ಆಮ್ಲಜನಕದ ಕೊರತೆ ಗೋವಾ ವೈದ್ಯಕೀಯ ಕಾಲೇಜ್‌ನಲ್ಲಿ ಒಟ್ಟು 74 ರೋಗಿಗಳ ಸಾವು
Photo Courtesy: The News Minute

ಕೊವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ ಹಲವಾರು ರಾಜ್ಯಗಳು ಆಮ್ಲಜನಕದ ತುರ್ತುಸ್ಥಿತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಆಮ್ಲಜನಕ ರಫ್ತು ಕುರಿತಂತೆ ಲಭ್ಯವಿರುವ ಅಧಿಕೃತ ಅಂಕಿಅಂಶಗಳು ಈ ಸರ್ಕಾರದ ನೀತಿಯ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಏಪ್ರಿಲ್ 2020 ಮತ್ತು ಜನವರಿ 2021 ರ ನಡುವೆ, ಭಾರತವು 9,000 ಮೆಟ್ರಿಕ್ ಟನ್ ಆಮ್ಲಜನಕವನ್ನು ರಫ್ತು ಮಾಡಿದೆ! ಏಪ್ರಿಲ್ 2020 ಅಂದರೆ ಆಗ ಮೊದಲ ಕೋವಿಡ್ ಅಲೆ ತೀವ್ರವಾಗಿತ್ತು ಮತ್ತು ಕಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿತ್ತು. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ರಫ್ತು ಪ್ರಮಾಣ ಶೇ. 700ರಷ್ಟು ಹೆಚ್ಚಾಗಿದೆ!

ಈಗ ಕೋವಿಡ್‌ನ ಎರಡನೇ ಅಲೆಯ ಭಾರಿ ಉಲ್ಬಣವು ಉಸಿರಾಟದ ತೊಂದರೆಗಳು ಮತ್ತು ಆ ಕಾರಣಕ್ಕೆ ಆಮ್ಲಜನಕದ ಬೇಡಿಕೆಯ ಹೆಚ್ಚಳವನ್ನು ಉಂಟು ಮಾಡಿದೆ. ಆದರೆ, ದೇಶದಲ್ಲಿ ಈಗ ಆಮ್ಲಜನಕದ ಕೊರತೆ ತೀವ್ರವಾಗಿದೆ. ಹಲವಾರು ರಾಜ್ಯಗಳು ಈ ಕುರಿತಂತೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿ ಕೇಂದ್ರದ ನೆರವು ಯಾಚಿಸಿವೆ, ಮಂಗಳವಾರ ರಾತ್ರಿಯ ಭಾಷಣದಲ್ಲಿ ಪ್ರಧಾನಿಯವರು ಸಹ ಆಮ್ಲಜನಕದ ಕೊರತೆಯನ್ನು ದೃಢೀಕರಿಸಿದ್ದಾರೆ. ಆದರೆ, ಭಾರತದಿಂದ ಆಮ್ಲಜನಕದ ರಫ್ತು ದ್ವಿಗುಣಗೊಂಡಿದೆ ಎಂದು ಸರ್ಕಾರದ ಮಾಹಿತಿಯು ತಿಳಿಸುತ್ತದೆ!

2020 ರ ಆರ್ಥಿಕ ವರ್ಷದಲ್ಲಿ ಕೇವಲ 4,500 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಾತ್ರ ರಫ್ತು ಮಾಡಲಾಗಿತ್ತು. ಆದರೆ 2021ರ ಆರ್ಥಿಕ ವರ್ಷದಲ್ಲಿ, ಅದೂ ಕೊರೊನಾ 1ನೆ ಅಲೆ ತೀವ್ರವಾಗಿದ್ದ ಸಮಯದಲ್ಲಿ, ಈ ರಫ್ತು ದ್ವಿಗುಣಗೊಂಡಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

2020 ರ ಜನವರಿಯಿಂದ, ಭಾರತವು 352 ಮೆಟ್ರಿಕ್ ಟನ್ ಆಮ್ಲಜನಕವನ್ನು ರಫ್ತು ಮಾಡಿದ್ದಕ್ಕೆ ಹೋಲಿಸಿದಾಗ, ಈಗ 2021 ರ ಜನವರಿಯಲ್ಲಿ ಇದು ಶೇಕಡಾ 734 ರಷ್ಟು ಹೆಚ್ಚಾಗಿದೆ.
ಡಿಸೆಂಬರ್‌ನಲ್ಲಿ ದೇಶವು 2,193 ಮೆಟ್ರಿಕ್ ಟನ್ ಆಮ್ಲಜನಕವನ್ನು ರಫ್ತು ಮಾಡಿದೆ. ಇದು 2019 ರ ಡಿಸೆಂಬರ್‌ನಲ್ಲಿ ರಫ್ತಾದ 538 ಮೆಟ್ರಿಕ್ ಟನ್‌ಗಳಿಗೆ ಹೋಲಿಸಿದರೆ ಇದು ಶೇ. 308 ರಷ್ಟು ಹೆಚ್ಚಾಗಿದೆ.

