Homeಮುಖಪುಟಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

- Advertisement -
- Advertisement -

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ ಆಹಾರ ಪದ್ಧತಿಯನ್ನು ಹೇರಿದಂತೆ ಎಂದು ಪಕ್ಷವು ಆರೋಪಿಸಿದೆ.

ಪಕ್ಷದ ಮುಖವಾಣಿಯಾದ ‘ಸಾಮ್ನಾ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಆಹಾರ ಆಯ್ಕೆಗಳು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಸರ್ಕಾರಗಳು ಅಥವಾ ರಾಜಕೀಯ ಸಂಘಟನೆಗಳು ಅವುಗಳನ್ನು ನಿರ್ದೇಶಿಸಬಾರದು ಎಂದು ಹೇಳಲಾಗಿದೆ. ಸೆಪ್ಟೆಂಬರ್ 12 ರಂದು ಭಾರತ್ ಮಂಟಪದಲ್ಲಿ ನಡೆದ ಗಾಲಾ ಔತಣಕೂಟದಲ್ಲಿ, ವಿಸ್ತೃತ 11 ಸದಸ್ಯ ರಾಷ್ಟ್ರಗಳ ಬ್ರಿಕ್ಸ್ ಒಕ್ಕೂಟದ ನಾಯಕರಿಗೆ ಕೇವಲ ಸಸ್ಯಹಾರಿ ಮೆನುವನ್ನು ಮಾತ್ರ ಬಡಿಸಿರುವುದನ್ನು ಸಂಪಾದಕೀಯದಲ್ಲಿ ತೀವ್ರವಾಗಿ ವಿರೋಧಿಸಲಾಗಿದೆ.

ವಿಶ್ವ ನಾಯಕರ ಮೇಲೆ ಆಹಾರ ಪದ್ಧತಿಯನ್ನು ಹೇರಲಾಗಿದೆ ಎಂದು ಟೀಕಿಸಿರುವ ಠಾಕ್ರೆ ಬಣದ ಮುಖವಾಣಿ ‘ಸಾಮ್ನಾ’, ಸಸ್ಯಹಾರಿ ಅಥವಾ ಮಾಂಸಾಹಾರಿ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಸರ್ಕಾರವಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಅವುಗಳನ್ನು ನಿರ್ದೇಶಿಸಬಾರದು ಎಂದು ವಾದಿಸಿದೆ. ಮೆನುವಿನಲ್ಲಿ ಖಾಂಡ್ವಿ, ಮಶ್ರೂಮ್ ಕಬಾಬ್, ಪನೀರ್ ಲಬಾಬ್‌ದಾರ್, ಮಿಲೆಟ್ ಪುಲಾವ್, ಗುಜರಾತಿ ಶೈಲಿಯ ಟೊಮೆಟೊ-ಬೇಳೆ ಸಾರು, ಜಿಲೇಬಿ ಮತ್ತು ಫಿರ್ನಿ ಮುಂತಾದ ಪದಾರ್ಥಗಳಿದ್ದವು.

ಈ ಔತಣಕೂಟದ ಮೆನುವನ್ನು ಟೀಕಿಸಿರುವ ಸಂಪಾದಕೀಯವು, ಅತಿಥಿಗಳಿಗೆ ಹುಲ್ಲು ಮತ್ತು ಕಾಡು ಸೊಪ್ಪನ್ನು ತಿನ್ನಲು ಬಲವಂತಪಡಿಸಿದಂತಿದೆ ಎಂದು ಬಣ್ಣಿಸಿದೆ. “ಭೇಟಿ ನೀಡಿದ ಪ್ರತಿನಿಧಿಗಳು ಸೇರಿದಂತೆ ವಿಶ್ವದ ಶೇಕಡಾ 80 ರಷ್ಟು ಜನಸಂಖ್ಯೆಯು ಮಾಂಸಾಹಾರವನ್ನು ಸೇವಿಸುತ್ತದೆ. ಅವರ ಮೇಲೆ ಸಸ್ಯಹಾರವನ್ನು ಹೇರುವ ಮೂಲಕ ಮೋದಿ ಸರ್ಕಾರ ಏನು ಸಾಧಿಸಿತು? ಇದು ಜಾಗತಿಕ ಮಟ್ಟದಲ್ಲಿ ಭಾರತವನ್ನು ನಗೆಪಾಟಲಿಗೀಡು ಮಾಡಿದೆ” ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ದೆಶದ ಹೈಪ್ರೊಫೈಲ್ ಕೈಗಾರಿಕೋದ್ಯಮಿಗಳ ವಿವಾಹ ಸಮಾರಂಭಗಳಲ್ಲಿ ಅತ್ಯುತ್ತಮವಾದ ಮತ್ತು ಬಾಯಲ್ಲಿ ನೀರೂರಿಸುವ ಆಹಾರವಿತ್ತು ಎಂಬುದನ್ನು ಉಲ್ಲೇಖಿಸುತ್ತ, ಬ್ರಿಕ್ಸ್ ಗಾಲಾ ಔತಣಕೂಟವನ್ನು ಅಂತಹ ವಿವಾಹಗಳ ಭವ್ಯತೆಯೊಂದಿಗೆ ಸಂಪಾದಕೀಯವು ಹೋಲಿಸಿದೆ.

