Homeಮುಖಪುಟ66ನೇ ಫಿಲ್ಮ್‌ ಫೇರ್ ಅವಾರ್ಡ್‌ ಪ್ರಕಟ: 7 ಪ್ರಶಸ್ತಿ ಗೆದ್ದ ತಾಪ್ಸಿ ಪನ್ನು ನಟನೆಯ 'ತಪ್ಪಡ್'...

66ನೇ ಫಿಲ್ಮ್‌ ಫೇರ್ ಅವಾರ್ಡ್‌ ಪ್ರಕಟ: 7 ಪ್ರಶಸ್ತಿ ಗೆದ್ದ ತಾಪ್ಸಿ ಪನ್ನು ನಟನೆಯ ‘ತಪ್ಪಡ್’ ಚಿತ್ರ

- Advertisement -
- Advertisement -

66ನೇ ಫಿಲ್ಮ್‌ ಫೇರ್ ಪ್ರಶಸ್ತಿ ಪ್ರಕಟವಾಗಿದ್ದು, ತಾಪ್ಸಿ ಪನ್ನು ನಟನೆಯ ‘ತಪ್ಪಡ್’ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅಂಗ್ರೇಜಿ ಮೀಡಿಯಂ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಜೀವಮಾನ ಸಾಧನೆಯ ಪ್ರಶಸ್ತಿ ಪಡೆದಿದ್ದಾರೆ.

ಪಿತೃಪ್ರಧಾನತೆಯ ಕರಾಳತೆಯನ್ನು ಹೇಳುವ ಚಿತ್ರ ತಪ್ಪಡ್ ಈ ಬಾರಿಯ ಫಿಲ್ಮ್‌ ಫೇರ್‌ನಲ್ಲಿ 7 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅಮಿತಾಬ್ ಬಚ್ಚನ್ ನಟನೆಯ ಗುಲಾಬೋ ಸಿತಾಬೋ ಚಿತ್ರ 6 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಮೂಲಕ ಅತಿ ಹೆಚ್ಚು ಪ್ರಶಸ್ತಿ ಗಳಿಸಿದ ಚಿತ್ರಗಳಲ್ಲಿ ಈ ಎರಡು ಚಿತ್ರಗಳು ಮೊದಲ ಸಾಲಿನಲ್ಲಿವೆ.

ಹಿಂದಿ ಚಿತ್ರಗಳಲ್ಲಿನ ಕಲಾತ್ಮಕತೆ ಮತ್ತು ತಾಂತ್ರಿಕತೆ ವಿಭಾಗಗಳಿಗೆ ನೀಡುವ ಪ್ರಶಸ್ತಿಗಳು ಶನಿವಾರ ರಾತ್ರಿ ಪ್ರಕಟವಾಗಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.

66ನೇ ಫಿಲ್ಮ್‌ ಫೇರ್ ಪ್ರಶಸ್ತಿಗಳು

ಅತ್ಯುತ್ತಮ ಚಿತ್ರ: ತಪ್ಪಡ್

ವಿಮರ್ಶಕರ ಅತ್ಯುತ್ತಮ ಚಿತ್ರ: ಈಬ್ ಅಲ್ಲೆ ಓ…

ಅತ್ಯುತ್ತಮ ನಟ (ಮುಖ್ಯ ಪಾತ್ರ): ಇರ್ಫಾನ್ ಖಾನ್ (ಅಂಗ್ರೇಜಿ ಮೀಡಿಯಂ)

ಅತ್ಯುತ್ತಮ ನಟಿ (ಮುಖ್ಯ ಪಾತ್ರ): ತಾಪ್ಸಿ ಪನ್ನು (ತಪ್ಪಡ್)

ವಿಮರ್ಶಕರ ಮೆಚ್ಚುಗೆಯ ನಟ (ಮುಖ್ಯ ಪಾತ್ರ): ಅಮಿತಾಬ್ ಬಚ್ಚನ್ (ಗುಲಾಬೋ ಸಿತಾಬೋ)

ವಿಮರ್ಶಕರ ಮೆಚ್ಚುಗೆಯ ನಟಿ (ಮುಖ್ಯ ಪಾತ್ರ): ತಿಲೋತ್ತಮಾ ಶೋಮ್ (ಸರ್)

ಅತ್ಯುತ್ತಮ ನಿರ್ದೇಶಕ: ಓಮ್ ಬಿರ್ಲಾ (ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್)

ಅತ್ಯುತ್ತಮ ಪೋಷಕ ನಟಿ (ಸ್ತ್ರೀ): ಫಾರೂಖ್ ಜಾಫರ್ (ಗುಲಾಬೊ ಸೀತಾಬೊ)

ಇದನ್ನೂ ಓದಿ: ಕನ್ನಡದ ಅಕ್ಷಿ ಚಿತ್ರಕ್ಕೆ ಪ್ರಶಸ್ತಿ: ನಟ ಧನುಷ್‌ಗೆ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ತಾಂತ್ರಿಕ ವಿಭಾಗ

