ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರವು ರಾಜ್ಯದ ಮೇಯರ್/ಪುರಸಭೆ/ನಗರ ಸಭೆಯ ಅಧ್ಯಕ್ಷ ಸೇರಿದಂತೆ ಒಟ್ಟು 86 ಸ್ಥಾನಗಳಲ್ಲಿ 60.47% ದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಿದೆ. ಜೊತೆಗೆ ಈ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ/ ಬಿ.ಸಿ/ಅಲ್ಪಸಂಖ್ಯಾತ ಸಮುದಾಯಗಳಿಗೆ 78% ರಷ್ಟು ಪ್ರಾತಿನಿಧ್ಯವನ್ನು ನೀಡಿದೆ ಎಂದು ವರದಿಯಾಗಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ವೈಎಸ್ಆರ್ಸಿಪಿ ಪಕ್ಷವು ಮೇಯರ್/ಅಧ್ಯಕ್ಷರ ಹುದ್ದೆಗಳಿಗೆ ತನ್ನ ಅಭ್ಯರ್ಥಿಗಳನ್ನು ಇತ್ತೀಚೆಗೆ ಘೋಷಿಸಿತು.
“ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿರುವ ಜಗನ್ ಸರ್ಕಾರವು 60.47% ಮೇಯರ್ ಮತ್ತು ಅಧ್ಯಕ್ಷರ ಹುದ್ದೆಗಳಿಗೆ ಮಹಿಳೆಯರಿಗೆ ತರುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದರರ್ಥ 86 ಹುದ್ದೆಗಳಲ್ಲಿ 52 ಹುದ್ದೆಗಳನ್ನು ಮಹಿಳೆಯರು ಹೊಂದಲಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ ಹೇಳಿಕೆ
ವೈಎಸ್‌ಆರ್‌ಸಿಪಿ ಸರ್ಕಾರವು 50% ರಷ್ಟು ದೇವಾಲಯ ಮಂಡಳಿಗಳು, ಕೃಷಿ ಮಾರುಕಟ್ಟೆ ಸಮಿತಿಗಳು, ನಾಮನಿರ್ದೇಶನ ಹುದ್ದೆಗಳನ್ನು, ಎಸ್‌ಸಿ/ಎಸ್‌ಟಿ/ಬಿ.ಸಿ/ಅಲ್ಪಸಂಖ್ಯಾತ ಸಾಮಾಜಿಕ ಗುಂಪುಗಳಿಗೆ ನಾಮನಿರ್ದೇಶನ ಮಾಡಿದೆ. ಅಲ್ಲದೆ ಈ ಎಲ್ಲಾ ಹುದ್ದೆಗಳಲ್ಲಿ 50% ದಷ್ಟು ಮಹಿಳೆಯರಿಗೆ ಹಂಚಿಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.
“ಎಸ್‌ಎಸ್/ಎಸ್‌ಟಿ/ಬಿ.ಸಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವೈಎಸ್‌ಆರ್‌ಸಿಪಿ ಸರ್ಕಾರ ಬದ್ಧವಾಗಿದೆ ಎಂಬ ಅಂಶವನ್ನು ಪುನರುಚ್ಚರಿಸುತ್ತಾ, ಸುಮಾರು 78% ಹುದ್ದೆಗಳನ್ನು ಹಿಂದುಳಿದ ಸಮುದಾಯಗಳಿಗೆ (ಎಸ್‌ಸಿ / ಎಸ್‌ಟಿ / ಬಿಸಿ / ಅಲ್ಪಸಂಖ್ಯಾತರಿಗೆ) ನೀಡಲಾಗಿದೆ.
86 ಹುದ್ದೆಗಳಲ್ಲಿ, ಹಿಂದುಳಿದ ಸಮುದಾಯಗಳಿಗೆ (ಎಸ್‌ಸಿ / ಎಸ್‌ಟಿ / ಬಿಸಿ / ಅಲ್ಪಸಂಖ್ಯಾತರಿಗೆ) 67 ಹುದ್ದೆಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ” ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಟಿಕೆಟ್ ನಿರಾಕರಣೆ: ತಲೆ ಬೋಳಿಸಿಕೊಂಡ ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ!



ಜಗನ್ ಅವರ ಈ ಕ್ರಮ ಸ್ವಾಗತಾರ್ಹ.