ದೆಹಲಿಯ ಪ್ರಸಿದ್ಧ ಪಾಕಪದ್ಧತಿಯ ತಿನಿಸುಗಳಾದ ಕರೀಮ್‌ ಅವರ ಮಾಂಸಾಹಾರಿ ಭಕ್ಷ್ಯಗಳು, ತಂದೂರಿ ಚಿಕನ್, ಬಿರಿಯಾನಿ, ಬಟರ್ ಚಿಕನ್, ಗೋವಾ ಮೀನು ಸಾರು, ಕೊಲ್ಹಾಪುರದ ಪಾಂಡ್ರಾ-ತಾಂಬ್ರಾ ರಸ್ಸಾ ಮತ್ತು ಮಾಲ್ವನ್ ಮೀನುಗಳು ಅಂತರರಾಷ್ಟ್ರೀಯ ಅತಿಥಿಗಳನ್ನು ನಿಜಕ್ಕೂ ತೃಪ್ತಿಪಡಿಸುತ್ತಿದ್ದವು ಎಂದು ಅದು ಹೇಳಿದೆ.

ಈ ಮೆನು ಮಹಾತ್ಮ ಗಾಂಧಿಯವರ ಜನ್ಮಸ್ಥಳದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಗಾಂಧೀಜಿಯವರು ತಮ್ಮ ವೈಯಕ್ತಿಕ ಸಸ್ಯಹಾರಿ ಆಯ್ಕೆಗಳನ್ನು ಎಂದಿಗೂ ಇತರರ ಮೇಲೆ ಹೇರಲಿಲ್ಲ ಎಂದು ಎತ್ತಿ ಹೇಳಿದೆ.

ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಸಂಪಾದಕೀಯವು ಐತಿಹಾಸಿಕ ಉದಾಹರಣೆಗಳನ್ನು ಉಲ್ಲೇಖಿಸಿದೆ. “ಖಾನ್ ಅಬ್ದುಲ್ ಗಫಾರ್ ಖಾನ್ ಮತ್ತು ಅವರ ಕುಟುಂಬವು ವರ್ಧಾದ ಸೇವಾಗ್ರಾಮ ಆಶ್ರಮಕ್ಕೆ ಭೇಟಿ ನೀಡಿದಾಗ, ಅವರಿಗಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸಲು ಮುಖ್ಯ ಆವರಣದ ಹೊರಗೆ ಪ್ರತ್ಯೇಕ ಅಡುಗೆಮನೆಯನ್ನು ವ್ಯವಸ್ಥೆ ಮಾಡಲಾಗಿತ್ತು. ರಷ್ಯಾಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ, ಕಟ್ಟುನಿಟ್ಟಿನ ಮಧ್ಯ ವಿರೋಧಿಯಾಗಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟೋಸ್ಟ್‌ಗಳಿಗಾಗಿ ತಮ್ಮ ಲೋಟದಲ್ಲಿ ವೋಡ್ಕಾ ಸುರಿಯಲು ಅನುಮತಿ ನೀಡುವ ಮೂಲಕ ಸ್ಥಳೀಯ ರಾಜತಾಂತ್ರಿಕ ಸಂಪ್ರದಾಯಗಳನ್ನು ಗೌರವಿಸಿದ್ದರು, ಆದರೆ ಅದನ್ನು ಕುಡಿಯದೆ ಎತ್ತಿ ಹಿಡಿದರು” ಎಂದು ಅದು ತಿಳಿಸಿದೆ.

