ಕ್ಲಾಸ್‌ಮೇಟ್ ಮೊಂಡಿಯಲ್ ಎಂ ಸಂಸ್ಥೆ ಮಾಧ್ಯಮಗಳ ಸ್ವಾತಂತ್ರ್ಯ ಸೂಚ್ಯಂಕ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, 180 ದೇಶಗಳ ಪಟ್ಟಿಯಲ್ಲಿ ಭಾರತ 142 ನೇ ಸ್ಥಾನದಲ್ಲಿದೆ. ಇದು ಭಾರತದ ಮಾಧ್ಯಮಗಳ ದುರಾವಸ್ಥೆ, ಬೇಜವಾಬ್ದಾರಿತನ ಮತ್ತು ಜನದ್ರೋಹಕ್ಕೆ ಸಾಕ್ಷಿಯಾಗಿದೆ.

ಭಾರತದ ಮಾಧ್ಯಮ ಹೀಗೆ ಪ್ರಪಾತಕ್ಕೆ ಬೀಳಲು ಕಾರಣವೇನೆಂದು ಟಿಪ್ಪಣಿಯನ್ನೂ ಅದು ನೀಡಿದೆ. ಇದಕ್ಕೆಲ್ಲ ಮೋದಿ ಸರ್ಕಾರವೇ ಕಾರಣ ಎಂಬುದನ್ನು ಅದು ಬಲವಾಗಿ ಪ್ರತಿಪಾದಿಸಿದೆ. ಆ ಟಿಪ್ಪಣಿಯ ಯಥಾವತ್ ಅನುವಾದ ಇಲ್ಲಿದೆ:

ಮೋದಿಯವರು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. 2020 ರಲ್ಲಿ ಅವರ ಕೆಲಸಕ್ಕೆ ಸಂಬಂಧಿಸಿದಂತೆ ನಾಲ್ವರು ಪತ್ರಕರ್ತರು ಕೊಲ್ಲಲ್ಪಟ್ಟರು. ತಮ್ಮ ಜವಾನ್ದಾರಿ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡುವ ಪತ್ರಕರ್ತರು ಇವತ್ತು ಜೀವಭಯ ಎದುರಿಸುತ್ತಿದ್ದಾರೆ. ಪ್ರಮಾಣಿಕ ಪತ್ರಕರ್ತರ ಪಾಲಿಗೆ ಭಾರತವು ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ. ವರದಿಗಾರರ ವಿರುದ್ಧದ ಪೊಲೀಸ್ ಹಿಂಸಾಚಾರ, ರಾಜಕೀಯ ಕಾರ್ಯಕರ್ತರ ಹೊಂಚುದಾಳಿ ಮತ್ತು ಕ್ರಿಮಿನಲ್ ಗುಂಪುಗಳು ಅಥವಾ ಭ್ರಷ್ಟ ಸ್ಥಳೀಯ ಅಧಿಕಾರಿಗಳಿಂದ ಪ್ರಚೋದಿಸಲ್ಪಟ್ಟ ಪ್ರತೀಕಾರಗಳು ಸೇರಿದಂತೆ ಎಲ್ಲ ರೀತಿಯ ದಾಳಿಗೆ ಅವರು ಒಡ್ಡಿಕೊಳ್ಳಬೇಕಾಗಿದೆ.

2019 ರ ವಸಂತ ಋತುವಿನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷವು ಅಗಾಧ ಬಹುಮತದಿಂದ ಜಯ ಗಳಿಸಿದಾಗಿನಿಂದಲೂ, ಹಿಂದೂ ರಾಷ್ಟ್ರೀಯತಾವಾದಿ ಸರ್ಕಾರದ ಅಣತಿಯಂತೆ ಕೆಲಸ ಮಾಡಲು ಮಾಧ್ಯಮಗಳ ಮೇಲೆ ಒತ್ತಡ ಹೆಚ್ಚಾಗಿದೆ. ಆಮೂಲಾಗ್ರ ಬಲಪಂಥೀಯ ಹಿಂದೂ ರಾಷ್ಟ್ರೀಯತೆಗೆ ನಾಂದಿ ಹಾಡಿದ ಹಿಂದುತ್ವವನ್ನು ಸಮರ್ಥಿಸುವ ಬಹುಪಾಲು ಭಾರತೀಯರು, ಸಾರ್ವಜನಿಕ ಚರ್ಚೆಯಿಂದ “ರಾಷ್ಟ್ರವಿರೋಧಿ” ಚಿಂತನೆಯ ಎಲ್ಲಾ ಅಭಿವ್ಯಕ್ತಿಗಳನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದಾರೆ.

