ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿ ಇಂದು ಭಾನುವಾರ ಜೋರಾದ ಪ್ರಚಾರ ನಡೆದಿದೆ. ಅಮಿತ್ ಶಾ, ಮೋದಿ ಮತ್ತು ಪ್ರಿಯಾಂಕಾ ಗಾಂಧಿ ಭಾಷಣ ಮಾಡಿದ್ದಾರೆ. ಇಲ್ಲಿ ಯಾರು ಏನು ಹೇಳಿದರು ಎಂಬುದನ್ನು ನೋಡೋಣ.
ಸಿಎಎ, ಎನ್‌ಪಿಆರ್, ಎನ್‌ಸಿಆರ್‌ಗಳ ಬಗ್ಗೆ ಸದಾ ಗೊಂದಲದ ಹೇಳಿಕೆ ನೀಡುತ್ತಲೇ ಬಂದ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಎಗ್ರಾದಲ್ಲಿ ನಡೆದ ರ‍್ಯಾಲಿಯಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ತಮ್ಮ ಪಕ್ಷವು ಎಲ್ಲಾ “ಒಳನುಸುಳಿದವರನ್ನು” ಹೊರಹಾಕಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ!
ಅಮಿತ್ ಶಾ ಅವರು ಇಂದು ಕೋಲ್ಕತ್ತಾದಲ್ಲಿ ನಡೆಯುವ ರ‍್ಯಾಲಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
****
ಅಸ್ಸಾಂನ ಬೊಕಾಖಾಟ್‌ನಲ್ಲಿ ನಡೆದ ಬಿಜೆಪಿ ರ‍್ಯಾಲಿಯ ಸಂದರ್ಭದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕೇಂದ್ರ ಮತ್ತು ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರವು ಡಬಲ್ ಆಗಿತ್ತು ಎಂದು ಹೇಳಿದರು. ಈಗ ಬಿಜೆಪಿ ಅಧಿಕಾರದಲ್ಲಿದೆ, ರಾಜ್ಯದಲ್ಲಿ ಬೆಳವಣಿಗೆ “ದ್ವಿಗುಣಗೊಂಡಿದೆ” ಎಂದು ಬೆನ್ನು ತಟ್ಟಿಕೊಂಡರು.
ಇಂದು ಪ್ರಧಾನಿ ಪಶ್ಚಿಮ ಬಂಗಾಳದ ಬಮಕುರಾದಲ್ಲಿ ಇನ್ನೊಂದು ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.
***
ದಿಶಾ ರವಿ ಟ್ವೀಟ್ ಬಗ್ಗೆ ಪ್ರಧಾನಿ ದುಃಖಿತರಾಗಿದ್ದಾರೆ, ಆದರೆ ಅಸ್ಸಾಂನ ಪ್ರವಾಹ, ಸಿಎಎ ಬಗ್ಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಅಸ್ಸಾಂನ ಜೋರ್ಹತ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, “22 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಟ್ವೀಟ್ ಬಗ್ಗೆ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದಾರೆ, ಆದರೆ ಅಸ್ಸಾಂನಲ್ಲಿನ ಪ್ರವಾಹದ ಬಗ್ಗೆ ಅದೇ ಭಾವನೆಯನ್ನು ಹಂಚಿಕೊಂಡಿಲ್ಲ ಮತ್ತು ಸಿಎಎ ಪ್ರಭಾವ, ದುಷ್ಪರಿಣಾಮದ ಬಗ್ಗೆಯೂ ಮಾತನಾಡುತ್ತಿಲ್ಲ” ಎಂದಿದ್ದಾರೆ.
‘ಪ್ರಧಾನಿ ಎಂದಾದರೂ ಚಹಾ ತೋಟಕ್ಕೆ ಭೇಟಿ ನೀಡಿದ್ದರಾ’ ಎಂದು ಪ್ರಿಯಾಂಕಾ ಗಾಂಧಿ ಅಸ್ಸಾಂನಲ್ಲಿ ಕೇಳಿದ್ದಾರೆ. ಚಹಾ ತೋಟದ ಕಾರ್ಮಿಕರ ಸಂಕಷ್ಟ ಬಗೆಹರಿಸುವ ಯತ್ನವನ್ನು ಪ್ರಧಾನಿ ಮಾಡಲೇ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಎಲ್ಲೆಲ್ಲೋ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗಾಗಿ ಬಟ್ಟೆ ಖರೀದಿ- ಸಿದ್ದರಾಮಯ್ಯ