2021 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ರಫ್ತು ಅಂಕಿಅಂಶಗಳನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.

ಇದನ್ನೂ ಓದಿ: ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೇ ಕೇಂದ್ರ ವಂಚಿಸುತ್ತಿದೆ: ಕೇಜ್ರಿವಾಲ್ ಹೇಳಿಕೆ

ಭಾರತವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಆಮ್ಲಜನಕ ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೂ ನಮ್ಮ ದೇಶದ ಪ್ರಜೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುತ್ತಿಲ್ಲ ಏಕೆ ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.

ಭಾರತದ ಆಮ್ಲಜನಕ ರಫ್ತು

2019-20: 4502 ಮೆ.ಟನ್
2020-21: 9300 ಮೆ.ಟನ್

ನಮ್ಮಲ್ಲಿ ಆಮ್ಲಜನಕದ ಕೊರತೆ ಇರಲಿಲ್ಲ. ನಾವು ಆಮ್ಲಜನಕದ ಅತಿದೊಡ್ಡ ಉತ್ಪಾದಕರು. ಆದರೆ ಕೊರೊನಾದ ಬೆದರಿಕೆಯ ಹೊರತಾಗಿಯೂ, ಸರ್ಕಾರವು 2019-20ಕ್ಕೆ ಹೋಲಿಸಿದೆರೆ ಕಳೆದ ವರ್ಷ ಎರಡು ಪಟ್ಟು ಹೆಚ್ಚು ಆಮ್ಲಜನಕವನ್ನು ರಫ್ತುಮಾಡಿದೆ. ಈಗ ಹೇಳಿ ಆಮ್ಲಜನಕದ ಕೊರತೆಯಿಂದಾಗುತ್ತಿರುವ ಸಾವುಗಳಿಗೆ ಯಾರು ಕಾರಣ? ಎಂದು ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೈಗಾರಿಕಾ ಬಳಕೆಗಾಗಿ ಆಮ್ಲಜನಕವನ್ನು ಏ. 22ರಿಂದ ನಿಷೇಧಿಸುವ ನಿರ್ಧಾರವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. “ಇಂದು ಅದನ್ನು ಏಕೆ ಮಾಡಬಾರದು? ಏಪ್ರಿಲ್ 22 ರವರೆಗೆ ಏಕೆ ಕಾಯಬೇಕು? ಜೀವಗಳು ಅಪಾಯದಲ್ಲಿದೆ. ಆಮ್ಲಜನಕಕ್ಕಾಗಿ ಏಪ್ರಿಲ್ 22 ರವರೆಗೆ ಕಾಯುವಂತೆ ನೀವು ರೋಗಿಗಳಿಗೆ ಹೇಳಲು ಹೋಗುತ್ತೀರಾ” ಎಂದು ನ್ಯಾಯಾಲಯ ಮಂಗಳವಾರ ಪ್ರಶ್ನಿಸಿದೆ.

“ಆರ್ಥಿಕ ಹಿತಾಸಕ್ತಿಗಳು ಮಾನವ ಜೀವನವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಇಲ್ಲದಿದ್ದರೆ ನಾವು ವಿಪತ್ತಿನತ್ತ ಸಾಗುತ್ತಿದ್ದೇವೆ’ ಎಂದರ್ಥ ಎಂದು ಕೋರ್ಟ್ ಎಚ್ಚರಿಸಿದೆ.

ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ “ಮಾನಸಿಕ ಉದ್ದೇಶಗಳಿಗಾಗಿ” ಹೆಚ್ಚಿನ ಆಮ್ಲಜನಕವನ್ನು ನೀಡುತ್ತವೆ, ಇದು ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಕೇಂದ್ರವು ಇತ್ತೀಚೆಗೆ ವಾದಿಸಿತ್ತು. ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಆಮ್ಲಜನಕದ ಬಳಕೆಯನ್ನು ತರ್ಕಬದ್ಧಗೊಳಿಸುವಂತೆ ಸೂಚಿಸಲಾಗಿದೆ ಮತ್ತು ಪ್ರಾಯೋಗಿಕವಾಗಿ ಅಗತ್ಯವಿಲ್ಲದ ರೋಗಿಗಳಿಗೆ ಆಮ್ಲಜನಕವನ್ನು ನೀಡಬಾರದು ಎಂದು ಕೇಂದ್ರ ತಿಳಿಸಿತ್ತು.


ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here