Homeಅಂಕಣಗಳುನೂರರ ನೋಟ: ರೈತ ಹೋರಾಟ ತೀವ್ರಗೊಳ್ಳುವುದರ ಜೊತೆಗೆ ಜೈಲ್ ಭರೋ ಪ್ರಾರಂಭಿಸಬೇಕು

ನೂರರ ನೋಟ: ರೈತ ಹೋರಾಟ ತೀವ್ರಗೊಳ್ಳುವುದರ ಜೊತೆಗೆ ಜೈಲ್ ಭರೋ ಪ್ರಾರಂಭಿಸಬೇಕು

- Advertisement -
- Advertisement -

ರೈತ ಹೋರಾಟವನ್ನು ದಕ್ಷಿಣ ಭಾರತ ಮತ್ತು ಉತ್ತರ ಪ್ರದೇಶಗಳಿಗೆ ವಿಸ್ತರಿಸಲು ಭಾರತ್ ಕಿಸಾನ್ ಯೂನಿಯನ್ ತೀರ್ಮಾನಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಭಾರತದ ಕಿಸಾನ್ ಯೂನಿಯನ್ ಪರವಾಗಿ ಈ ಹೋರಾಟದ ವಿಸ್ತರಣೆ ಜವಬ್ದಾರಿಯನ್ನು ರಾಕೇಶ್ ಟಿಕಾಯತ್ ವಹಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ 20ನೇ ತಾರೀಕು ರೈತ ಮಹಾಪಂಚಾಯತ್‌ಅನ್ನು ಉದ್ಘಾಟಿಸಿದ ರಾಕೇಶ್ ಟಿಕಾಯತ್, ದೆಹಲಿಯಲ್ಲಿ ಚಳುವಳಿ ನಡೆಸುತ್ತಿರುವ ಭಾರತ್ ಕಿಸಾನ್ ಯೂನಿಯನ್ ಈ ಹೋರಾಟವನ್ನು ಮೋದಿ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವವರೆಗೂ, ಅನಿರ್ದಿಷ್ಟ ಕಾಲ ಮುಂದುವರೆಸುವುದಾಗಿ ಮಾಡಿದ್ದಾರೆ. ಅದರ ಜೊತೆ ಜೊತೆಗೇ ದಕ್ಷಿಣ ಭಾರತ ರಾಜ್ಯಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವಂತೆಯೇ ರೈತ ಮಹಾಪಂಚಾಯತ್‌ಗಳ ಸಮಾವೇಶಗಳನ್ನು ನಡೆಸುವ ಮೂಲಕ ರೈತರ ಈ ಹೋರಾಟಕ್ಕೆ ಬೆಂಬಲ ಪಡೆದುಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಕರ್ನಾಟಕದ ಶಿವಮೊಗ್ಗದಲ್ಲಿ ಇದನ್ನು ಮೊದಲ ಬಾರಿಗೆ ನೆರವೇರಿಸಿದ್ದಾರೆ.

ಎರಡನೆಯ ರೈತ ಮಹಾಪಂಚಾಯತ್ ಹಾವೇರಿಯಲ್ಲಿ 21ರಂದು ನಡೆದಿದೆ. 22.3.21ರಂದು ಬೆಂಗಳೂರಿನಲ್ಲಿ ನಡೆಯುವ ವಿಧಾನ ಸೌಧ ಚಲೋ ಮೆರವಣಿಗೆಯಲ್ಲಿ ರೈತರು ಮತ್ತು ಇತರ ಸಾಮಾಜಿಕ ಸಂಸ್ಥೆಗಳು ಕೂಡಿಕೊಂಡು ರೈತ ಮಹಾಪಂಚಾಯತ್ ನಡೆಸುವುದಲ್ಲದೆ ಯಡಿಯೂರಪ್ಪ ಸರ್ಕಾರದ ವಿರುದ್ಧ ಮುತ್ತಿಗೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಶಿವಮೊಗ್ಗದಲ್ಲಿ ಅಶೋಕ್ ಅವರ ತಂಡ ತಾಲ್ಲೂಕು ತಾಲ್ಲೂಕಿಗೂ ಹೋಗಿ ರೈತ ಜಾಗೃತಿ ಕೆಲಸ ಮಾಡಿದ್ದರ ಫಲವಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ರೈತರು ಮತ್ತು ಇತರ ಹೋರಾಟ ಸಂಘಟನೆಗಳ ಕಾರ್ಯಕರ್ತರು ಶಿವಮೊಗ್ಗದಲ್ಲಿ ಭಾಗವಹಿಸಿ ರೈತ ಮಹಾಪಂಚಾಯತ್‌ಗೆ ಚಾಲನೆ ಕೊಟ್ಟಿದ್ದಾರೆ. ಅದೇ ರೀತಿ ಅತ್ಯಧಿಕ ಸಂಖ್ಯೆಯಲ್ಲಿ ಬೆಂಗಳೂರು ಮುತ್ತಿಗೆಗೆ ಕೂಡ ಜನ ಸೇರಿದ್ದು, ಅದು ಕೊನೆಗೆ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶವಾಗಿ ಮಾರ್ಪಟ್ಟಿತು ಕೃಷಿ ಸಚಿವ ಬಿ ಸಿ ಪಾಟಿಲ್, ಸಮಾವೇಶಕ್ಕೆ ಬಂದು ರೈತರ ಮನವಿಯನ್ನು ಸ್ವೀಕರಿಸಿ ಹೋಗಿದ್ದಾರೆ.

