- Advertisement -
- Advertisement -
ಕೊರೊನಾ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಂಗಳವಾರದಂದು ನಡೆದ ಸರ್ವಪಕ್ಷಗಳ ಸಭೆಯ ನಂತರ ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಹೇರುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಜೊತೆಗೆ ಮುಂದಿನ 14 ದಿನಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಕೂಡಾ ಸರ್ಕಾರ ಬಿಡುಗಡೆ ಮಾಡಿದೆ.
ಕೊರೊನಾ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ.
- ರಾಜ್ಯದ ಪ್ರತಿ ಜಿಲ್ಲೆಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ವರೆಗೆ (ಏಪ್ರಿಲ್ 21 ರಿಂದ ಮೇ 4 ರವರೆಗೆ) ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
- ಆದರೆ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಪ್ಯು ಜಾರಿಯಲ್ಲಿರಲಿದೆ.
- ಶಾಲೆ, ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆಗಲಿದ್ದು, ಆನ್ಲೈನ್ ತರಗತಿಗೆ ಮಾತ್ರವೇ ಅವಕಾಶ ನೀಡಲಾಗಿದೆ.
ಇದನ್ನು ಓದಿ: ಆಕ್ಸಿಜನ್‌ಗಾಗಿ ರೋಗಿಗಳು ಕಾಯಬೇಕೆಂದು ಹೇಳುತ್ತೀರಾ?: ಕೇಂದ್ರದ ವಿರುದ್ಧ ಕಿಡಿಕಾರಿದ ಹೈಕೋರ್ಟ್
- ಸಿನಿಮಾ ಹಾಲ್ಗಳು, ಶಾಪಿಂಗ್ ಮಾಲ್ಗಳು, ಜಿಮ್, ಯೋಗಾ ಸೆಂಟರ್, ಸ್ವಿಮ್ಮಿಂಗ್ ಪೂಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ಪಾ, ಬಾರ್, ಆಡಿಟೋರಿಯಂನಂತಹ ಸ್ಥಳಗಳು ಮುಚ್ಚಲಾಗುವುದು. ಆದರೆ, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾದಿಂದ ಅನುಮತಿ ಪಡೆದ ಸ್ವಿಮ್ಮಿಂಗ್ ಫೂಲ್ಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
- ಸಾರ್ವಜನಿಕ, ರಾಜಕೀಯ ಸೇರಿ ಎಲ್ಲ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದ್ದು, ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗುವುದು.
- ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ ಮಾತ್ರಕ್ಕೆ ಅವಕಾಶ ನೀಡಲಾಗಿದೆ.
- ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ ನೀಡಲಾಗಿದೆ.
- ಅಗತ್ಯ ಆಹಾರ ವಸ್ತುಗಳಾದ ದಿನಸಿ, ಹಣ್ಣು, ತರಕಾರಿ ಅಂಗಡಿಗಳು, ಹಾಲಿನ ಡೈರಿ, ಮೀನು ಮತ್ತು ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
- ಲಾಡ್ಜ್ಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ.
ಇದನ್ನು ಓದಿ: ಪ್ರಧಾನಿ ‘ಕೊರೊನಾ ವಾರಿಯರ್’ ಇದ್ದಂತೆ, ಸೋಂಕಿನ ವಿರುದ್ದ ಹೋರಾಡಲು 24×7 ಸಭೆ ನಡೆಸುತ್ತಾರೆ: ಕೇಂದ್ರ
- ಮದ್ಯದ ಅಂಗಡಿಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶ ನೀಡಲಾಗಿದೆ.
- ಬ್ಯಾಂಕ್, ಇನ್ಶೂರೆನ್ಸ್, ಮಾಧ್ಯಮ ಸಂಸ್ಥೆಗಳಿಗೆ ಅನುಮತಿ.
- ಇ ಕಾಮರ್ಸ್ ವೇದಿಕೆಯಲ್ಲಿ ಡೆಲಿವರಿ ಮಾಡಲು ಅನುಮತಿ.
- ಐಟಿ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಬೇರೆಲ್ಲ ಸಿಬ್ಬಂದಿಗೆ ಮನೆಯಲ್ಲೇ ಕೆಲಸ ಮಾಡಲು ನಿರ್ದೇಶನ.
- ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ.
- ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಗಳೊಂದಿಗೆ ಕೆಲಸಕ್ಕೆ ಅನುಮತಿ.
- ಜಿಲ್ಲೆ ಹಾಗೂ ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
- ಮೆಟ್ರೋ, ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿ ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಅನುಮತಿ
- ಮದುವೆಗಳಲ್ಲಿ ಕೇವಲ 50 ಜನರಿಗೆ ಹಾಗೂ ಅಂತ್ಯಕ್ರಿಯೆಗಳಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ.
ಇದನ್ನು ಓದಿ: ‘ತಗಡು ಯೋಗಿ – ಯುಪಿ ಮುಖ್ಯಮಂತ್ರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!
ವಿಡಿಯೊ ನೋಡಿ: ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರಿಗೆ ಕೇರಳ ಪ್ರತಿರೋಧಿಸಿದ್ದು ಹೇಗೆ ಗೊತ್ತೇ?


