ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ತಮ್ಮ ನಿಲುವನ್ನು ತೀಕ್ಷ್ಣಗೊಳಿಸಿದ್ದು, ಆಯೋಗವು ಬಿಜೆಪಿಯೊಂದಿಗೆ ನಿಂತಿದೆ. ತೃಣಮೂಲ ಕಾಂಗ್ರೆಸ್ ಇಂದು ಸಲ್ಲಿಸಿದ ಹಲವಾರು ದೂರುಗಳ ಬಗ್ಗೆ ನಿಷ್ಕ್ರಿಯವಾಗಿದೆ ಎಂದು ಗುರುವಾರ ಆರೋಪಿಸಿದ್ದಾರೆ.
“ನೀವು (ಚುನಾವಣಾ ಆಯೋಗ) ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಗೆಲ್ಲುವುದಿಲ್ಲ. ನಂದಿಗ್ರಾಮದಲ್ಲಿ, 90% ಮತಗಳು ಟಿಎಂಸಿಗೆ ಹೋಗುತ್ತವೆ” ಎಂದು ನಂದಿಗ್ರಾಮ ಕ್ಷೇತ್ರದ ಒಂದು ಮತದಾನ ಕೇಂದ್ರಕ್ಕೆ ಭೇಟಿ ನೀಡಿದಾಗ ಮಮತಾ ಹೇಳಿದ್ದಾರೆ. ಈ ಕೇಂದ್ರದಲ್ಲಿ ಅನೇಕ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಮಮತಾ ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಏಪ್ರಿಲ್ 1: ರಾಷ್ಟ್ರೀಯ ಜುಮ್ಲಾ ದಿನವನ್ನಾಗಿ ಆಚರಿಸಿದ ನೆಟ್ಟಿಗರು – #NationalJumlaDay ಟ್ರೆಂಡಿಂಗ್!
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು “ಬಿಜೆಪಿ ಗೂಂಡಾಗಳಿಗೆ” ಸಹಾಯ ಮಾಡಲು ಕೇಂದ್ರ ಪಡೆಗಳಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ಗೃಹ ಸಚಿವರು ಸ್ವತಃ ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಇತರ ಜವಾನರಿಗೆ ಬಿಜೆಪಿ ಮತ್ತು ಅದರ ಗೂಂಡಾಗಳಿಗೆ ಮಾತ್ರ ಸಹಾಯ ಮಾಡುವಂತೆ ಸೂಚಿಸುತ್ತಿದ್ದಾರೆ. ಮತದಾನ ಕೇಂದ್ರವನ್ನು ವಶಪಡಿಸಿರುವ ಬಗ್ಗೆ 63 ದೂರುಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ದ ಅವರ ಒಂದು ಕಾಲದ ಆಪ್ತ ಸುವೆಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಿ ಇದ್ದಾರೆ. ಈ ಕ್ಷೇತ್ರದಲ್ಲಿ ಇಂದು ಮತದಾನ ನಡೆಯಿತು. ಇಂದು ನಡೆದ ಎರಡನೇ ಹಂತದ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ರಾಜ್ಯದ 30 ಕ್ಷೇತ್ರಗಳಿಗೆ ಮತದಾನ ನಡೆಯಿತು. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಏಪ್ರಿಲ್ 29 ಕ್ಕೆ ಕೊನೆಗೊಳ್ಳುತ್ತದೆ. ಫಲಿತಾಂಶಗಳನ್ನು ಮೇ 2 ರಂದು ಪ್ರಕಟಿಸಲಾಗುವುದು.
ಇದನ್ನೂ ಓದಿ: ಅತ್ಯಾಚಾರ ಎಸಗಿದ ಇಬ್ಬರು ಸಿಆರ್‌ಪಿಎಫ್ ಅಧಿಕಾರಿಗಳ ಅಮಾನತು



Only gain 10% votes TMC nandi constancy