ಚೀನಾ ಅಧ್ಯಕ್ಷ ಜಿಂಗ್‌ಪಿಂಗ್ ಮಹಾಬಲಿಪುರಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೆನುವಿನಲ್ಲಿ ವಿವಿಧ ಮಾಂಸಾಹಾರಿ ಭಕ್ಷ್ಯಗಳು ಸೇರಿದ್ದವು, ದೇಶದಾದ್ಯಂತದಿಂದ ವಿಶೇಷ ಅಡುಗೆಯವರನ್ನು ಕರೆತರಲಾಗಿತ್ತು ಎಂಬುದರ ಕುರಿತು ಸಂಪಾದಕೀಯವು ಮತ್ತಷ್ಟು ಗಮನ ಸೆಳೆದಿದೆ.

ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಬದಲಾಯಿಸಲು ಆಡಳಿತ ಸರ್ಕಾರ ಮತ್ತು ಅದರ ಬೆಂಬಲಿತ ಸಂಘಟನೆಗಳು ವ್ಯಾಪಕ ಅಭಿಯಾನ ನಡೆಸುತ್ತಿವೆ ಎಂದು ಸಂಪಾದಕೀಯವು ಆರೋಪಿಸಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಗುತ್ತಿಗೆಗಳನ್ನು ಇಸ್ಕಾನ್‌ನಂತಹ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ಪ್ರಸ್ತಾಪಿಸಿರುವ ಅದು, ಮಕ್ಕಳ ಆಹಾರದಿಂದ ಮೊಟ್ಟೆಗಳನ್ನು ತೆಗೆದುಹಾಕಲಾಗಿದೆ ಎಂದು ದೂರಿದೆ.

ಮುಂಬೈನಂತಹ ನಗರಗಳಲ್ಲಿ ಮಾಂಸಾಹಾರಿಗಳು ವಸತಿ ಕ್ಷೇತ್ರದಲ್ಲಿ ತಾರತಮ್ಯವನ್ನು ಎದುರಿಸುತ್ತಿರುವ ದೇಶೀಯ ಸಮಸ್ಯೆಗಳ ಕುರಿತು ಸಂಪಾದಕೀಯದಲ್ಲಿ ಚರ್ಚಿಸಲಾಗಿದೆ. ಇಂತಹ ಆಚರಣೆಗಳನ್ನು ಅಪರಾಧ ಎಂದು ಕರೆದಿದೆ.

ಕೊನೆಯಲ್ಲಿ ತೀವ್ರ ರಾಜಕೀಯ ವಾಗ್ದಾಳಿ ನಡೆಸಿದ ಸಂಪಾದಕೀಯವು, “ಆಹಾರ ಪದ್ಧತಿಯು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ. ಸರ್ಕಾರವು ‘ಭ್ರಷ್ಟಾಚಾರದ ಮಾಂಸಾಹಾರ’ದಲ್ಲಿ ಮುಳುಗಿರುವಾಗ, ಜನರಿಗೆ ಅವರ ಮೀನು ಮತ್ತು ಚಿಕನ್ ಅನ್ನು ನಿರಾಕರಿಸುತ್ತದೆ. ಪ್ರಧಾನಿ ಮೋದಿ ಮತ್ತು ಅವರ ಅನುಯಾಯಿಗಳು ಖಿಚಡಿ ಇಷ್ಟಪಡಬಹುದು, ಆದರೆ ಇತರರು ಬಿರಿಯಾನಿಯನ್ನು ಬಯಸುತ್ತಾರೆ. ನಮ್ಮ ಶ್ರೀಮಂತ ಆಹಾರ ಸಂಸ್ಕೃತಿಯನ್ನು ನಾಶಮಾಡುವ ಹಕ್ಕು ಯಾವುದೇ ಪಕ್ಷ ಅಥವಾ ಪಂಗಡಕ್ಕಿಲ್ಲ” ಎಂದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ: ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

"ಮಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದೆ; ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು...

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...