ಅತ್ಯುತ್ತಮ ಕಥೆ: ಅನುಭವ್ ಸುಶೀಲಾ ಸಿಂಗ್ ಮತ್ತು ಮೃನ್ಮಮೈ ಲಗೂ ವೈಕುಲ್ (ತಪ್ಪಡ್)

ಅತ್ಯುತ್ತಮ ಚಿತ್ರಕಥೆ: ರೋಹೆನಾ ಗೆರಾ (ಸರ್)

ಅತ್ಯುತ್ತಮ ಸಂಭಾಷಣೆ: ಜುಹಿ ಚತುರ್ವೇದಿ (ಗುಲಾಬೊ ಸೀತಾಬೊ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ರಾಜೇಶ್ ಕೃಷ್ಣನ್ (ಲೂಟ್‌ಕೇಸ್)

ಅತ್ಯುತ್ತಮ ಚೊಚ್ಚಲ ಸ್ತ್ರೀ: ಅಲಯಾ ಎಫ್ (ಜವಾನಿ ಜಾನೆಮನ್)

ಅತ್ಯುತ್ತಮ ಸಂಗೀತ ಆಲ್ಬಮ್: ಪ್ರೀತಮ್ (ಲುಡೋ)

ಅತ್ಯುತ್ತಮ ಸಾಹಿತ್ಯ: ಗುಲ್ಜಾರ್ (ಛಪಾಕ್)

ಅತ್ಯುತ್ತಮ ಹಿನ್ನೆಲೆ ಗಾಯಕ: ರಾಘವ್ ಚೈತನ್ಯ (ತಪ್ಪಡ್‌‌ನ ಏಕ್ ತುಕ್ಡಾ ಧೂಪ್)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಆಸೀಸ್ ಕೌರ್ (ಮಲಾಂಗ್ ಶೀರ್ಷಿಕೆ ಹಾಡು)

ಅತ್ಯುತ್ತಮ ಸಾಹಸ: ರಂಜಾನ್ ಬುಲಟ್, ಆರ್.ಪಿ.ಯಾದವ್ (ತನ್ಹಾಜಿ: ದಿ ಅನ್ಸಂಗ್ ವಾರಿಯರ್)

ಅತ್ಯುತ್ತಮ ಹಿನ್ನೆಲೆ ಸಂಗೀತ: ಮಂಗೇಶ್ ಊರ್ಮಿಳಾ ಧಕ್ಡೆ (ತಪ್ಪಡ್)

ಅತ್ಯುತ್ತಮ ಛಾಯಾಗ್ರಹಣ: ಅಭಿ ಮುಖೋಪಾಧ್ಯಾಯ (ಗುಲಾಬೊ ಸೀತಾಬೋ)

ಅತ್ಯುತ್ತಮ ನೃತ್ಯ ಸಂಯೋಜನೆ: ಫರಾಹ್ ಖಾನ್ (ದಿಲ್ ಬೆಚರಾ ಶೀರ್ಷಿಕೆ ಹಾಡು)

ಅತ್ಯುತ್ತಮ ವೇಷಭೂಷಣ ವಿನ್ಯಾಸ: ವೀರಾ ಕಪೂರ್ ಇ (ಗುಲಾಬೊ ಸೀತಾಬೊ)

ಅತ್ಯುತ್ತಮ ಎಡಿಟಿಂಗ್: ಯಶಾ ಪುಷ್ಪಾ ರಾಮ್‌ಚಂದಾನಿ (ತಪ್ಪಡ್)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಮನಸಿ ಧ್ರುವ್ ಮೆಹ್ತಾ (ಗುಲಾಬೊ ಸೀತಾಬೊ)

ಅತ್ಯುತ್ತಮ ಧ್ವನಿ ವಿನ್ಯಾಸ: ಕಾಮೋಡ್ ಖರಡೆ (ತಪ್ಪಡ್)

ಅತ್ಯುತ್ತಮ ವಿಎಫ್‌ಎಕ್ಸ್: ಪ್ರಸಾದ್ ಸುತಾರ್, ಎನ್ವೈ ವಿಎಫ್‌ಎಕ್ಸ್‌ವಾಲಾ (ತನ್ಹಾಜಿ: ದಿ ಅನ್‌ಸಂಗ್ ವಾರಿಯರ್)

ವಿಶೇಷ ಪ್ರಶಸ್ತಿಗಳು

ಜೀವಮಾನ ಸಾಧನೆ ಪ್ರಶಸ್ತಿ: ಇರ್ಫಾನ್ ಖಾನ್

ಆರ್‌ಡಿ ಬರ್ಮನ್ ಪ್ರಶಸ್ತಿ: ಗುಲ್ಜರ್


ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಗೆ ಮೊದಲ ಮುಸ್ಲಿಂ ನಟ ನಾಮನಿರ್ದೇಶನ: ಇತಿಹಾಸ ಸೃಷ್ಟಿಸಿದ ರಿಜ್ ಅಹ್ಮದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...