ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರಿಗೆ (88) ಕೊರೊನಾ ಸೋಂಕು ತಗುಲಿದ್ದು ಅವರನ್ನು ದೆಹಲಿಯ ಏಮ್ಸ್‌ನ ತುರ್ತು ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ. ಅವರಿಗೆ ಜ್ವರ ಕಾಣಿಸಿಕೊಂಡ ನಂತರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಅವರನ್ನು ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ಡಾ. ಮನಮೋಹನ್ ಸಿಂಗ್ ಅವರು ಈಗಾಗಲೇ ಎರಡು ಡೋಸ್ ಲಸಿಕೆ (ಕೊವಾಕ್ಸಿನ್) ಸ್ವೀಕರಿಸಿದ್ದಾರೆ. ಮೊದಲನೆಯದು ಮಾರ್ಚ್ 4 ರಂದು ಮತ್ತು ಎರಡನೆಯದು ಏಪ್ರಿಲ್ 3 ರಂದು ಅವರಿಗೆ ಲಸಿಕೆ ನೀಡಲಾಗಿದೆ. ಆದರೂ ಅವರಿಗೆ ಕೊರೊನಾ ಸೋಂಕು ತಗುಲಿದೆ.
Dear Dr. Manmohan Singh Ji,
Wishing you a speedy recovery.
India needs your guidance and advice in this difficult time.— Rahul Gandhi (@RahulGandhi) April 19, 2021
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮಾಜಿ ಸಚಿವ ಚಿದಂಬರಂ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಚಿತ್ರನಟಿ ಸ್ವರಭಾಸ್ಕರ್ ಸೇರಿದಂತೆ ಹಲವರು ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.
ಇದನ್ನೂ ಓದಿ: ಯುಪಿಯ 5 ನಗರಗಳಲ್ಲಿ ಏ.26ರವರೆಗೆ ಲಾಕ್ ಡೌನ್ ಜಾರಿಗೆ ಹೈಕೋರ್ಟ್ ಆದೇಶ


