Homeಮುಖಪುಟರೋಣಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ದೋಷಾರೋಪಣೆ ಸೇರಿಸಲಾಗಿದೆ: ಹೊಸ ಸಾಕ್ಷ್ಯಗಳನ್ನು ಬಿಚ್ಚಿಟ್ಟ...

ರೋಣಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ದೋಷಾರೋಪಣೆ ಸೇರಿಸಲಾಗಿದೆ: ಹೊಸ ಸಾಕ್ಷ್ಯಗಳನ್ನು ಬಿಚ್ಚಿಟ್ಟ ವರದಿ

- Advertisement -
- Advertisement -

ಯುಎಸ್ ಮೂಲದ ಡಿಜಿಟಲ್ ಫೊರೆನ್ಸಿಕ್ಸ್ ಕಂಪನಿಯ ಹೊಸ ವರದಿಯ ಪ್ರಕಾರ, 2018 ರ ಜನವರಿಯಲ್ಲಿ ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‌ನಲ್ಲಿ ಹಿಂಸಾಚಾರ ನಡೆದ ಕೆಲವು ದಿನಗಳ ನಂತರ ಕಾರ್ಯಕರ್ತ ರೋಣಾ ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿ ಹ್ಯಾಕರ್ 22 “ದೋಷಾರೋಪಣೆ” ಫೈಲ್‌ಗಳನ್ನು ಸೇರಿಸಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಈ ಫೈಲ್‌ಗಳನ್ನು 15 ನವೆಂಬರ್ 2018 ರಿಂದ, ಆರಂಭದಲ್ಲಿ ಪುಣೆ ಪೊಲೀಸರು ಮತ್ತು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ. ಈ ಸಾಕ್ಷ್ಯಗಳನ್ನೇ ಬಳಸಿಕೊಂಡು ರೋಣಾ ವಿಲ್ಸನ್ ಮತ್ತು ವಕೀಲರು, ಶಿಕ್ಷಣ ತಜ್ಞರು ಮತ್ತು ಕಲಾವಿದರು ಸೇರಿದಂತೆ ಇತರ 15 ಜನರನ್ನು ಎರಡು ವರ್ಷಗಳಿಂದ ಜಾಮೀನು ಇಲ್ಲದೆ ಬಂಧಿಸಿ ಜೈಲಿಗೆ ಹಾಕಲಾಗಿದೆ.

ವಿಲ್ಸನ್‌ನ ಕಂಪ್ಯೂಟರ್‌ನಲ್ಲಿ ಅವರಾಗಲಿ ಅಥವಾ ಬೇರೆಯವರಾಗಲಿ ಫೈಲ್‌ಗಳನ್ನು ಸೃಷ್ಟಿಸಿಲ್ಲ, ಅದನ್ನು ಒಪನ್ ಮಾಡಿಲ್ಲ ಮತ್ತು ಬಳಸಿಲ್ಲ. ಆದರೆ ಅವುಗಳನ್ನು ಸೇರಿಸಲು ಹ್ಯಾಕರ್ ಸಾಫ್ಟ್‌ವೇರ್ ಬಳಸಿದ್ದಾರೆ ಎಂದು ಆರ್ಸೆನಲ್ ಕನ್ಸಲ್ಟಿಂಗ್‌ನ ಹೊಸ ವರದಿ ತಿಳಿಸಿದೆ. ನ್ಯಾಯಾಲಯದ ಆದೇಶದ ನಂತರ 2019 ರ ನವೆಂಬರ್‌ನಲ್ಲಿ ವಿಲ್ಸನ್ ಅವರ ಕಂಪ್ಯೂಟರ್‌ನ ಎಲೆಕ್ಟ್ರಾನಿಕ್ ನಕಲನ್ನು ಪೊಲೀಸರಿಂದ ಪಡೆದು ಆರ್ಸೆನಲ್ ಕನ್ಸಲ್ಟಿಂಗ್ ವಿಶ್ಲೇಷಣೆ ನಡೆಸಿ ಈ ತೀರ್ಮಾನಕ್ಕೆ ಬಂದಿದೆ.

