ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ, ಪ್ರಕಾಶಕರಿಗೆ 7 ತಿಂಗಳು ಜೈಲು ಶಿಕ್ಷೆ | NaanuGauri
ಹೊಸದಿಗಂತ ಸಂಪಾದಕ ದು.ಗು. ಲಕ್ಷ್ಮಣ

ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ ಅವರನ್ನು ‘ನಕ್ಸಲ್ ಬೆಂಬಲಿಗ’ ಎಂಬ ಶಿರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿದ್ದ ಸಂಘ ಪರಿವಾರ ಬೆಂಬಲಿಗ ದಿನ ಪತ್ರಿಕೆಯಾದ ‘ಹೊಸದಿಗಂತ’ದ ಸಂಪಾದಕ ದು.ಗು. ಲಕ್ಷ್ಮಣ ಹಾಗೂ ಪ್ರಕಾಶಕ ಎಸ್‌.ಶಾಂತಾರಾಮ್‌ ಅವರಿಗೆ ಶೃಂಗೇರಿ ಜೆ.ಎಂ.ಎಫ್‌.ಸಿ ನ್ಯಾಯಾಲಯ ನೀಡಿದ್ದ ದಂಡ ಹಾಗೂ ಜೈಲು ಶಿಕ್ಷಯನ್ನು ಜಿಲ್ಲಾ ಸತ್ರ ನ್ಯಾಯಾಲಯ ಎತ್ತಿ ಹಿಡಿದಿದ್ದು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶ ನೀಡಿದೆ.

ಹೊಸ ದಿಗಂತ ಪತ್ರಿಕೆಯು 2007 ರ ಜುಲೈ 3 ರಂದು ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ ಅವರ ಚಿತ್ರವನ್ನು ಪ್ರಕಟಿಸಿ, ‘ನಕ್ಸಲ್‌ ಬೆಂಬಲಿಗ’ ಎಂಬ ಶಿರ್ಷಿಕೆಯಲ್ಲಿ ಸುಳ್ಳು ಮತ್ತು ಮಾನಹಾನಿ ವರದಿಯನ್ನು  ಪ್ರಕಟಿಸಿತ್ತು. ಇದರ ವಿರುದ್ದ ಸಾಹಿತಿ ವಿಠಲ ಹೆಗ್ಗಡೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ಮತ್ತು ಶೃಂಗೇರಿಯಲ್ಲಿ ತಾಲಿಬಾನಿಗಳು – ಬಿ.ಚಂದ್ರೇಗೌಡ

ಪ್ರಕರಣದ ವಿಚಾರಣೆ ನಡೆಸಿದ ಶೃಂಗೇರಿ ಜೆ.ಎಂ.ಎಫ್‌.ಸಿ ನ್ಯಾಯಾಲಯವು 2019 ಜನವರಿಯಂದು ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು. ಆದರೆ ಈ ತೀರ್ಪಿನ ವಿರುದ್ದ ಅವರು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಜಿಲ್ಲಾ ಸತ್ರ ನ್ಯಾಯಾಲಯ ಶೃಂಗೇರಿ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದ್ದು, ಪತ್ರಿಕೆಯ ಸಂಪಾದಕ ದು.ಗು ಲಕ್ಷ್ಮಣ ಹಾಗೂ ಪ್ರಕಾಶಕ ಎಸ್. ಶಾಂತಾರಾಮ್‌ ಅವರಿಗೆ 40 ಸಾವಿರ ದಂಡ ಮತ್ತು ಏಳು ತಿಂಗಳ ಸಜೆಯನ್ನು ಖಾಯಂಗೊಳಿಸಿದೆ. ಸಾಹಿತಿ ವಿಠಲ ಹೆಗ್ಗಡೆ ಅವರ ಚಾರಿತ್ಯ್ರ ವಧೆ ಮಾಡಿರುವುದರಿಂದ ಅವರಿಗೆ 35 ಸಾವಿರ ಹಾಗೂ ಸರ್ಕಾರಕ್ಕೆ 5 ಸಾವಿರ ಪಾವತಿಸಬೇಕೆಂದು, ತಪ್ಪಿದ್ದಲ್ಲಿ ಏಳು ತಿಂಗಳ ಜೈಲು ಶಿಕ್ಷೆಗೆ ಒಳಗಾಗಬೇಕೆಂದು ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ: ಕಲ್ಕುಳಿ ವಿಠಲ ಹೆಗಡೆಯವರ ಅಧ್ಯಕ್ಷ ಭಾಷಣದ ಆಯ್ದ ಭಾಗ

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ, “ನಮ್ಮ ಜನಪರ ಚಳವಳಿಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ನಮ್ಮ ಬಗ್ಗೆ ಅಗೌರವ ಉಂಟು ಮಾಡಿ, ನನ್ನನ್ನು ಹಾಗೂ ನನ್ನ ಚಳುವಳಿಗಳನ್ನು ಮುಗಿಸುವ ಷಡ್ಯಂತ್ರ ರೂಪಿಸಿದ ಪತ್ರಕರ್ತರಿಬ್ಬರಿಗೆ ತಕ್ಕ ಶಿಕ್ಷೆಯಾಗಿದೆ. ನಮ್ಮ ಹೋರಾಟವು ಎಂದೆಂದಿಗೂ ಪ್ರಜಾತಾಂತ್ರಿಕ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೆ ನಡೆಯುತ್ತಿರುವುದಕ್ಕೆ ಸಿಕ್ಕ ಜಯ ಇದಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ

“ಕಳೆದ ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗಲೂ ಶಾಸಕ ಸಿ.ಟಿ. ರವಿ ಹಾಗೂ ಅವರ ಪಕ್ಷ ಕೂಡಾ ಇದೇ ಆರೋಪವನ್ನು ಮಾಡಿತ್ತು. ಅವರೆಲ್ಲರಿಗೂ ಈ ತೀರ್ಪು ಎಚ್ಚರಿಕೆಯಾಗಿ ಬಂದಿದೆ” ಎಂದು ವಿಠಲ ಹೆಗ್ಗಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! – ಬಿ.ಚಂದ್ರೇಗೌಡ

ವಿಡಿಯೋ ನೋಡಿ: ಸಾರಿಗೆ ನೌಕರರು ಸೇರಿದಂತೆ ಯಾರೆಲ್ಲ ಹೋರಾಟ ಮಾಡುತ್ತಿದ್ದಾರೋ ಅವರ ಜತೆ ಕಾಂಗ್ರೆಸ್‌ ನಿಲ್ಲಲಿದೆ: ಡಿಕೆ ಶಿವಕುಮಾರ್‌

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here