ಹಿಂದುತ್ವ ಅನುಯಾಯಿಗಳನ್ನು ಕಿರಿಕಿರಿಗೊಳಿಸುವ ವಿಷಯಗಳ ಬಗ್ಗೆ ಮಾತನಾಡಲು ಅಥವಾ ಬರೆಯಲು ಧೈರ್ಯವಿರುವ ಪ್ರಾಮಾಣಿಕ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸಂಘಟಿತ ದ್ವೇಷ ಅಭಿಯಾನಗಳು ಭಯ ಹುಟ್ಟಿಸುತ್ತವೆ. ಇನ್ನೂ ಅಪಾಯಕಾರಿ ಆಗಿರುವ ವಿಷಯವೆಂದರೆ, ಈ ಅಭಿಯಾನಗಳು ಅಂತಹ ಪ್ರಾಮಾಣಿಕ ಪತ್ರಕರ್ತರ ಹತ್ಯೆಗೆ ಕರೆಗಳನ್ನು ನೀಡುತ್ತವೆ!.

ಈ ಸಂಘಟಿತ ಹಿಂದೂತ್ವ ಜಾಲದ ಗುರಿಗಳು ಮಹಿಳೆಯರಾಗಿದ್ದಾಗ ಪ್ರಚಾರಗಳು ವಿಶೇಷವಾಗಿ ಹಿಂಸಾತ್ಮಕವಾಗಿರುತ್ತದೆ ಮತ್ತು ಅಸಹ್ಯಕರವಾಗಿರುತ್ತದೆ. ಅಧಿಕಾರಸ್ಥರ ವಿರುದ್ಧ ಬರೆದಾಗ ಅಥವಾ ಪ್ರಸಾರ ಮಾಡಿದಾಗ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಜಡಿದು ಬೆದರಿಸಲಾಗುತ್ತಿದೆ. ಕೆಲವು ಪ್ರಾಸಿಕ್ಯೂಟರ್‌ಗಳು ದಂಡ ಸಂಹಿತೆಯ ಸೆಕ್ಷನ್ 124 ಎ ಅನ್ನು ಪ್ರಯೋಸಿದುತ್ತಾರೆ! ಇದರ ಅಡಿಯಲ್ಲಿ “ದೇಶದ್ರೋಹ”ದ ಹೆಸರಿನಲ್ಲಿ ಜೀವಾವಧಿ ಶಿಕ್ಷೆಗೆ ಪತ್ರಕರ್ತರನ್ನು ದೂಡುವ ಹುನ್ನಾರವಿದೆ.

2020 ರಲ್ಲಿ, ಕೊರೊನಾ ಬಿಕ್ಕಟ್ಟಿನ ಲಾಭವನ್ನು ಸರ್ಕಾರವು ಪಡೆದುಕೊಂಡಿತು. ಅಧಿಕೃತ ಸ್ಥಾನದೊಂದಿಗೆ ಭಿನ್ನಾಭಿಪ್ರಾಯದ ಮಾಹಿತಿಯನ್ನು ಒದಗಿಸುವ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಸುದ್ದಿ ಪ್ರಸಾರದ ನಿಯಂತ್ರಣವನ್ನು ಹೆಚ್ಚಿಸಿತು.

ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿದೆ. ಅಲ್ಲಿ ವರದಿಗಾರರು ಹೆಚ್ಚಾಗಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಂದ ಕಿರುಕುಳಕ್ಕೊಳಗಾಗುತ್ತಾರೆ . ಈ ಸರ್ವಾಧಿಕಾರದ ದೌರ್ಜನ್ಯ ಹೇಗಿದೆ ಎಂದರೆ ಕಾಶ್ಮೀರ್ ಟೈಮ್ಸ್‌ನಂತಹ ಪ್ರಮುಖ ಮಾಧ್ಯಮವನ್ನೂ ಮುಚ್ಚುವಂತೆ ಮಾಡುವ ಕುತಂತ್ರಗಳು ನಡೆದಿವೆ.

ಸಿಎಎ ವಿರೋಧಿ, ರೈತ ಪರ ಹೋರಾಟ: ಪತ್ರಕರ್ತರೇ ಟಾರ್ಗೆಟ್

ಸಿಎಎ-ಎನ್‌ಆರ್‌ಸಿ ವಿರುದ್ಧ ಕಳೆದ ವರ್ಷ ನಡೆದ ಚಳುವಳಿಯ ಪರವಿದ್ದ ಪತ್ರಕರ್ತರು, ಸ್ವತಂತ್ರ ಮಾಧ್ಯಮಗಳಿಗೆ ಮುಕ್ತವಾಗಿ ಬರೆಯುತ್ತಿದ್ದ ಸಾಮಾಜಿಕ ಕಾರ್ಯಕರ್ತರಿಗೆ ಪೊಲೀಸರು ಸಾಕಷ್ಟು ಕಿರಿಕುಳ ನೀಡುತ್ತ ಬಂದಿದ್ದಾರೆ.