ಮ್ಯಾಸಚೂಸೆಟ್ಸ್ ಮೂಲದ ಡಿಜಿಟಲ್ ಫೋರೆನ್ಸಿಕ್ಸ್ ಸಂಸ್ಥೆಯ ಆರ್ಸೆನಲ್ ಕನ್ಸಲ್ಟಿಂಗ್‌ “ಸಾಮಾಜಿಕ ಕಾರ್ಯಕರ್ತರಾದ ರೋನಾ ವಿಲ್ಸನ್ ಅವರ ಬಂಧನಕ್ಕೂ ಮೊದಲು, ಹ್ಯಾಕರ್‌ ಅವರ ಲ್ಯಾಪ್‌ಟಾಪ್‌ಗೆ ಪ್ರವೇಶ ಪಡೆದು ಮಾಲ್‌ವೇರ್‌‌ ಬಳಸಿ ಹತ್ತು ಪತ್ರಗಳನ್ನು ಸೇರಿಸಿದ್ದನು, ನಿರಂತರ ಎಲೆಕ್ಟ್ರಾನಿಕ್ ಬೇಹುಗಾರಿಕೆ ನಡೆಸಲಾಗಿತ್ತು ಎಂದು ಫೆಬ್ರವರಿ 2021 ರಲ್ಲಿ ಅದು ತನ್ನ ಮೊದಲ ವರದಿಯಲ್ಲಿ ತಿಳಿಸಿತ್ತು. ಎರಡನೆ ವರದಿಯು ಅದರ ಮುಂದುವರಿದ ಅಧ್ಯಯನದ ಭಾಗವಾಗಿದೆ.

ಎರಡನೆಯ ವರದಿಯನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಬೇಕಾಗಿದೆ. ವಿಲ್ಸನ್‌ರ ಕಂಪ್ಯೂಟರ್‌ನಲ್ಲಿನ ಫೈಲ್‌ಗಳಲ್ಲಿರುವ ಅಂಶಗಳ ಕಾನೂನುಬದ್ಧ ಸಂವಾದದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆ 24 ಫೈಲ್‌ಗಳಲ್ಲಿ 22 ಫೈಲ್‌ಗಳನ್ನು ನೇರವಾಗಿ ಸೇರಿಸಲಾಗಿದೆ ಮತ್ತು ಮೊದಲನೆ ವರದಿಯಲ್ಲಿನ ಹ್ಯಾಕರ್‌ನನ್ನು ಗುರುತಿಸಲಾಗಿದೆ ಎನ್ನಲಾಗಿದೆ.

ಹೆಚ್ಚುವರಿಯಾಗಿ ಸೇರಿಸಲಾಗಿರುವ 24 ಫೈಲ್‌ಗಳಲ್ಲಿ ಹೆಚ್ಚಾಗಿ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸದಸ್ಯರ ನಡುವಿನ ಉದ್ದೇಶಿತ ಪತ್ರವ್ಯವಹಾರ, ಹಣ ವರ್ಗಾವಣೆಯ ಕುರಿತು ಚರ್ಚೆಗಳು, ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೇಗೆ ಸುಧಾರಿಸುವುದು, ಪಕ್ಷದ ಸದಸ್ಯರು ಪರಸ್ಪರ ಸಂವಹನ ನಡೆಸುವಲ್ಲಿ ಎದುರಾಗುವ ತೊಂದರೆಗಳು, ರಾಜ್ಯ ದೌರ್ಜನ್ಯದ ಬಗ್ಗೆ ಕಾಳಜಿಗಳು ಮತ್ತು ಕೆಲವು ಮಾವೋವಾದಿ ಗೆರಿಲ್ಲಾಗಳ ಛಾಯಾಚಿತ್ರಗಳು ಇವೆ ಎಂದು ಆರ್ಟಿಕಲ್ 14 ವರದಿ ಮಾಡಿದೆ.

ಈ ಕುರಿತು ಎನ್‌ಐಎ ವಕ್ತಾರರಾದ ಜಯಾ ರಾಯ್‌ರವರನ್ನು ಆರ್ಟಿಕಲ್ 14 ದೂರವಾಣಿ ಮೂಲಕ ಸಂಪರ್ಕಿಸಿದಾಗ, “ನಮ್ಮ ತನಿಖೆ ಪೂರ್ಣಗೊಂಡಿದೆ. ನಾವು ಖಾಸಗಿ ಲ್ಯಾಬ್‌ಗಳಿಂದ ಬರುವ ವರದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮ ವಿಧಿವಿಜ್ಞಾನ ಪರೀಕ್ಷೆಗೆ ಆರ್‌ಎಫ್‌ಎಸ್‌ಎಲ್ (ಪ್ರಾದೇಶಿಕ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ) ಮತ್ತು ಸಿಎಫ್‌ಎಸ್ಎಲ್ (ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯ) ದಂತೆ ಅಧಿಸೂಚಿತ ಪ್ರಯೋಗಾಲಯಗಳಿವೆ” ಎಂದು ತಿಳಿಸಿದ್ದಾರೆ.

