2020-21 ಶೈಕ್ಷಣಿಕ ವರ್ಷದ 1 ರಿಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸದೆ, ಇದುವರೆಗೆ ನಡೆದಿರುವ ಆಂತರಿಕ ಪರೀಕ್ಷೆಗಳು ಮತ್ತು ಅಸೈನ್‌ಮೆಂಟ್ ಆಧಾರದ ಮೇಲೆ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಮಂಗಳವಾರ ಸೂಚನೆ ನೀಡಿದೆ.
ಫಲಿತಾಂಶವನ್ನು ಎಪ್ರಿಲ್ 30 ರ ಒಳಗೆ ನೀಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
1 ರಿಂದ 8 ನೇ ವರೆಗಿನ ತರಗತಿ ಇರುವ ಪ್ರಾಥಮಿಕ ಶಾಲೆಗಳಿಗೆ ಮೇ 1 ರಿಂದ ಜೂನ್ 14 ರವರೆಗೆ ಇಲಾಖೆಯು ಬೇಸಿಗೆ ರಜೆ ಘೋಷಣೆ ಮಾಡಿದೆ. 8 ನೇ ಮತ್ತು 9 ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ಮೇ 1 ರಿಂದ ಜುಲೈ 14 ರವರೆಗೆ ಬೇಸಿಗೆ ರಜೆ ಘೋಷಣೆಯಾಗಿದೆ.
ಆದರೆ ಹಲವು ಶಾಲೆಗಳಲ್ಲಿ ಈಗಾಗಲೆ ಬೇಸಿಗೆ ರಜೆ ಪ್ರಾರಂಭವಾಗಿದೆ.
ಇದನ್ನೂ ಓದಿ: ‘ಜೈಶ್ರೀರಾಮ್’ ಹೇಳದೇ ಇದ್ದುದಕ್ಕೆ 10 ವರ್ಷದ ಬಾಲಕನನ್ನು ತೀವ್ರವಾಗಿ ಥಳಿಸಿದ ಬಿಜೆಪಿ ಕಾರ್ಯಕರ್ತ!
ಫಲಿತಾಂಶ ಮೌಲ್ಯ ಮಾಪನ ಮಾಡಲು 1 ರಿಂದ 5 ನೇ ತರಗತಿ ಮತ್ತು 6 ರಿಂದ 9 ನೇ ತರಗತಿಗಳವರೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಪ್ರೌಢಶಾಲೆಗಳ ಶಿಕ್ಷಕರಿಗೆ ಜೂನ್ 15ರಿಂದ ಜುಲೈ 14 ರವರೆಗೆ ಬೇಸಿಗೆ ರಜೆ ಇರುತ್ತದೆ. ಜೂನ್ 21ರಿಂದ ಜುಲೈ 5 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತದೆ. ಮುಂದಿನ ಶೈಕ್ಷಣಿಕ ವರ್ಷವನ್ನು ಜೂನ್ 15 ರಂದು ಪ್ರಾರಂಭಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೇಳಿದೆ.
ಇದನ್ನೂ ಓದಿ: ಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?


