Homeಮುಖಪುಟಹೊಸ ವಿಧಿವಿಜ್ಞಾನ ವರದಿ ಬಹಿರಂಗ; ರೋನಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ಸಾಕ್ಷ್ಯಗಳನ್ನು...

ಹೊಸ ವಿಧಿವಿಜ್ಞಾನ ವರದಿ ಬಹಿರಂಗ; ರೋನಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ಸಾಕ್ಷ್ಯಗಳನ್ನು ಸೇರಿಸಲಾಗಿದೆ: ವರದಿ

- Advertisement -
- Advertisement -

ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬ ಆರೋಪದಲ್ಲಿ ಕೇಂದ್ರ ಸರ್ಕಾರವು ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿತ್ತು. ಅವರಲ್ಲಿ ರೋನಾ ವಿಲ್ಸನ್ ಕೂಡ ಒಬ್ಬರು. ಈ ಪ್ರಕರಣದ ಬಗ್ಗೆ ವಾಶಿಂಗ್ಟನ್‌ ಪೋಸ್ಟ್‌‌ ಅಘಾತಕಾರಿ ತನಿಖಾ ವರದಿಯನ್ನು ಬಹಿರಂಗಪಡಿಸಿದೆ. ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತರಿಂದ ಪೊಲೀಸರು ವಶಪಡಿಸಿಕೊಂಡಿದ್ದ ಲ್ಯಾಪ್‌ಟಾಪ್‌‌ನೊಳಗೆ ಸಾಕ್ಷ್ಯಗಳನ್ನು ಹ್ಯಾಕರ್‌ಗಳು ಸೈಬರ್‌ ದಾಳಿಯ ಮೂಲಕ ಸೇರಿಸಿದ್ದರು ಎಂದು ಹೊಸ ವಿಧಿವಿಜ್ಞಾನ ವರದಿಯು ಹೇಳಿದೆ ಎಂದು ವಾಶಿಂಗ್ಟನ್ ಪೋಸ್ಟ್‌ ಹೇಳಿದೆ.

ಮ್ಯಾಸಚೂಸೆಟ್ಸ್ ಮೂಲದ ಡಿಜಿಟಲ್ ಫೋರೆನ್ಸಿಕ್ಸ್ ಸಂಸ್ಥೆಯ ಆರ್ಸೆನಲ್ ಕನ್ಸಲ್ಟಿಂಗ್‌ನ ವರದಿಯ ಪ್ರಕಾರ, “ಸಾಮಾಜಿಕ ಕಾರ್ಯಕರ್ತರಾದ ರೋನಾ ವಿಲ್ಸನ್ ಅವರ ಬಂಧನಕ್ಕೂ ಮೊದಲು, ಹ್ಯಾಕರ್‌ ಅವರ ಲ್ಯಾಪ್‌ಟಾಪ್‌ಗೆ ಪ್ರವೇಶ ಪಡೆದು ಮಾಲ್‌ವೇರ್‌‌ ಬಳಸಿ ಹತ್ತು ಪತ್ರಗಳನ್ನು ಸೇರಿಸಿದ್ದನು”. ಈ ಹತ್ತು ಪತ್ರಗಳನ್ನು ಉಲ್ಲೇಖಿಸಿ ಪೊಲೀಸರು ಅವರ ಮೇಲೆ ದೋಷಾರೋಪಣೆ ಮಾಡಿದ್ದರು.

ಅನೇಕ ಸಾಮಾಜಿಕ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಅವರನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ನ್ಯಾಯಲಯದ ವಿಚಾರಣೆಯಿಲ್ಲದೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇಡಲಾಗಿದೆ. ಸಾಮಾಜಿಕ ಕಾರ್ಯಕರ್ತರ ಈ ಬಂಧನವನ್ನು ಮಾನವ ಹಕ್ಕುಗಳ ಗುಂಪುಗಳು ಮತ್ತು ಕಾನೂನು ತಜ್ಞರು,  ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೇಂದ್ರ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಪ್ರಯತ್ನವೆಂದು ಆರೋಪಿಸುತ್ತಲೆ ಬಂದಿದ್ದರು.

