ಅಸ್ಸಾಂನಲ್ಲಿ ನಿನ್ನೆ ಎರಡನೇ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಮತದಾನದ ಅಂತ್ಯಕ್ಕೆ ಗಲಭೆಗೆ ತಿರುಗಿರುವ ಆತಂಕಕಾರಿ ಘಟನೆ ಜರುಗಿದೆ. ಅಸ್ಸಾಂನ ಬರಾಕ್ ಕಣಿವೆ ಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಮತದಾನ ಅಂತ್ಯಗೊಂಡ ನಂತರ ಕಾನೂನುಬಾಹಿರವಾಗಿ ಇವಿಎಂಗಳೊಂದಿಗೆ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಪ್ರಯಾಣ ಮಾಡಿದ್ದು ಹಿಂಸೆ ಭುಗಿಲೇಳಲು ಕಾರಣವಾಗಿದೆ.
ಕರೀಂಗಂಜ್ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ಇವಿಎಂ ಜೊತೆ ಹೋಗುತ್ತಿದ್ದನ್ನು ಪ್ರತಿಪಕ್ಷದ ಕಾರ್ಯಕರ್ತರು ತಡೆದು ಘೇರಾವ್ ಹಾಕಿದ್ದಾರೆ. ಗುಂಪು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠೀಚಾರ್ಜ್ ನಡೆಸಿದ್ದಾರೆ. ಆಗ ಹಿಂಸೆಗೆ ತಿರುಗಿದೆ.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣಾ ಆಯೋಗ ಪೂರ್ಣವಾಗಿ ಬಿಜೆಪಿಯೊಂದಿಗೆ ಶಾಮೀಲಾಗಿದೆ. ಈ ಚುನಾವಣೆಗೆ ಅರ್ಥವಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರುವುದನ್ನು ನೋಡಬಹುದು.
ಕರೀಮ್‌ಗಂಜ್‌ನ ರತನಾರಿ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ಇವಿಎಂಗಳನ್ನು ಸರ್ಕಾರಿ ಭದ್ರತಾ ವಾಹನದಲ್ಲಿ ಇವಿಎಂಗಳನ್ನು ಇರಿಸುವ ಸ್ಟ್ರಾಂಗ್ ರೂಂಗೆ ಸಾಗಿಸಬೇಕಿತ್ತು. ಆದರೆ ತಮಗಾಗಿ ನಿಯೋಜಿಸಿದ ವಾಹನ ಕೆಟ್ಟುಹೋದ ಕಾರಣ ಬದಲಿ ವಾಹನಕ್ಕಾಗಿ ಚುನಾವಣಾ ಅಧಿಕಾರಿಗಳು ಸೆಕ್ಟರ್ ಅಧಿಕಾರಿಯನ್ನು ಸಂಪರ್ಕಿಸಿದ್ದರು. ಕೆಲ ಗಂಟೆಗಳಲ್ಲಿ ವಾಹನ ಕಳಿಸುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಆದರೂ ಮತದಾನದ ಸಿಬ್ಬಂದಿ ಖಾಸಗಿ ವಾಹನದಲ್ಲಿ ಇವಿಎಂಗಳೊಂದಿಗೆ ಸ್ಟ್ರಾಂಗ್ ರೂಂ ತಲುಪಿದ್ದಾರೆ. ಆ ಕಾರು ಕರೀಮ್‌ಗಂಜ್ ಜಿಲ್ಲೆಯ ಪಥಾರ್ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಸೇರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ಉಲ್ಲೇಖಿಸಿದೆ.
ಆ ಕಾರು ಸ್ಟ್ರಾಂಗ್ ರೂಂ ಬಳಿ ಬರುತ್ತಿದ್ದಂತೆ ರೊಚ್ಚಿಗೆದ್ದ ವಿರೋಧ ಪಕ್ಷದ ಬೆಂಬಲಿಗರು ಕಾರನ್ನು ಸುತ್ತುವರಿದು ಘೋಷಣೆ ಕೂಗಿದ್ದಾರೆ. ಕಾರಿನ ಡ್ರೈವರ್ ಸೇರಿದಂತೆ ಪೊಲೀಸರು ಸ್ಥಳದಿಂದ ಪರಾರಿಯಾದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ಜಿಲ್ಲಾಡಳಿತ ಶಾಂತಿ ಕಾಪಾಡಲು ಲಾಠೀಚಾರ್ಜ್ ಮಾಡಲು ಆದೇಶ ನೀಡಿತು. ಇವಿಎಂಗಳು ಸುರಕ್ಷಿತವಾಗಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
This is the only way the BJP can win Assam: by looting EVMs. EVM capturing, like there used to be booth capturing. All under the nose of the Election Commission. Sad day for democracy. #EVM_theft_Assam #AssamAssemblyElection2021 https://t.co/5dmlu67Uui
— Gaurav Gogoi (@GauravGogoiAsm) April 1, 2021
ಈ ಘಟನೆಯನ್ನು ಅಸ್ಸಾಂ ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಇವಿಎಂಗಳನ್ನು ವಶಪಡಿಸಿಕೊಂಡು ತಿರುಚುತ್ತಿದೆ. ಕೇವಲ ಇದೊಂದೇ ಮಾರ್ಗದಲ್ಲಿ ಮಾತ್ರ ಬಿಜೆಪಿ ಅಸ್ಸಾಂನಲ್ಲಿ ಜಯಗಳಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಗೌರವ್ ಗೊಗೊಯ್ ಆರೋಪಿಸಿದ್ದಾರೆ.
Polarisation? Failed.
Buying votes? Failed.
Buying candidates? Failed.
Jumle-baazi? Failed.
Double CMs? Failed.
Doublespeak on CAA? Failed.
Loser BJP’s last resort: steal the EVMs.
Murder of democracy.#EVM_theft_Assam #AssamAssemblyElection2021 https://t.co/2TRZRFvqDb— Maulana Badruddin Ajmal (@BadruddinAjmal) April 2, 2021
ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಎಐಯುಡಿಎಫ್ ಮುಖಂಡ ಮೌಲನಾ ಬದ್ರುದ್ದೀನ್ ಅಜ್ಮಲ್ ಸೇರಿದಂತೆ ಹಲವಾರು ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ: ಜಾಹೀರಾತನ್ನು ಸುದ್ದಿಯ ರೂಪದಲ್ಲಿ ನೀಡಿದ ಬಿಜೆಪಿ; ಕಾಂಗ್ರೆಸ್‌ನಿಂದ ದೂರು ದಾಖಲು


