ಪ್ರಧಾನಿ ‘ಕೊರೊನಾ ವಾರಿಯರ್‌’ ಇದ್ದಂತೆ, ಕೊರೊನಾ ವಿರುದ್ದ 24x7 ಸಭೆ ನಡೆಸುತ್ತಾರೆ: ಆರೋಗ್ಯ ಸಚಿವ | ನಾನುಗೌರಿ

ಪ್ರಧಾನಿ ನರೇಂದ್ರ ಮೋದಿ ಅವರು “ಕೊರೊನಾ ವಾರಿಯರ್”‌ ಇದ್ದಂತೆ, ಅವರು 24×7 ಗಂಟೆಯು ಕೊರೊನಾ ವಿರುದ್ದ ಹೋರಾಟ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು ಮಂಗಳವಾರ ಹೇಳಿದ್ದಾರೆ.

ಭಾರತದ ಎಲ್ಲಾ ಏಮ್ಸ್ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, “ನಾವು ಕಳೆದ ನಾಲ್ಕೈದು ದಿನಗಳಿಂದ ಹಲವಾರು ಆರೋಗ್ಯ ಸೌಲಭ್ಯ ಸಿಗುವಂತೆ ಮಾಡಿದ್ದೇವೆ. ಇದು ಸದ್ಯದ ಪರಿಸ್ಥಿತಿಗೆ ಬೇಕಾಗುಷ್ಟಿದೆ ಆದರೆ ಇದು ಸಾಕಾಗುವುದಿಲ್ಲ, ನಾವು ಇನ್ನೂ ವೇಗವಾಗಿ ಸಾಗಬೇಕಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು

“ಪ್ರಧಾನಿ ಮೋದಿಯವರು ‘ಕೊರೊನಾ ವಾರಿಯರ್‌’ ಇದ್ದಂತೆ. ಅವರು ಕೊರೊನಾ ವಿರುದ್ದ ಹೋರಾಡಲು 24×7 ಗಂಟೆಯು ಸಭೆ ನಡೆಸುತ್ತಿದ್ದಾರೆ. ನಿನ್ನೆ ಕೂಡಾ ಅವರು ವೈದ್ಯಕೀಯ ವೃತ್ತಿಪರರೊಂದಿಗೆ ಸಭೆ ನಡೆಸಿದ್ದಾರೆ” ಎಂದು ಹೇಳಿದ್ದಾರೆ.

ಆದರೆ ಪ್ರಧಾನಿ ಮೋದಿಯು ದೇಶದಲ್ಲಿ ಕೊರೊನಾ ಉಲ್ಬಣದ ನಡುವೆಯು, ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಬೃಹತ್‌ ಸಭೆಗಳಲ್ಲಿ ಮಾತನಾಡಿದ್ದರು.

ಕಳೆದ ಶನಿವಾರದಂದು ಬಂಗಾಳದ ಅಸನ್ಸೋಲ್‌ನ ರ‍್ಯಾಲಿಯಲ್ಲಿ ನೆರೆದ ಭಾರಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, “ಲೋಕಸಭಾ ಚುನಾವಣೆಯ ಸಮಯದಲ್ಲಿ ನಾನು ಎರಡು ಬಾರಿ ಇಲ್ಲಿಗೆ ಬಂದಿದ್ದೇನೆ. ಆದರೆ ಮೊದಲ ಬಾರಿಗೆ ಇಂತಹ ರ‍್ಯಾಲಿಗೆ ಸಾಕ್ಷಿಯಾಗಿದ್ದೇನೆ. ಇಂದು, ನೀವು ನಿಮ್ಮ ಶಕ್ತಿಯನ್ನು ತೋರಿಸಿದ್ದೀರಿ” ಎಂದು ಉದ್ಘರಿಸಿದ್ದರು.

ಕಾಂಗ್ರೆಸ್ ಸೇರಿದಂತೆ ಹಲವರು ಇದನ್ನು ವ್ಯಾಪಕವಾಗಿ ಟೀಕಿಸಿದ್ದರು. ಕಾಂಗ್ರೆಸ್ ಪಕ್ಷವು ಪ್ರಧಾನಿಯವರನ್ನು ರೋಮ್ ದೊರೆ ನೀರೊಗೆ ಹೋಲಿಕೆ ಮಾಡಿತ್ತು.

ಇದನ್ನೂ ಓದಿ: ಯುಪಿ ಮುಖ್ಯಮಂತ್ರಿಯನ್ನು ‘ತಗಡು ಯೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here