ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭಗವಾನ್ ರಾಮ ಮತ್ತು ಕೃಷ್ಣ ಅವರ ಅವತಾರವೆಂದು ಪರಿಗಣಿಸಲಾಗುವುದು ಎಂದು ಉತ್ತರಾಖಂಡ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಸೋಮವಾರ ಹೇಳಿದ್ದಾರೆ.
ಹ್ಯಾನ್ಸ್ ಫೌಂಡೇಶನ್ ಆಯೋಜಿಸಿರುವ ‘ನೇತ್ರ ಕುಂಭ’ದಲ್ಲಿ ಮಾತನಾಡಿದ ಮುಖ್ಯಮಂತ್ರಿ ರಾವತ್, “ತಮ್ಮ ಕಾರ್ಯಗಳ ಕಾರಣದಿಂದಾಗಿ ಭಗವಾನ್ ರಾಮ ಮತ್ತು ಕೃಷ್ಣರನ್ನು ಜನರು ದ್ವಾಪರ ಮತ್ತು ತ್ರೇತ ಯುಗದಲ್ಲಿ ದೇವರುಗಳೆಂದು ಪರಿಗಣಿಸಲು ಪ್ರಾರಂಭಿಸಿದ ಅದೇ ರೀತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಭಗವಾನ್ ರಾಮ ಮತ್ತು ಕೃಷ್ಣ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Assembly Session| ವಿಧಾನಸಭೆ ಅಧಿವೇಶನ ಫೇಸ್‌ಬುಕ್ ಲೈವ್ Part-2
“ಈ ಮೊದಲು ಭಾರತದ ಪ್ರಧಾನಿ ವಿಶ್ವದಾದ್ಯಂಂತ ಯಾವುದೇ ವಿಶೇಷ ಗಮನ ಸೆಳೆಯುತ್ತಿರಲಿಲ್ಲ. ಆದರೆ ಇಂದು ವಿಶ್ವದ ದೊಡ್ಡ ದೊಡ್ಡ ನಾಯಕರು ಕೂಡಾ ಪ್ರಧಾನಿ ಮೋದಿಯವರೊಂದಿಗೆ ಛಾಯಾಚಿತ್ರ ತೆಗೆಯಲು ಉತ್ಸುಕರಾಗಿದ್ದಾರೆ” ಎಂದು ರಾವತ್ ಹೇಳಿದ್ದಾರೆ.
ತಿರತ್ ಸಿಂಗ್ ರಾವತ್ ಮಾರ್ಚ್ 11 ರಂದು ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾರ್ಚ್ 9 ರಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇದನ್ನೂ ಓದಿ: ಬೆಳಗಾವಿ ಕನ್ನಡಿಗರದ್ದು, ವಿವಾದದಲ್ಲಿ ಮೋದಿ ಸೇರಿದಂತೆ ಯಾರ ಮಧ್ಯಸ್ಥಿತಿಕೆಯೂ ಬೇಡ: ಕುಮಾರಸ್ವಾಮಿ



ಮೋದಿ ರಾಮನ ಅವತಾರ ಅಂದ್ರೆ ರಾಮನ ಆಡಳಿತ ಹೇಗಿತ್ತು ಅಂಥ ಅರ್ಥ ಆಗುತ್ತೆ. And ಮೋದಿ ರಾಮನ ಅವತಾರ ಅಂದ್ರೆ ಈಗಿನ ರಾವಣ ಯಾರು..