ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ANI ಪತ್ರಕರ್ತನ ಮೇಲೆ ಅಶ್ಲೀಲ ಬೈಗುಳಗಳ ದಾಳಿ ನಡೆಸಿದ ವಿಡಿಯೊ ಒಂದು ಈಗ ವೈರಲ್ ಆಗಿದೆ. ಅವರ ಮಾಧ್ಯಮ ಸಲಹೆಗಾರ ಫ್ಯಾಕ್ಟ್‌ಚೆಕ್ ಒಂದನ್ನು ಹಂಚಿಕೊಂಡಿದ್ದು, ವಿಡಿಯೋದ ಕೊನೆಯ ಭಾಗವನ್ನು ತಿರುಚಿ ಎಡಿಟ್ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
⚠WARNING: Fake Yogi's non-sanskari language ahead. pic.twitter.com/JHHJBhjQrY
— AAP (@AamAadmiParty) April 5, 2021
ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಯೋಗಿ ಆದಿತ್ಯನಾಥ್ ಅವರು ಸುದ್ದಿ ಸಂಸ್ಥೆ ಎಎನ್‌ಐನ ಕ್ಯಾಮೆರಾಮನ್ ಕುರಿತು ಅಸಭ್ಯವಾಗಿ ಮಾತಾಡುವ ಹೊತ್ತಿನಲ್ಲಿ ಕಟ್ ಆಗುತ್ತದೆ. ಇಂದು ಬೆಳಿಗ್ಗೆ ಕೋವಿಡ್ ಲಸಿಕೆಯ ಮೊದಲ ಶಾಟ್ ತೆಗೆದುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಹೇಳಿದ ನಂತರ ಮುಖ್ಯಮಂತ್ರಿ ಮಾತನಾಡುತ್ತಿದ್ದರು.
ವೀಡಿಯೊವನ್ನು ಹೆಚ್ಚು ಹೆಚ್ಚು ಆನ್‌ಲೈನ್‌ನಲ್ಲಿ ಜನರು ವೀಕ್ಷಿಸುತ್ತಿದ್ದಂತೆ, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಶಲಾಭ್ ಮಣಿ ತ್ರಿಪಾಠಿ ಅವರು “ಬ್ರೇಕಿಂಗ್ ಟ್ಯೂಬ್” ಎಂಬ ವೆಬ್‌ಸೈಟ್‌ನ ‘ಫ್ಯಾಕ್ಟ್ ಚೆಕ್’ ವರದಿಯನ್ನು ರಿಟ್ವೀಟ್ ಮಾಡಿದ್ದಾರೆ. ಈ ವರದಿಯ ಪ್ರಕಾರ ವಿಡಿಯೋ ಕ್ಲಿಪ್‌ನ ಕೊನೆಯ ಮೂರು ಸೆಕೆಂಡುಗಳನ್ನು (ಯೋಗಿಯ ಬೈಗುಳ ಇರುವ ಕ್ಷಣಗಳು) ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಸಲಹೆಗಾರರು ನೀಡಿದ ಫ್ಯಾಕ್ಟ್‌ಚೆಕ್ ವರದಿಯಲ್ಲಿ ಫ್ಯಾಕ್ಟ್ ಚೆಕ್ ಬಗ್ಗೆ ಯಾವುದೇ ವಿವರಗಳಿಲ್ಲ, ಅವರ “ನಕಲಿ” ವಿಡಿಯೋವನ್ನು ಪ್ರಸಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಮಾತ್ರ ಅದು ಹೇಳುತ್ತದೆ.
ಟ್ವಿಟ್ಟರ್‌ನಲ್ಲಿ ಯೋಗಿ ಅವರನ್ನು ತರಾಟೆಗೆ ತೆಗೆದುಕೊಂಡ ಹಲವರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಪ್ರಮುಖರು. “ದಯವಿಟ್ಟು ಈ ’ಗಣ್ಯವ್ಯಕ್ತಿ’ಯಿಂದ ಪತ್ರಕರ್ತರಿಗೆ ಸಲ್ಲಿಕೆಯಾದ ಸಿಹಿ ಪದಗಳನ್ನು ಕೇಳಿ. ಆದರೆ ಹೆಡ್‌ಫೋನ್‌ಗಳನ್ನು ಬಳಸಿ ಮತ್ತು ಮಕ್ಕಳಿಂದ ದೂರವಿರಿ; ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ವೀಡಿಯೊವನ್ನು ಹಂಚಿಕೊಂಡಿಲ್ಲ.