15 ಸಾಮಾಜಿಕ ಕಾರ್ಯಕರ್ತರ ಮತ್ತು ಹೋರಾಟಗಾರರ ವಿರುದ್ಧದ ಈ ಭಯೋತ್ಪಾದನಾ ಪ್ರಕರಣವು ಹಲವು ವರ್ಷಗಳವರೆಗೆ ಎಳೆಯುವ ಸಾಧ್ಯತೆಯಿದ್ದರೂ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವತ್ತ ವಕೀಲರು ಗಮನ ಹರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಡಿಜಿಟಲ್ ಸಾಕ್ಷ್ಯಗಳನ್ನು ಹ್ಯಾಕರ್‌ ಮೂಲಕ ಹೋರಾಟಗಾರರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸೇರಿಸಿ ಸಾಕ್ಷಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ವಾದಕ್ಕೆ ವಿಲ್ಸನ್ ಅವರ ವಕೀಲರು ಎರಡನೇ ಆರ್ಸೆನಲ್ ವರದಿಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬ ಆರೋಪದಲ್ಲಿ ಕೇಂದ್ರ ಸರ್ಕಾರವು ಈ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದೆ. ಅವರನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ನ್ಯಾಯಲಯದ ವಿಚಾರಣೆಯಿಲ್ಲದೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇಡಲಾಗಿದೆ. ಸಾಮಾಜಿಕ ಕಾರ್ಯಕರ್ತರ ಈ ಬಂಧನವನ್ನು ಮಾನವ ಹಕ್ಕುಗಳ ಗುಂಪುಗಳು ಮತ್ತು ಕಾನೂನು ತಜ್ಞರು,  ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೇಂದ್ರ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಪ್ರಯತ್ನವೆಂದು ಆರೋಪಿಸಿದ್ದಾರೆ.

ಪೊಲೀಸರು ಕಾರ್ಯಕರ್ತರು ಮತ್ತು ಕಾರ್ಯಕ್ರಮದ ಸಂಘಟಕರ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಚಾರ್ಜ್‌ಶೀಟ್‌ನ ಪ್ರಕಾರ, ಭೀಮಾ ಕೋರೆಗಾಂವ್ ಕಾರ್ಯಕ್ರಮದ ಮುಖ್ಯ ಸಂಘಟಕರಲ್ಲಿ ಒಬ್ಬರಾದ ಸುಧೀರ್ ಧವಾಲೆ ಅವರೊಂದಿಗೆ ಸಂವಹನ ನಡೆಸಿದ್ದರಿಂದ ಪೊಲೀಸರು ರೋನಾ ವಿಲ್ಸನ್ ಮತ್ತು ವಕೀಲ ಸುರೇಂದ್ರ ಗ್ಯಾಡ್ಲಿಂಗ್ ಅವರ ಮೇಲೆ ದಾಳಿ ನಡೆಸಿದ್ದಾರೆ.

ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿ ದೊರೆತ ಫೈಲ್‌ಗಳು ಆತನ ವಿರುದ್ಧ, ವಕೀಲ-ಕಾರ್ಯಕರ್ತ ಸುಧಾ ಭಾರದ್ವಾಜ್, ಕವಿ ವರವರ ರಾವ್ ಮತ್ತು ಇತರರ ವಿರುದ್ಧ ಸಲ್ಲಿಸಿದ ಸಾಕ್ಷ್ಯಗಳಲ್ಲಿ ಸೇರಿವೆ.

ಕೃಪೆ: ಆರ್ಟಿಕಲ್ 14


ಇದನ್ನೂ ಓದಿ: ಹೊಸ ವಿಧಿವಿಜ್ಞಾನ ವರದಿ ಬಹಿರಂಗ; ರೋನಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ಸಾಕ್ಷ್ಯಗಳನ್ನು ಸೇರಿಸಲಾಗಿದೆ: ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...