ಕೇಂದ್ರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಬಲಗೊಳ್ಳುತ್ತಿದೆ. ಗುರುವಾರ ಹರಿಯಾಣದ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಹೆಲಿಕಾಪ್ಟರ್ ಮೂಲಕ ಹಿಸಾರ್ ತಲುಪಿದ್ದು, ಅವರನ್ನು ಪ್ರತಿಭಟನಾ ನಿರತ ರೈತರು ಘೆರಾವ್ ಹಾಕಿದರು.
ಉಪ ಮುಖ್ಯಮಂತ್ರಿಯಿದ್ದ ಹೆಲಿಕಾಪ್ಟರ್ ಅನ್ನು ಹೋರಾಟಗಾರರು ಇಳಿಯಲು ಬಿಡದ ಕಾರಣ ಅದು ಬಂದ ದಾರಿಯಲ್ಲೇ ವಾಪಾಸ್ ಹೋದ ಘಟನೆ ನಡೆದಿದೆ.
#FarmersProtest gherao Haryana's Airport to prohibit Deputy CM Dushyant Chautala's chopper from landing in his own constituency of Hisar.
Farmers are trailing him. They go where he goes. Yesterday, they gheroed him in Panipat. Right now, they have gheroed his residence in Hisar. pic.twitter.com/cmz5dpV5kH
— Saahil Murli Menghani (@saahilmenghani) April 1, 2021
ರಾಜಸ್ಥಾನದ ಹನುಮಾನ್‌ಗಡದ ಡಬ್ಲಿ ಟೋಲ್ ಪ್ಲಾಜಾದಲ್ಲಿ ಪಿಲಿಬಂಗನ್ ಶಾಸಕ ಧರ್ಮೇಂದ್ರ ಸಿಂಗ್ ಅವರನ್ನು ಪ್ರತಿಭಟನಾ ನಿರತ ರೈತರು ಘೆರಾವ್ ಹಾಕಿದರು. ಚುನಾವಣೆ ಸಮಯದಲ್ಲಿ ರೈತರು ಮತ್ತು ಜನರೊಂದಿಗೆ ಭಾರಿ ಸ್ನೇಹ ವ್ಯಕ್ತಪಡಿಸುತ್ತಾರೆ. ಹೋರಾಟ ನಡೆಸುತ್ತಿರುವಾಗ ರೈತರ ವಿರುದ್ದವೆ ನಿಲ್ಲುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ನಡೆಯಲಿದೆ ಶೂಟಿಂಗ್ ಬಾಲ್ ಕಿಸಾನ್ ಪ್ರೀಮಿಯರ್ ಲೀಗ್!
ರೈತ ಸಂಘಟನೆಗಳು ಬಿಜೆಪಿಯ ಸಂಸದರು, ಅದರ ಮೈತ್ರಿಪಕ್ಷಳು ಹಾಗೂ ಇತರ ಚುನಾಯಿತ ಪ್ರತಿನಿಧಿಗಳಿಗೆ ರೈತರ ಪರವಾಗಿ ಬೆಂಬಲ ನೀಡುವಂತೆ ವಿನಂತಿಸುತ್ತಲೆ ಇವೆ. ಈ ಜನಪ್ರತಿನಿಧಿಗಳಿಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಮೂಲಕ ಹಾಗೂ ಇತರ ಯಾವುದೇ ರೂಪದಲ್ಲಿ ಬೆಂಬಲ ನೀಡಬಹುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ.
ಏಪ್ರಿಲ್ 5 ರಂದು ‘ಭಾರತೀಯ ಆಹಾರ ನಿಗಮ’ ಉಳಿಸಿ ದಿನ
ಏಪ್ರಿಲ್ 5 ರಂದು ‘ಭಾರತೀಯ ಆಹಾರ ನಿಗಮ ಉಳಿಸಿ ದಿನ’(ಎಫ್‌ಸಿಐ) ಎಂದು ಆಚರಿಸಲಾಗುವುದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಇದರ ಅಡಿಯಲ್ಲಿ ದೇಶಾದ್ಯಂತ ಎಫ್‌ಸಿಐ ಕಚೇರಿಗಳ ಮುಂದೆ ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ಘೆರಾವ್ ನಡೆಸಲಾಗುತ್ತದೆ.
ಈ ಹೋರಾಟದ ಮೂಲಕ ಎಲ್ಲಾ ಬೆಳೆಗಳನ್ನೂ ಖರೀದಿಸುವ ಖಾತರಿ ಇರಬೇಕು ಮತ್ತು ಪಡಿತರ ವ್ಯವಸ್ಥೆಯು ಪಾರದರ್ಶಕವಾಗಿ ಮತ್ತು ನಿಯಮಿತವಾಗಿ ಕಾರ್ಯನಿರ್ವಹಿಸಬೇಕು ಎಂದು ರೈತರು ಒತ್ತಾಯಿಸುತ್ತಾರೆ. ಇದು ಆಹಾರ ಬೆಳೆಗಾರರು ಮತ್ತು ಆಹಾರ ಸೇವಿಸುವವರ ಭವಿಷ್ಯದ ವಿಷಯವಾಗಿದ್ದು, ಆದ್ದರಿಂದ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತ ಸಂಘಟನೆಗಳು ರೈತರಿಗೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿವೆ.
ಇದನ್ನೂ ಓದಿ: ಭಾರತ್ ಬಂದ್: ದೇಶಾದ್ಯಂತ ನಡೆದ ಪ್ರತಿಭಟನೆಯ ಝಲಕ್ ಇಲ್ಲಿದೆ