ಎಎನ್‌ಐ ಹೊಸ ಐದು ನಿಮಿಷಗಳ ಯೋಗಿ ಆದಿತ್ಯನಾಥ್ ಅವರ ವಿಡಿಯೋ ಅನ್ನು ಟ್ವೀಟ್ ಮಾಡಿದೆ. ಮತ್ತು ಟ್ವೀಟ್‌ನಲ್ಲಿ ಹೀಗೆ ಹೇಳಿದೆ – “ಸಂಪಾದಕರ ಟಿಪ್ಪಣಿ: ಈ ಹಿಂದೆ ನೀಡಲಾದ ಲೈವ್ ಸೌಂಡ್ ಬೈಟ್ ಅನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದು ಬರೆಯಲಾಗಿದೆ.
Video byte of UP CM Yogi Adityanath on Covid vaccination
(Editors note: Earlier issued Live Sound byte is retracted) pic.twitter.com/td9qQHSnrX
— ANI UP (@ANINewsUP) April 5, 2021
ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಅವರ ಟ್ವೀಟ್‌ನಲ್ಲಿ ಈ ವಿಡಿಯೋ ಮೊದಲು ಹೊರಬಿದ್ದಿದೆ. “ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿಜವಾದ ಮುಖ. ಸಂತನ ಭಾಷೆಯನ್ನು ಆಲಿಸಿ” ಎಂದು ಹಿಂದಿಯಲ್ಲಿ ಅವರು ಟ್ವೀಟ್ ಮಾಡಿದ್ದರು.
ಇತ್ತ ಉತ್ತರಪ್ರದೇಶದಲ್ಲಿ ಕನಿಷ್ಠ ಎರಡು ಪ್ರಾದೇಶಿಕ ಚಾನೆಲ್‌ಗಳ ಬೆಳಗಿನ ಪ್ರಸಾರದ ನಂತರ ವೀಡಿಯೊಗಳು ಸಾರ್ವತ್ರಿಕವಾದವು.
ವಿಡಿಯೋ ಎಡಿಟ್ ಮಾಡಿಲ್ಲ: ಆಲ್ಟ್‌ನ್ಯೂಸ್ ವರದಿ
ಇನ್ನು ಯುಪಿ ಸಿಎಂ ಅಶ್ಲೀಲವಾಗಿ ಬೈದಿರುವ ವಿಡಿಯೋವನ್ನು ಕೊನೆಯ ಮೂರು ಸೆಕೆಂಡ್‌ಗಳು ಎಡಿಟ್ ಮಾಡಿಲ್ಲ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
ಆಲ್ಟ್ ನ್ಯೂಸ್ ಎಎನ್‌ಐ ಪ್ರಧಾನ ಸಂಪಾದಕಿ ಸ್ಮಿತಾ ಪ್ರಕಾಶ್ ಅವರನ್ನು ಸಂಪರ್ಕಿಸಿದಾಗ “ನಾನು ನಿಮ್ಮೊಂದಿಗೆ ಮಾತನಾಡಲು ಆಸಕ್ತಿ ಹೊಂದಿಲ್ಲ” ಎಂದು ಅವರು ಫೋನ್ ಕಟ್ ಮಾಡುವ ಮೊದಲು ಹೇಳಿದರು. ಎಎನ್‌ಐ ಯುಪಿ ಬ್ಯೂರೋ ಮುಖ್ಯಸ್ಥ ಕಮ್ನಾ ಹಜೇಲಾ ಅವರು ವಿಡಿಯೋ ಬಗ್ಗೆ ಕೇಳಿದಾಗ ಕರೆ ಸಂಪರ್ಕ ಕಡಿತಗೊಳಿಸಿದ್ದಾರೆ” ಎಂದು ಅದು ವರದಿಯಲ್ಲಿ ತಿಳಿಸಿದೆ.
ಎಎನ್‌ಐ ಆ ಅಶ್ಲೀಲ ಬೈಗುಳದ ವೀಡಿಯೊವನ್ನು ಹಿಂತೆಗೆದುಕೊಂಡರೂ, ಅದು ಇತರ ಚಾನೆಲ್‌ಗಳ ಪ್ರಸಾರಗಳಲ್ಲಿ ಇನ್ನೂ ಲಭ್ಯವಿದೆ. ಎಬಿಪಿ ಗಂಗಾ, ನ್ಯೂಸ್18 ಉತ್ತರ ಪ್ರದೇಶ, ಫಸ್ಟ್ ನ್ಯೂಸ್ ರಾಜಸ್ಥಾನ್ ಚಾನೆಲ್‌ಗಳು ಅದನ್ನು ಪ್ರಸಾರ ಮಾಡಿವೆ.