ದೆಹಲಿ ಗಡಿಗಳಲ್ಲಿ ನಡೆದಿರುವ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಅಗತ್ಯತೆಯನ್ನು ನಿರಂತರವಾಗಿ ವರದಿ ಮಾಡುತ್ತಿದ್ದ ಕ್ಯಾರವಾನ್ ವರದಿಗಾರ ಒಬ್ಬರ ಮೇಲೆ ಹಲ್ಲೆ ನಡೆಸಿದ್ದ ಪೊಲೀಸರು ಅವರನ್ನು ಜೈಲಿಗೆ ತಳ್ಳಿದ್ದರು.

ಕೇಂದ್ರ ಗೃಹ ಇಲಾಖೆ ಅಧಿನದಲ್ಲಿರುವ ದೆಹಲಿ ಪೊಲೀಸ್ ಇಂತಹ ಕುಕೃತ್ಯಗಳಿಗೆ ಹೆಸರುವಾಸಿ ಆಗಿದ್ದಾರೆ. ಟ್ವೀಟ್ ಒಂದರ ನೆಪದಲ್ಲಿ ಹಿರಿಯ ಪತ್ರಕರ್ತ ರಾಜನಾಥ್ ಸರ್ದೇಸಾಯಿ ಸೇರಿದಂತೆ ಹಲವು ಪತ್ರಕರ್ತರ ಮೇಲೆ ದೇಶದ್ರೋಹದ ಅಪಾದನೆ ಅಡಿ ಕೇಸು ದಾಖಲಿಸಲಾಗಿತ್ತು.

ಗೌರಿ ಲಂಕೇಶ್ ಹತ್ಯೆ ಹಿಂದೆಯೂ!

ಸೂಚ್ಯಂಕ ಬಿಡುಗಡೆ ಮಾಡಿದ ಸಂಸ್ಥೆ 2019ರ ನಂತರ ಇದು ವಿಪರೀತಕ್ಕೆ ಹೋಗಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡಿದೆ. ಆದರೆ, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೇ ಇಂತಹ ಒಂದು ವ್ಯಸ್ಥಿತ ಸಂಚು ಶುರುವಾಗಿತ್ತು. ಪತ್ರಕರ್ತರಲ್ಲದಿದ್ದರೂ ಸಾಹಿತ್ಯಿಕ, ವೈಚಾರಿಕ ನಿಲುವುಗಳ ಕುರಿತು ಬರೆಯುತ್ತಿದ್ದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿಯವರ ಹತ್ಯೆ ಹಿಂದೆ ಈ ಒಂದು ‘ವ್ಯವಸ್ಥಿತ’ ಹಿಂದೂತ್ವವಾದಿ ಸಂಘಟನೆಗಳೇ ಎಂದು ಚಾರ್ಜ್‌ಶೀಟ್‌ಗಳಲ್ಲಿ ದಾಖಲೆ ಸಮೇತ ಆರೋಪಿಸಲಾಗಿದೆ.

ಸದಾ ಹಿಂದೂತ್ವವಾದಿಗಳ ದುಷ್ಕೃತ್ಯಗಳನ್ನು ಖಡಾಖಂಡಿತವಾಗಿ ಮುಲಾಜಿಲ್ಲದೆ ಟೀಕಿಸುವ ಛಾತಿ ಹೊಂದಿದ್ದ, ಅಪ್ಪಟ ಸೆಕ್ಯುಲರ್ ಮನಸ್ಸಿನ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಹಿಂದೆ ಇದೇ ಅಜೆಂಡಾಗಳು ಕೆಲಸ ಮಾಡಿವೆ.

ಹೀಗಾಗಿ ಇಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂಬುದು ಪ್ರಪಾತಕ್ಕೆ ಬಿದ್ದಿದೆ. ಕೊರೋನಾ ವೈರಸ್ ಎರಡನೇ ಅಲೆ ಸೃಷ್ಟಿಸಿರುವ ಅನಾಹುತಕ್ಕೆ ಪ್ರಭುತ್ವದ ವಿರುದ್ಧ ನಿಲ್ಲಬೇಕಿದ್ದ ಬಹುಪಾಲು ಮಾಧ್ಯಮಗಳು ಮೌನವಾಗಿವೆ.


ಇದನ್ನೂ ಓದಿ: ಕೋವಿಡ್ ಸಾವಿನ ಸಂಖ್ಯೆಗಳನ್ನು ಮುಚ್ಚಿಡುತ್ತಿರುವ ಯೋಗಿ ಸರ್ಕಾರ: ಒಂದು ಗ್ರೌಂಡ್ ರಿಪೋರ್ಟ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here