ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯೊಂದಿಗೆ, ಚುನಾವಣಾ ಬಾಂಡ್‌ಗಳ ಮಾರಾಟವನ್ನು ತಡೆಯಲು ಮಧ್ಯಂತರ ನಿರ್ದೇಶನ ಕೋರಿ ಎನ್‌ಜಿಒ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್‌ಗೆ ಸರ್ಜಿ ಸಲ್ಲಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಈ ನಿಟ್ಟಿನಲ್ಲಿ, ಎನ್‌ಜಿಒ ತನ್ನ 2017 ರ ರಿಟ್ ಅರ್ಜಿ ಕುರಿತು ತುರ್ತು ಪಟ್ಟಿಯನ್ನು ಕೋರಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂನಲ್ಲಿ ಮುಂಬರುವ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ಚುನಾವಣಾ ಬಾಂಡ್‌ಗಳ ಯಾವುದೇ ಮಾರಾಟವು “ಶೆಲ್ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳ ಅಕ್ರಮ ಹಣವನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂಬ ಗಂಭೀರ ಆತಂಕವಿದೆ ಎಂದು ರ್ಜಿಯಲ್ಲಿ ಹೇಳಲಾಗಿದೆ.
“ಬಾಕಿ ಚುನಾವಣಾ ಬಾಂಡ್‌ಗಳ ಸಲ್ಲಿಕೆಗೆ ಈಗ ಅನುಮತಿಸಬಾರದು ಎಂದು ಅರ್ಜಿದಾರರು ಬಯಸುತ್ತಾರೆ” ಎಂದು ತುರ್ತು ಅರ್ಜಿ ಹೇಳಿದೆ.
ಈ ಪ್ರಕರಣವನ್ನು ಕೊನೆಯದಾಗಿ 2020 ರ ಜನವರಿಯಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಎನ್‌ಜಿಒ ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ ಮತ್ತು ಈ ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿ 2020 ರ ಡಿಸೆಂಬರ್ 27 ರಂದು ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ ನಂತರವೂ ಈ ವಿಷಯವನ್ನು ಪಟ್ಟಿ ಮಾಡಲಾಗಿಲ್ಲ.
ಚುನಾವಣಾ ಬಾಂಡ್ ಎನ್ನುವುದು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‌ನ ಸ್ವರೂಪದಲ್ಲಿರುವ ಒಂದು ಸಾಧನವಾಗಿದ್ದು, ವ್ಯಕ್ತಿ ಅಥವಾ ಸಂಸ್ಥೆಯು ಭಾರತದ ಪ್ರಜೆಯಾಗಿದ್ದರೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿತವಾದ ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳ ಸಂಘದಿಂದ ಖರೀದಿಸಬಹುದು. ಬಹು ಪಂಗಡಗಳಲ್ಲಿರುವ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳಿಗೆ ಹಣ ನೀಡುವ ಉದ್ದೇಶದಿಂದ ನಿರ್ದಿಷ್ಟವಾಗಿ ನೀಡಲಾಗುತ್ತದೆ.
ಚುನಾವಣಾ ಬಾಂಡ್‌ಗಳನ್ನು ಹಣಕಾಸು ಕಾಯ್ದೆ 2017 ರ ಮೂಲಕ ಪರಿಚಯಿಸಲಾಯಿತು, ಇದು ಚುನಾವಣಾ ಬಾಂಡ್‌ಗಳ ಪರಿಚಯವನ್ನು ಸಕ್ರಿಯಗೊಳಿಸಲು ಆರ್‌ಬಿಐ ಕಾಯ್ದೆ, ಆದಾಯ ತೆರಿಗೆ ಕಾಯ್ದೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ ಎಂಬ ಮೂರು ಕಾನೂನುಗಳನ್ನು ತಿದ್ದುಪಡಿ ಮಾಡಿತು.
ಹಣಕಾಸು ಕಾಯ್ದೆ-2017 ಚುನಾವಣಾ ಧನಸಹಾಯದ ಉದ್ದೇಶಕ್ಕಾಗಿ ಯಾವುದೇ ನಿಗದಿತ ಬ್ಯಾಂಕ್ ನೀಡುವ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯನ್ನು ಪರಿಚಯಿಸಿತು.
ಹಣ ಕಾಯ್ದೆಯಾಗಿ ಅಂಗೀಕರಿಸಲ್ಪಟ್ಟ ಹಣಕಾಸು ಕಾಯ್ದೆ, ಇದಕ್ಕೆ ರಾಜ್ಯಸಭೆಯ ಒಪ್ಪಿಗೆಯ ಅಗತ್ಯವಿಲ್ಲ. ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲದ ರಾಜ್ಯಸಭೆಯನ್ನು ಬೈಪಾಸ್ ಮಾಡುವ ಸಲುವಾಗಿ ಇದನ್ನು ಹಣಕಾಸು ಮಸೂದೆಯನ್ನಾಗಿ ಜಾರಿ ಮಾಡಲಾಗಿದೆ ಎಮದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ತಿದ್ದುಪಡಿಗಳ ಪರಿಣಾಮವೆಂದರೆ, ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆ ನೀಡುವವರ ಹೆಸರುಗಳು ಮತ್ತು ವಿಳಾಸಗಳನ್ನು ನಮೂದಿಸಬೇಕಾಗಿಲ್ಲ ಮತ್ತು ಆ ಮೂಲಕ ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಕೊಲ್ಲುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಕಂಪನಿಯ ಕೊನೆಯ 3 ವರ್ಷಗಳ ನಿವ್ವಳ ಲಾಭದ ಮೇಲಿನ 7.5% ಕ್ಯಾಪ್ ಅನ್ನು ತೆಗೆದುಹಾಕುವುದರೊಂದಿಗೆ, ಈಗ ಕಾರ್ಪೊರೇಟ್ ಧನಸಹಾಯವು “ಕಂಪನಿಯು ಎಷ್ಟು ದಾನ ಮಾಡಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲದ ಕಾರಣ ಅನೇಕ ಪಟ್ಟು ಹೆಚ್ಚಾಗಿದೆ” ಎಂದು ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಂಗಾಳದ ಎಲ್ಲೆಡೆ ಬಾಂಬ್ ಫ್ಯಾಕ್ಟರಿ: ಅಮಿತ್ ಶಾ ಸುಳ್ಳು ಬಯಲು ಮಾಡಿದ ಆರ್‌ಟಿಐ ಕಾರ್ಯಕರ್ತ


