ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಕೊರೊನಾ ಲಸಿಕೆಗೆ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 600 ರೂ. ಮತ್ತು ರಾಜ್ಯ ಸರ್ಕಾರಗಳಿಗೆ ಡೋಸ್‌ಗೆ 400 ರೂ. ಎಂದು ಬುಧವಾರ ಬೆಲೆ ನಿಗದಿಪಡಿಸಿದೆ.
ಸೋಮವಾರದಂದು ಕೇಂದ್ರ ಸರ್ಕಾರವು ವ್ಯಾಕ್ಸಿನೇಷನ್ ನೀತಿಗಳಲ್ಲಿ ಬದಲಾವಣೆ ಮಾಡಿ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಹ ನಿಯಮವನ್ನು ಜಾರಿಗೆ ತಂದಿತ್ತು. ಅದರಂತೆ ಸೀರಮ್ ತನ್ನ ಲಸಿಕೆಯ ಬೆಲೆಯನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ: ಸೋಂಕಿನಿಂದ ತತ್ತರಿಸಿರುವ ರಾಜ್ಯಗಳಿಗೆ ನೆರವಿನ ಹಸ್ತ ಬೇಕಿದೆ, ಬುರುಡೆ ಮಾತಲ್ಲ: ಪ್ರಧಾನಿಗೆ ಸಿದ್ದರಾಮಯ್ಯ
ಮುಂದಿನ ಎರಡು ತಿಂಗಳುಗಳಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದಗಿ ಎಸ್‌ಐಐ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿಕೆ ನೀಡಿದೆ.

“ನಮ್ಮ ಸಾಮರ್ಥ್ಯದ 50% ಭಾರತ ಸರ್ಕಾರದ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ನೀಡಲಾಗುವುದು. ಉಳಿದ 50% ದಷ್ಟು ಲಸಿಕೆಯನ್ನು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತೇವೆ” ಎಂದು ಸೀರಮ್ ಹೇಳಿದೆ.
ಇದನ್ನೂ ಓದಿ: ರೋಣಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ದೋಷಾರೋಪಣೆ ಸೇರಿಸಲಾಗಿದೆ: ಹೊಸ ಸಾಕ್ಷ್ಯಗಳನ್ನು ನೀಡಿದ ವರದಿ
ಸೀರಮ್ ಸಂಸ್ಥೆಯು ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದ್ದು, ಅದು ತನ್ನ ಹೇಳಿಕೆಯಲ್ಲಿ ವಿಶ್ವದ ಇತರ ಲಸಿಕೆಯನ್ನು ಹೋಲಿಕೆ ಮಾಡಿ, ತಾವು ಅತ್ಯಂತ ಕಡಿಮೆಗೆ ಲಸಿಕೆ ಮಾರಾಟ ಮಾಡುತ್ತಿದ್ದೇವೆ ಎಂದು ಕೂಡಾ ಹೇಳಿದೆ.
ಸೀರಮ್ ತನ್ನ ಲಸಿಕೆಯ ಬೆಲೆಯನ್ನು ಬಿಡುಗಡೆ ಮಾಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಈ ಹಿಂದೆ ಸೀರಮ್ ಕಡಿಮೆ ಬೆಲೆಗೆ ಕೇಂದ್ರ ಸರ್ಕಾರಕ್ಕೆ ಲಸಿಕೆಯನ್ನು ನೀಡುತ್ತಿತ್ತು ಎಂದು ಸೂಚಿಸಿದೆ.
ಅದು ತನ್ನ ಟ್ವೀಟ್‌ನಲ್ಲಿ, “ಸೀರಮ್ ಸಂಸ್ಥೆ ತನ್ನ ಕೋವಿಶೀಲ್ಡ್ ಲಸಿಕೆಗೆ ನಿಗದಿಪಡಿಸಿದ ಬೆಲೆ ರಾಜ್ಯ ಸರ್ಕಾರಗಳಿಗೆ ₹400/ಡೋಸ್, ಖಾಸಗಿ ಆಸ್ಪತ್ರೆಗಳಿಗೆ ₹600/ ಡೋಸ್. ಇದೇ ಸಂಸ್ಥೆ ಹಿಂದೆ ಕೇಂದ್ರ ಸರ್ಕಾರಕ್ಕೆ ₹157.50 ಕ್ಕೆ ನೀಡಿತ್ತು. ಲಸಿಕೆ ಖರೀದಿಯ ಹೊರೆ ರಾಜ್ಯಗಳ ತಲೆ ಮೇಲೆ!” ಲಸಿಕೆ ಖರೀದಿಗೆ ಎಷ್ಟು ಹಣ ಮೀಸಲಿರಿಸಿದ್ದೀರಿ?” ಎಂದು ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದೆ.
ಸೀರಂ ಸಂಸ್ಥೆ ತನ್ನ ಕೋವಿಶೀಲ್ಡ್ ಲಸಿಕೆಗೆ ನಿಗದಿಪಡಿಸಿದ ಬೆಲೆ
ರಾಜ್ಯ ಸರ್ಕಾರಗಳಿಗೆ – ₹400/ಡೋಸ್
ಖಾಸಗಿ ಆಸ್ಪತ್ರೆಗಳಿಗೆ – ₹600/ ಡೋಸ್ಇದೇ ಸಂಸ್ಥೆ ಹಿಂದೆ ಕೇಂದ್ರ ಸರ್ಕಾರಕ್ಕೆ ₹157.50 ಕ್ಕೆ ನೀಡಿತ್ತು.
ಲಸಿಕೆ ಖರೀದಿಯ ಹೊರೆ ರಾಜ್ಯಗಳ ತಲೆ ಮೇಲೆ!@BJP4Karnataka ಲಸಿಕೆ ಖರೀದಿಗೆ ಎಷ್ಟು ಹಣ ಮೀಸಲಿರಿಸಿದ್ದೀರಿ?
— Karnataka Congress (@INCKarnataka) April 21, 2021
ಇದನ್ನೂ ಓದಿ: ದೆಹಲಿ ಹೈಕೋರ್ಟ್ ಆದೇಶದ ನಂತರ ಆಕ್ಸಿಜನ್ ಪಡೆದ ದೆಹಲಿ ಆಸ್ಪತ್ರೆಗಳು
ವಿಡಿಯೊ ನೋಡಿ: ಅಸ್ಸಾಂ ರಾಜ್ಯದ ಹೊಸ ಡಿಎಸ್‌ಪಿ ಚಿನ್ನದ ಹುಡುಗಿ ‘ಹಿಮಾ ದಾಸ್’!