ದೀಪಕ್ ಚೌರಾಸಿಯ, ಒಪಿಇಂಡಿಯಾ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಆದಿತ್ಯನಾಥ್ ಅವರ ರಕ್ಷಣೆಗೆ ಬಿಜೆಪಿ ಪರ ಟ್ವಿಟರ್ ಹ್ಯಾಂಡಲ್‌ಗಳು ಬಂದಿವೆ. ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿ ಆ ಮೂರು ಸೆಕೆಂಡುಗಳ ಹೊರತಾಗಿ, ಹೊಸದಾಗಿ ಎಎನ್‌ಐ ಟ್ವೀಟ್ ಮಾಡಿದ ಎರಡನೇ ವಿಡಿಯೋದಲ್ಲಿ ಅದೇ ಪದಗಳನ್ನು ಬಳಸಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ ಎಂದು ಸಮರ್ಥಿಸಿಕೊಳ್ಳಲಾಗಿದೆ. ಆದರೆ ಆ ಮಾತುಗಳಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ.
सीएम योगी के आपत्तिजनक शब्द बोलने का मामला। एडिटेड निकला सीएम योगी का Video, वीडियो के आखिरी 3 सेकेंड में जोड़े गए आपत्तिजनक शब्द। @shalabhmani
— Deepak Chaurasia (@DChaurasia2312) April 5, 2021
ಮೊದಲ ವಿಡಿಯೋದಲ್ಲಿ ಯುಪಿ ಸಿಎಂ ಹೀಗೆ ಹೇಳುತ್ತಾರೆ. “ಕೋವಿಡ್ ಲಸಿಕೆ ಉಚಿತವಾಗಿ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿ, ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಾನು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಏನು ಮಾಡುತ್ತಿದ್ದೀರಿ, ******”… ಇದರಲ್ಲಿ ಆರೋಗ್ಯ ಸಚಿವಾಲಯದ ಉಲ್ಲೇಖವನ್ನು ಎಎನ್‌ಐ ಕೂಡ ಟ್ವೀಟ್ ಮಾಡಿದೆ.
ಆದರೆ ನಂತರ ಚಿತ್ರೀಕರಿಸಿರುವ 5 ನಿಮಿಷಗಳ ವಿಡಿಯೋದಲ್ಲಿ “ಕೇಂದ್ರ ಆರೋಗ್ಯ ಸಚಿವಾಲಯದ ಬಗ್ಗೆ ಸಿಎಂ ಉಲ್ಲೇಖಿಸಿಲ್ಲ. “ದೇಶದ ನಾಗರಿಕರಿಗೆ COVID ಲಸಿಕೆ ಉಚಿತವಾಗಿ ನೀಡಿದ ಗೌರವಾನ್ವಿತ ಪ್ರಧಾನಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಭಾರತದಲ್ಲಿ ಈ ಸಮಯಕ್ಕೆ ಎರಡು ಲಸಿಕೆಗಳನ್ನು ಬಿಡುಗಡೆ ಮಾಡಿದ ಎಲ್ಲ ವಿಜ್ಞಾನಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ… ” ಎಂದಷ್ಟೇ ಅವರು ಹೇಳಿದ್ದಾರೆ.
ಹಾಗಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಜಕ್ಕೂ ಎಎನ್‌ಐ ಸಿಬ್ಬಂದಿಯ ಸಮ್ಮುಖದಲ್ಲಿ ನಿಂದನೀಯ ಪದವನ್ನು ಬಳಸಿದ್ದಾರೆ. ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂಬ ಪ್ರತಿಪಾದನೆ ಸುಳ್ಳಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿವಾದದ ಕೇಂದ್ರದಲ್ಲಿರುವ ಎಎನ್‌ಐ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸದಿರಲು ನಿರ್ಧರಿಸಿದೆ.
ಇದನ್ನೂ ಓದಿ: ತನ್ನ ವಿರುದ್ಧದ ಮಾನಹಾನಿ ಪ್ರಕರಣ ರದ್ದತಿ ಕೋರಿ ಕಂಗನಾ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಕೋರ್ಟ್