ಇದನ್ನೂ ಓದಿ: ಮೋದಿ ಹತ್ಯೆಯ ಸಂಚು ಎಂಬ ಚಿಂದಿ ಕಾಗದ

ಆರ್ಸೆನಲ್ ಕನ್ಸಲ್ಟಿಂಗ್‌ ವರದಿಯು ಸೈಬರ್ ದಾಳಿ ನಡೆಸಿದ ಅಪರಾಧಿಯನ್ನು ಗುರುತಿಸಿಲ್ಲ. ರೋನಾ ವಿಲ್ಸನ್ ಅವ‌ರನ್ನು ಪ್ರತಿನಿಧಿಸುವ ವಕೀಲ ಸುದೀಪ್ ಪಾಸ್‌ಬೋಲಾ, “ಆರ್ಸೆನಲ್ ವರದಿಯು ತನ್ನ ಕಕ್ಷಿದಾರರ ನಿರಪರಾಧಿತ್ವವನ್ನು ಸಾಬೀತುಪಡಿಸಲು ನೆರವಾಗುತ್ತದೆ” ಎಂದಿದ್ದಾರೆ. ಬುಧವಾರವಷ್ಟೇ, ವಿಲ್ಸನ್ ಅವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಬಾಂಬೆ ಹೈಕೋರ್ಟ್‌‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಆರ್ಸೆನಲ್‌‌ ಕನ್ಸಲ್ಟಿಂಗ್‌ ವರದಿಯನ್ನು ಸೇರಿಸಿದ್ದಾರೆ.

ಆದರೆ ವಿಲ್ಸನ್ ಅವರ ವಿರುದ್ದದ ಪ್ರಕರಣಗಳ ಮೇಲ್ವಿಚಾರಣೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಯ ವಕ್ತಾರರಾದ ಜಯಾ ರಾಯ್, ಆರ್ಸೆನಲ್‌‌ ಕನ್ಸಲ್ಟಿಂಗ್‌ ವರದಿಯನ್ನು ನಿರಾಕರಿಸಿದ್ದು, “ಲ್ಯಾಪ್‌ಟಾಪ್‌ನ ವಿಧಿವಿಜ್ಞಾನ ವಿಶ್ಲೇಷಣೆಯು ಸಾಧನದಲ್ಲಿ ಮಾಲ್‌ವೇರ್‌ನ ಯಾವುದೇ ಪುರಾವೆಗಳನ್ನು ತೋರಿಸಲಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಆರೋಪ ಹೊರಿಸಲಾದ ವ್ಯಕ್ತಿಗಳ ವಿರುದ್ಧ “ಸಾಕಷ್ಟು ದಾಖಲೆಗಳು ಮತ್ತು ಮೌಖಿಕ ಪುರಾವೆಗಳು” ಇವೆ ಎಂದು ಅವರು ಹೇಳಿದ್ದಾರೆಂದು ವಾಶಿಂಗ್ಟನ್‌ ಪೋಸ್ಟ್ ಹೇಳಿದೆ.

ಪ್ರಕರಣದಲ್ಲಿ 12 ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲಾಗಿದೆ. ಇವರೆಲ್ಲರೂ ಮೋದಿ ಸರ್ಕಾರವನ್ನು ಬಹಿರಂಗವಾಗಿ ವಿರೋಧಿಸುವವರಾಗಿದ್ದರು. “ಅವರಿಗೆ ನಿಷೇಧಿತ ಮಾವೋವಾದಿ ಉಗ್ರಗಾಮಿ ಸಂಬಂಧವಿದ್ದು, ಭಾರತದ ವಿರುದ್ಧ ದಂಗೆ ಏಳಲು ಕೆಲಸ ಮಾಡುತ್ತಿದ್ದರು” ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?

