ಸ್ವದೇಶಿ ನಿರ್ಮಿತ ಸ್ಕಾರ್ಪಿಯಾನ್ ವರ್ಗದ ಜಲಾಂತರ್ಗಾಮಿ ನೌಕೆಯಾದ ‘ಐಎನ್‌ಎಸ್ ಕಾರಂಜ್’ ಅನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ. ಮುಂಬೈನ ಮಜಾಗನ್ ಶಿಪ್‌ಯಾರ್ಡ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಮಾಜಿ ನೌಕಾಪಡೆಯ ಮುಖ್ಯಸ್ಥ ವಿ.ಎಸ್. ಶೇಖಾವತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಳೆದ ಏಳು ದಶಕಗಳಿಂದ ನೌಕಾಪಡೆಯು ಸ್ವದೇಶಿಕರಣ ಮತ್ತು ರಕ್ಷಣಾ ಸ್ವಾವಲಂಬನೆಗೆ ಬದ್ಧವಾಗಿದೆ ಎಂದು ಮುಖ್ಯ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ. ಪ್ರಸ್ತುತ, 42 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಿವೆ ಮತ್ತು ಅವುಗಳಲ್ಲಿ 40 ದೇಶಾದ್ಯಂತ ಹಡಗುಕಟ್ಟೆಗಳಲ್ಲಿ ನಿರ್ಮಾಣ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೀಟು ಹಂಚಿಕೆಯಲ್ಲಿ ಭಿನ್ನಮತ: AIADMK-BJP ಮೈತ್ರಿ ತೊರೆದ ವಿಜಯಕಾಂತ್‌ರ DMDK
ಫ್ರೆಂಚ್ ಕಂಪನಿ ಡಿಸಿಎನ್‌ಎಸ್‌ನೊಂದಿಗಿನ 2005 ರ ಒಪ್ಪಂದದಡಿಯಲ್ಲಿ ನಿರ್ಮಿಸಲಾಗುವ ಆರು ಕ್ಯಾಲ್ವರಿ ವರ್ಗದ ಜಲಾಂತರ್ಗಾಮಿ ನೌಕೆಗಳಲ್ಲಿ ಐಎನ್‌ಎಸ್ ಕಾರಂಜ್ ಮೂರನೆಯದಾಗಿದೆ. ಸಮುದ್ರದಲ್ಲಿ ಜಲಾಂತರ್ಗಾಮಿ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
Scorpene-class submarine INS Karanj commissioned into Indian Navy in Mumbai, in presence of Chief of Naval Staff Admiral Karambir Singh and Admiral (Retired) VS Shekhawat pic.twitter.com/8Sk520fhzR
— ANI (@ANI) March 10, 2021
ಸಮುದ್ರ ಮತ್ತು ಒಳನಾಡಿನ ಮೇಲೆ ಒಂದೇ ರೀತಿಯಲ್ಲಿ ಆಕ್ರಮಣ ಮಾಡಬಹುದು ಎಂಬುದಾಗಿದೆ ಸ್ಕಾರ್ಪಿಯಾನ್ ವರ್ಗದ ಜಲಾಂತರ್ಗಾಮಿ ನೌಕೆಯ ವೈಶಿಷ್ಟ್ಯ. ಇದಲ್ಲದೆ, ಇದು ಇತರ ಜಲಾಂತರ್ಗಾಮಿ ನೌಕೆಗಳನ್ನು ನಾಶಪಡಿಸಲು ಮತ್ತು ಸ್ಪೋಟಕಗಳನ್ನು ಬಳಸಿ ದಾಳಿ ಕೂಡಾ ಮಾಡುತ್ತದೆ. 220 ಅಡಿ ಉದ್ದ ಮತ್ತು 40 ಅಡಿ ಎತ್ತರವಿರುವ ಈ ಜಲಾಂತರ್ಗಾಮಿಯು ಸಮುದ್ರದ ಮೇಲಿನಿಂದ 11 ನಾಟಿಕಲ್ ಮೈಲಿ ಮತ್ತು ಸಮುದ್ರದೊಳಗಿನಿಂದ 20 ನಾಟಿಕಲ್ ಮೈಲುಗಳಷ್ಟು ವೇಗದಲ್ಲಿ ಪ್ರಯಾಣಿಸುತ್ತದೆ.
ಇದನ್ನು ಡಿಸೆಂಬರ್ 2017 ರಲ್ಲಿ ಐಎನ್ಎಸ್ ಕ್ಯಾಲ್ವರಿ ಮತ್ತು ಸೆಪ್ಟೆಂಬರ್ 2019 ರಲ್ಲಿ ಐಎನ್ಎಸ್ ಖಂಡೇರಿ ನಿಯೋಜಿಸಲಾಗಿತ್ತು. ನಾಲ್ಕು ಮತ್ತು ಐದನೇ ಜಲಾಂತರ್ಗಾಮಿ ನೌಕೆಗಳಾದ ಐಎನ್‌ಎಸ್ ವೆಲಾ ಮತ್ತು ಐಎನ್‌ಎಸ್ ವ್ಯಾಗ್ಮೀರ್ ಸಮುದ್ರದಲ್ಲಿ ಪರೀಕ್ಷೆಯಲ್ಲಿದ್ದು ಹಾಗೂ ಆರನೆಯ ಐಎನ್‌ಎಸ್ ವಾಗ್‌ಶೀರ್ ನಿರ್ಮಾಣ ಹಂತದಲ್ಲಿದೆ.
ಇದನ್ನೂ ಓದಿ: ವಿಮಾನದಲ್ಲಿ ಮೋದಿ ಭಕ್ತನೊಬ್ಬನ ಗಲಾಟೆ: ಬಲ್ಗೇರಿಯಾದಲ್ಲಿ ತುರ್ತು ಲ್ಯಾಂಡಿಂಗ್ – ಬಂಧನ!