ಬೆಂಗಳೂರು ಕಾರ್ಯಕ್ರಮದ ನಂತರ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ರೈತ ಮಹಾಪಂಚಾಯತ್‌ಗಳು ಮುಂದುವರೆಲಿದೆ. ಪತ್ರಿಕಾ ಸಂದರ್ಶನದಲ್ಲಿ ರಾಕೇಶ್ ಟಿಕಾಯತ್ ಕೆಲವು ಸ್ವಾರಸ್ಯಕರ ವಿಚಾರಗಳನ್ನು ತಿಳಿಸಿದ್ದಾರೆ. ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಕಾರ್ಯಕರ್ತರು ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಹಿಂಪಡೆಯುವವರೆಗೂ ದೆಹಲಿಯನ್ನು ಬಿಟ್ಟು ಹೊರಬೀಳುವುದಿಲ್ಲ ಎಂದಿದ್ದಾರೆ. ’ನಾವು ರೈತರು ಬೀಜ ಬಿತ್ತಿ 3 ರಿಂದ 4 ತಿಂಗಳು ಫಸಲಿಗೆ ಕಾಯುತ್ತೇವೆ, ಅದೇ ರೀತಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೆ ಕಾಯಲು ಸಿದ್ಧರಿದ್ದೇವೆ. ಅದಕ್ಕಾಗಿ ಹೋರಾಟವನ್ನು ಅನಿರ್ದಿಷ್ಟ ಕಾಲ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ. ಪಂಜಾಬ್, ಹರ್ಯಾಣ, ರಾಜಸ್ಥಾನ ರಾಜ್ಯಗಳಿಗೆ ಸೀಮಿತವಾಗಿರುವ ರೈತ ಚಳುವಳಿಯನ್ನು ಭಾರತದ ಎಲ್ಲ ರಾಜ್ಯಗಳಿಗೂ ಹರಡಲು ಕ್ರಮಕೈಗೊಳ್ಳುತ್ತೇವೆ. ಈ ಕೆಲಸವನ್ನು ನಾವು ಈಗ ರೈತ ಮಹಾಪಂಚಾಯತ್‌ಗಳನ್ನು ನಡೆಸುವ ಮೂಲಕ ಕರ್ನಾಟಕದಿಂದ ಆರಂಭ ಮಾಡಲಿದ್ದೇವೆ’ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಸ್ಪಷ್ಟ ಪಡಿಸಿದ್ದಾರೆ.

ಕಾಲಕ್ರಮೇಣ ಭಾರತದ ಎಲ್ಲ ರಾಜ್ಯಗಳಲ್ಲೂ ಭಾರತ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ಆಯಾ ರಾಜ್ಯಗಳ ಎಲ್ಲ ಹೋರಾಟ ಸಮಿತಿಗಳೂ ಕೂಡಿಕೊಂಡು ಚಳುವಳಿಯನ್ನು ಬಲಗೊಳಿಸಬೇಕು. ರೈತರ ಬೇಡಿಕೆಗಳಿಗೆ ಆದ್ಯತೆ ನೀಡಿ, ಬಿಜೆಪಿ ಸರ್ಕಾರದಿಂದ ಸಾರ್ವಜನಿಕರು ಅನುಭವಿಸುತ್ತಿರುವ ಇತರ ಕಷ್ಟಕೋಟಲೆಗಳ ವಿರುದ್ಧವಾಗಿಯೂ ಧ್ವನಿ ಎತ್ತಬೇಕು.

