ಕೊರೊನಾ

ಕೋವಿಡ್ ಎರಡನೇ ಅಲೆ ತೀವ್ರಗೊಂಡಿರುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಿಲ್ಲಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ದೊಡ್ಡ ಕೂಗು ಕೇಳಿಬಂದಿತ್ತು. ಈ ಕುರಿತು ಮಹತ್ವದ ನಿರ್ಧಾರ ಘೋಷಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೋವಿಡ್ ಕಾರಣಕ್ಕೆ ಬಂಗಾಳದ ನನ್ನ ಎಲ್ಲಾ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸುತ್ತೇನೆ ಎಂದು ತೀರ್ಮಾನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಈ ಆತಂಕಕಾರಿ ಪರಿಸ್ಥಿತಿಯಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಗಳನ್ನು ನಡೆಸಬೇಕೆ ಎಂಬುದರ ಕುರಿತು ಇತರ ಪಕ್ಷಗಳ ರಾಜಕೀಯ ನಾಯಕರು ಯೋಚಿಸಬೇಕೆಂದು ಸಲಹೆ ನೀಡುತ್ತೇನೆ” ಎಂದು ರಾಹುಲ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಿನ್ನೆ 5ನೇ ಹಂತದ ಮತದಾನ ಮುಗಿದಿದ್ದು ಇನ್ನೂ ಮೂರು ಹಂತದ ಚುನಾವಣೆ ಬಾಕಿ ಇದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಲವಾರು ಕಡೆ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು.

ಹೆಚ್ಚುತ್ತಿರುವ ಕೋವಿಡ್ ಕಾರಣಕ್ಕೆ ಬಂಗಾಳ ಕೊನೆಯ ನಾಲ್ಕು ಹಂತದ ಚುನಾವಣೆಯನ್ನು ಒಂದೇ ಹಂತದಲ್ಲಿ ಮಾಡುವಂತೆ ಟಿಎಂಸಿ ಚುನಾವಣಾ ಆಯೋಗವನ್ನು ಕೋರಿತ್ತು. ಆದರೆ ಚುನಾವಣಾ ಆಯೋಗ ಆ ಬೇಡಿಕೆಯನ್ನು ನಿರಾಕರಿಸಿದೆ.


ಇದನ್ನೂ ಓದಿ: ಕೊರೊನಾ ಎರಡನೆ ಅಲೆಗೆ ವೇದಿಕೆ ಒದಗಿಸಿದ್ದು ಮೋದಿ ಸರ್ಕಾರದ ಅಪಕ್ವ ನಿರ್ಧಾರಗಳು, ಕಣ್ಕಟ್ಟು ಅಂಕಿಅಂಶಗಳು…

LEAVE A REPLY

Please enter your comment!
Please enter your name here