ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬಂಗಾಳದಲ್ಲಿ ಪ್ರಚಾರ ಮಾಡಿದ್ದು, ಅಸನ್ಸೋಲ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹೆಚ್ಚಿನ ಜನಸಮೂಹವನ್ನು ನೋಡಿ, ನಾನು ಇಂತಹ ರ‍್ಯಾಲಿ ಎಂದೂ ನೋಡಿರಲಿಲ್ಲ ಎಂದು ಉದ್ಘರಿಸಿದ್ದಾರೆ. ನಂತರ ಕಾಂಗ್ರೆಸ್ ಸೇರಿದಂತೆ ಹಲವರು ಇದನ್ನು ವ್ಯಾಪಕವಾಗಿ ಟೀಕಿಸಿದ್ದು, ಕಾಂಗ್ರೆಸ್ ಪ್ರಧಾನಿಯವರನ್ನು ರೋಮ್ ದೊರೆ ನೀರೊಗೆ ಹೋಲಿಕೆ ಮಾಡಿದೆ.
ಒಂದು ದಿನದಲ್ಲಿ ಭಾರತವು 2.6 ಲಕ್ಷ ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 16.8 ಲಕ್ಷ ತಲುಪಿರುವಾಗ ಪ್ರಧಾನಿ ಭಾರಿ ಜನಸ್ತೋಮ ಸೇರಿದ್ದನ್ನು ಹೊಗಳಿದ್ದು ಕೆಲವರ ಟೀಕೆಗೆ ಕಾರಣವಾಗಿದೆ.
ಕಾಂಗ್ರೆಸ್ ಪ್ರಧಾನಿಯವರನ್ನು ರೋಮ್ ದೊರೆ ನೋರೊಗೆ ಹೋಲಿಸಿ ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಹಾಕಿ ವ್ಯಂಗ್ಯ ಮಾಡಿದೆ.
“ಲೋಕಸಭಾ ಚುನಾವಣೆಯ ಸಮಯದಲ್ಲಿ ನಾನು ಎರಡು ಬಾರಿ ಇಲ್ಲಿಗೆ ಬಂದಿದ್ದೇನೆ. ಕೊನೆಯ ಬಾರಿ ನಾನು ಬಾಬುಲ್ಜಿಗೆ (ಅಸನ್ಸೋಲ್ ಸಂಸದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ) ಮತ ಕೇಳಲು ಬಂದಿದ್ದೆ. ಆಗ ಜನಸಮೂಹವು ಇದರಲ್ಲಿ ಕಾಲು ಭಾಗ ಮಾತ್ರವಿತ್ತು’ ಎಂದು ಅವರು ಹೇಳಿದರು.
“ಆದರೆ ಇಂದು, ಎಲ್ಲಾ ದಿಕ್ಕುಗಳಲ್ಲಿಯೂ ನಾನು ಅಪಾರ ಜನಸಂದಣಿಯನ್ನು ನೋಡುತ್ತಿದ್ದೇನೆ … ಮೊದಲ ಬಾರಿಗೆ ಇಂತಹ ರ‍್ಯಾಲಿಗೆ ಸಾಕ್ಷಿಯಾಗಿದ್ದೇನೆ… ಇಂದು, ನೀವು ನಿಮ್ಮ ಶಕ್ತಿಯನ್ನು ತೋರಿಸಿದ್ದೀರಿ. ಮುಂದಿನ ಹಂತವು ಹೆಚ್ಚು ಮುಖ್ಯವಾಗಿದೆ – ಹೋಗಿ ಮತ ಚಲಾಯಿಸಿ ಇತರರನ್ನು ಸಹ ನಿಮ್ಮ ಜೊತೆ ಕರೆದೊಯಿರಿ’ ಎಂದು ಪ್ರಧಾನಿ ಮೋದಿ ಹೇಳಿದರು. ಏಪ್ರಿಲ್ 26 ರಂದು ಅಸನ್ಸೋಲ್‌ನಲ್ಲಿ ಮತದಾನ ನಡೆಯಲಿದೆ.
ಸೋಂಕಿನ ಎರಡನೇ ಅಲೆಯನ್ನು ದೇಶವು ಎದುರಿಸುತ್ತಿರುವ ಕಾರಣ ಚುನಾವಣಾ ರ‍್ಯಾಲಿಗಳಲ್ಲಿ ಪ್ರಧಾನಮಂತ್ರಿ ನಿರಂತರವಾಗಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.
ರಾಜ್ಯ ಚುನಾವಣೆಗೆ ಪ್ರಚಾರ ಮಾಡುತ್ತಿರುವ ಪ್ರಧಾನಿ ಮತ್ತು ಇತರ ರಾಜಕೀಯ ಮುಖಂಡರನ್ನು ಸ್ಪಷ್ಟವಾಗಿ ಟೀಕಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ: “ಇಂತಹ ದೊಡ್ಡ ಸಂಖ್ಯೆಯ ಅನಾರೋಗ್ಯ ಪೀಡಿತರು ಮತ್ತು ದಾಖಲೆಯ ಸಾವುಗಳು ಕಂಡುಬರುತ್ತಿರುವುದು ಇದೇ ಮೊದಲು” ಎಂದು ಅವರು ಪ್ರಧಾನಿಗೆ ಕುಟುಕಿದ್ದಾರೆ. ಅಲ್ಲದೇ ತಮ್ಮ ಬಂಗಾಳದ ಎಲ್ಲಾ ಚುನಾವಣಾ ರ‍್ಯಾಲಿಗಳನ್ನು ರಾಹುಲ್ ರದ್ದು ಮಾಡಿದ್ದಾರೆ.
The fact is, to Star Campaigner Narendra Modi, Indians are nothing more than the votes they can give him. pic.twitter.com/wAWFQA5lIb
— Congress (@INCIndia) April 17, 2021
“ರೋಮ್ ಸುಟ್ಟುಹೋದಾಗ (ಚಕ್ರವರ್ತಿ) ನೀರೋ ಪಿಟೀಲು ಬಾರಿಸಿದಂತೆ ಸಾಂಕ್ರಾಮಿಕ ಸಮಯದಲ್ಲಿ ಪ್ರಚಾರಕ್ಕೆ ಆದ್ಯತೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿಯನ್ನು ಟೀಕಿಸಿದ ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಎರಡೂವರೆ ನಿಮಿಷಗಳ ವೀಡಿಯೊವನ್ನು ಪೋಸ್ಟ್ ಮಾಡಿದೆ.
ಬಿಜೆಪಿ, ಕಾಂಗ್ರೆಸ್, ಮತ್ತು ಬಂಗಾಳದ ಆಡಳಿತಾರೂಡ ತೃಣಮೂಲ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ರ‍್ಯಾಲಿಗಳಲ್ಲಿ ಕೊವಿಡ್ ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಕಾರಣಕ್ಕೆ ಬಂಗಾಳದ ನನ್ನ ಎಲ್ಲಾ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸುತ್ತೇನೆ: ರಾಹುಲ್ ಗಾಂಧಿ



Fraudster