ಮೋದಿ ಒಬ್ಬ ಚುನಾಯಿತ ಸರ್ವಾಧಿಕಾರಿಯಾವುವತ್ತ ನಡೆದಿದ್ದಾರೆ. ಸಾಮಾನ್ಯ ಜನ ದಿನನಿತ್ಯ ಅನುಭವಿಸುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆ, ಮನೆಗಳಿಗೆ ಸರಬರಾಜು ಮಾಡಲಾಗುವ ಗ್ಯಾಸ್ ಸಿಲೆಂಡರ್‌ಗಳ ಬೆಲೆ ವಿಪರೀತವಾಗಿ ಹೆಚ್ಚುತ್ತಿರುವುದು, ಸರ್ಕಾರಿ ಉದ್ಯಮಗಳ ಷೇರುಗಳನ್ನು ಮಾರಾಟ ಮಾಡುವುದು, ಕಲ್ಲಿದ್ದಲು ಗಣಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರವೃತ್ತಿ, ಏರೋಡ್ರೋಮ್‌ಗಳು, ರೈಲ್ವೆ ಮಾರ್ಗಗಳು ಇವುಗಳ ಖಾಸಗೀಕರಣ, ರೈತರ ಜಮೀನುಗಳನ್ನು ಬಂಡವಾಳಶಾಹಿಗಳು ಕೊಂಡು ರೈತರನ್ನು ಬೀದಿಪಾಲು ಮಾಡುವ ಇಲ್ಲವೇ ಶ್ರೀಮಂತರ ಗುಲಾಮರನ್ನಾಗಿಸುವ ಹುನ್ನಾರ, ಬೆಂಬಲ ಬೆಲೆ ಘೋಷಿಸದೆ ರೈತರು ಬೆಳೆದ ಬೆಳೆಗಳನ್ನು ಸರ್ಕಾರವೇ ಕೊಳ್ಳುತ್ತಿದ್ದ ಪದ್ಧತಿಯನ್ನು ರದ್ದುಗೊಳಿಸಿಸಲು ಮಾಡಿರುವ ಪ್ರಯತ್ನ, ಖಾಸಗಿಯವರು ಅವುಗಳನ್ನು ಕೊಳ್ಳುವ ಸೌಲಭ್ಯ ಒದಗಿಸಿಕೊಟ್ಟಿರುವುದು ಈ ಎಲ್ಲವೂ ರೈತ ವಿರೋಧಿ ತೀರ್ಮಾನಗಳೇ ಆಗಿವೆ. ಇವುಗಳ ವಿರುದ್ಧ ಒಂದು ಶಾಂತಿಯುತ ಹೋರಾಟ ನಡೆಸಿ ಜೈಲ್‌ಭರೋ ಕಾರ್ಯಾಚರಣೆಗೆ ಜನರನ್ನು ಅಣಿಗೊಳಿಸುವ ಕೆಲಸ ಜರೂರಾಗಿ ಆಗಬೇಕು.

ಬಿಜೆಪಿ ಸರ್ಕಾರದ ಈ ಜನವಿರೋಧಿ ನಿರ್ಧಾರಗಳು ರೈತ ಸಮೂಹವನ್ನೇ ಮಾತ್ರವಲ್ಲದೆ ಎಲ್ಲ ಸ್ಥರಗಳ ಜನರನ್ನೂ ಕಾಡುತ್ತಿರುವುದರಿಂದ ಜನಸಮೂಹ ದೊಡ್ಡ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಕೂಡಿಕೊಳ್ಳುತ್ತಾರೆಂಬುದು ನನ್ನ ಅಭಿಪ್ರಾಯ. ಅಲ್ಲದೆ ಇಂತಹ ಕಾರ್ಯಕ್ರಮ ಕೈಗೊಳ್ಳುವುದರಿಂದ ಸರ್ಕಾರ ತನ್ನ ಜನವಿರೋಧಿ, ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಇಲ್ಲವೇ ಮೋದಿ ರಾಜೀನಾಮೆ ಕೊಟ್ಟು ಹೋಗಬೇಕು ಎಂಬ ಪರಿಸ್ಥಿತಿಯನ್ನು ಉಂಟು ಮಾಡಲು ಸಹಕರಿಸುತ್ತದೆ. ಈ ಜೈಲ್‌ಭರೋ ಕಾರ್ಯಕ್ರಮ ಇದನ್ನು ಇನ್ನಷ್ಟು ತೀವ್ರಗೊಳಿಸುವುದರಲ್ಲಿ ಅನುಮಾನವಿಲ್ಲ.

ಭಾರತದ ಎಲ್ಲ ರಾಜ್ಯಗಳಲ್ಲೂ ಈ ಜೈಲ್‌ಭರೋ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ, ಮುಂದೆಂದೂ ಈ ಜನವಿರೋಧಿ, ರೈತ ವಿರೋಧಿ ರಾಜಕೀಯ ಪಕ್ಷಗಳು ಅವುಗಳ ರಾಜಕೀಯ ನಾಯಕರು ಇಂತಹ ದುಸ್ಸಾಹಸಕ್ಕೆ ಎಂದಿಗೂ ಕೈ ಹಾಕಲಾರರು ಎಂಬ ವಿಶ್ವಾಸ ನನಗಿದೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೋರಾಟ: ಮಾ.‌ 31 ಕ್ಕೆ ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...