ರೋನಾ ವಿಲ್ಸನ್ ಮಾವೋವಾದಿ ಉಗ್ರನಿಗೆ ಪತ್ರ ಬರೆದಿದ್ದು, ಅದರಲ್ಲಿ ಅಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬ ಆರೋಪದಲ್ಲಿ ಕೇಂದ್ರ ಸರ್ಕಾರವು ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿತ್ತು. ಅವರಲ್ಲಿ ರೋನಾ ವಿಲ್ಸನ್ ಕೂಡ ಒಬ್ಬರು. ಈ ಪ್ರಕರಣದ ಬಗ್ಗೆವರು ಬಂದೂಕುಗಳು ಮತ್ತು ಮದ್ದುಗುಂಡುಗಳ ಬಗ್ಗೆ ಚರ್ಚೆ ಸೇರಿದಂತೆ, ಮೋದಿಯನ್ನು ಹತ್ಯೆ ಮಾಡಲು ಮಾವೋವಾದಿಗಳೊಂದಿಗೆ ಅವರು ಒತ್ತಾಯಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಈ ಪತ್ರವನ್ನು ವಿಲ್ಸನ್ ಅವರ ಕಂಪ್ಯೂಟರ್‌ ಅನ್ನು ಹ್ಯಾಕ್ ಮಾಡಿ ಗುಪ್ತ ಫೋಲ್ಡರ್‌‌‌ನಲ್ಲಿ ಹಾಕಿಡಲಾಗಿತ್ತು ಎಂದು ಆರ್ಸೆನಲ್ ಕನ್ಸಲ್ಟಿಂಗ್ ಕಂಡು ಹಿಡಿದಿದೆ.

ಆರ್ಸೆನಲ್ ವರದಿಯಲ್ಲಿ, “ಇದು ಆರ್ಸೆನಲ್ ಹಿಂದೆಂದೂ ಕಂಡಿರದ ಅತ್ಯಂತ ಗಂಭೀರವಾದ ಪ್ರಕರಣಗಳಲ್ಲಿ ಒಂದಾಗಿದೆ” ಎಂದು ಹೇಳಿದೆ ಎಂದು ವಾಶಿಂಗ್ಟನ್ ಪತ್ರಿಕೆ ಉಲ್ಲೇಖಸಿದೆ. ಈ ಪತ್ರವನ್ನು ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿ ಅಸ್ತಿತ್ವದಲ್ಲಿರದ ಮೈಕ್ರೋಸಾಫ್ಟ್ ವರ್ಡ್‌ನ ಹೊಸ ಆವೃತ್ತಿಯನ್ನು ಬಳಸಿ ರಚಿಸಲಾಗಿದೆ ಎಂದು ಆರ್ಸೆನಲ್‌ ವರದಿಯು ಹೇಳಿದೆ.

ಆರ್ಸೆನಲ್ ಅಧ್ಯಕ್ಷರಾದ ಸ್ಪೆನ್ಸರ್ ಈ ದಾಳಿಯನ್ನು “ಬಹಳ ಸಂಘಟಿತ ಮತ್ತು ಅತ್ಯಂತ ಗಾಢ” ಎಂದು ಕರೆದಿದ್ದಾರೆ. ಹೊಸ ವಿಧಿವಿಜ್ಞಾದ ಈ ಹೊಸ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯ ಆಡಳಿತದ ಅಡಿಯಲ್ಲಿ, ಈ ಪ್ರಕರಣದ ವಿಚಾರಣೆಗೆ ಹೇಗೆ ಬಳಸಲಾಗುತ್ತದೆ ಎಂಬ ಅನುಮಾನಗಳು ಇವೆ ಎಂದು ವಾಶಿಂಗ್ಟನ್ ಪೋಸ್ಟ್‌‌ ಹೇಳಿದೆ.

ಇದನ್ನೂ ಓದಿ: ದಲಿತ ಚಿಂತಕರನ್ನು ಮುಗಿಸಲು ಎಲ್ಗರ್ ಪರಿಷತ್ ಪ್ರಕರಣ ವರ್ಗಾವಣೆ: ಬಾಂಬೆ ಹೈಕೋರ್ಟ್‌‌ನಲ್ಲಿ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...