈಬಿಡಲಿಲ್ಲ. ಮೇಷ್ಟ್ರಂತೆಯೇ ಕಾಳಜಿಯಿಂದ ನೋಡಿಕೊಂಡಿದ್ದರು!

ವಿವೇಕ
ದೀರ್ಘ ಕಾಲ ಲಂಕೇಶ್ ಪತ್ರಿಕೆ ಮತ್ತು ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ದುಡಿದಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ- ದ.ಕ ಜಿಲ್ಲೆಯ ರೈತರು ಸೊಲ್ಲೆತ್ತಲಿಲ್ಲವೇಕೆ?: ಮಿಸ್ರಿಯಾ ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...