Homeಫ್ಯಾಕ್ಟ್‌ಚೆಕ್ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

- Advertisement -
- Advertisement -

ಪ್ರಧಾನಿಗೂ ಬಿಜೆಪಿ ಐಟಿ ಸೆಲ್ ಸಲಹೆ ಕೊಡುತ್ತಾ ಎನ್ನುವ ಸಂದೇಹ ಶುರುವಾಗಿದೆ. ಏಕೆಂದರೆ ಹೋದ ವಾರದ ಮನ್ ಕಿ ಬಾತ್‌ ವಿಡಿಯೋದಲ್ಲಿ ಪ್ರಧಾನಿ, ಆಮ್ಲಜನಕ ಲಭ್ಯತೆ ಕುರಿತಂತೆ ನಮ್ಮ ವೈದ್ಯರು ಹಲವಾರು ಪ್ರಯೋಗ ಮಾಡುತ್ತಿದ್ದಾರೆ ಎನ್ನುವಾಗ, ಪಕ್ಕದಲ್ಲಿ ಆಮ್ಲಜನಕಕ್ಕೆ ಪರ್ಯಾಯವಾಗಿ ನೆಬ್ಯುಲೈಸರ್ ಬಳಸಬಹುದು (ಅಸ್ತಮಾ ರೋಗಿಗಳು ಔಷಧ ಸೇವನೆಗೆ ಬಳಸುವ ಸಲಕರಣೆ) ಎಂಬ ಅವೈಜ್ಞಾನಿಕ ಮಾಹಿತಿಯ ವೈರಲ್ ವಿಡಿಯೋ ಪ್ರಸಾರವಾಯ್ತು! ಅದು ಸುಳ್ಳಾಗಿದ್ದು ನೆಬ್ಯುಲೈಸರ್‌ನಿಂದ ಆಮ್ಲಜನಕ ಕೊರತೆಯಿರುವವರಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇಡೀ ದೇಶ ಕೋವಿಡ್ 2ನೆ ಅಲೆ ವಿರುದ್ಧ ಹೋರಾಡುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಳ್ಳುಗಳ ಸುಗ್ಗಿ ಎಂಬ ವಿಕೃತ ‘ವ್ಯವಹಾರ’ ಚಾಲ್ತಿಯಲ್ಲಿದೆ. ಈ ಬಹುಪಾಲು ಸುಳ್ಳುಗಳ ಹಿಂದೆ ಬಿಜೆಪಿಯ ಐಟಿ ಸೆಲ್, ಓಪಿ ಇಂಡಿಯಾ, ಪೋಸ್ಟ್ ಕಾರ್ಡ್, ಬಿಜೆಪಿಯ ಸಾವಿರಾರು ವ್ಯಾಟ್ಸಾಪ್, ಫೇಸ್‌ಬುಕ್ ಗುಂಪುಗಳು ಮತ್ತು ಬಿಜೆಪಿಯ ಹಲವು ನಾಯಕರಿದ್ದಾರೆ. ಕೋವಿಡ್ ಕಾಲದಲ್ಲಿ ಇವರು ಹಬ್ಬಿಸಿದ ಸುಳ್ಳುಗಳನ್ನು ಮತ್ತು ವಾಸ್ತವವೇನು ಎಂಬುದನ್ನು ನೋಡೋಣ ಬನ್ನಿ.

ಆಮ್ಲಜನಕ ಕೊರತೆಯಿಂದ ದೇಶ ತತ್ತರಿಸುತ್ತಿದೆ. ಉತ್ತರಪ್ರದೇಶದಲ್ಲಿ ಇದು ಭೀಕರವಾಗಿದೆ. ಆದರೆ ಕನ್ನಡದ ಪೋಸ್ಟ್ ಕಾರ್ಡ್ ಎಂಬ ಫೇಕ್ ಫ್ಯಾಕ್ಟರಿ, ‘ದೆಹಲಿಯ ಕೇಜ್ರಿವಾಲ್, ಮಹಾರಾಷ್ಟ್ರದ ಠಾಕ್ರೆ ಆಮ್ಲಜನಕ ಕೇಳಿದರು. ಆದರೆ ನಮ್ಮ ಯೋಗಿ ಆದಿತ್ಯನಾಥರಿಗೆ ಆ ಸಮಸ್ಯೆಯೇ ಇಲ್ಲ’ ಎಂದು ಬೂಸಿ ಬಿಟ್ಟಿತು. ಈಗೇನಾಗಿದೆ? ಅಲ್ಲಿ ಕೋವಿಡ್ ಸಾವುಗಳ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ತನ್ನ ಅಜ್ಜನಿಗಾಗಿ ಟ್ವೀಟ್ ಮೂಲಕ ಆಮ್ಲಜನಕ ಬೇಡಿದ ಯುವಕನ ಮೇಲೆ ಉತ್ತರಪ್ರದೇಶದ ಪೊಲೀಸರು ಕ್ರಿಮಿನಲ್ ಕೇಸ್ ಜಡಿದಿದ್ದಾರೆ!

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವಿಫಲತೆಗಳನ್ನು ಮರೆಮಾಡಲು ಹಗಲಿರುಳು 24*7 ಫ್ಯಾಕ್ಟರಿ ಓಪನ್ ಇಟ್ಟಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ, ಇಡೀ ಪ್ರಪಂಚವು ಕೊರೋನಾ ವೈರಸ್ ಬಿಕ್ಕಟ್ಟು ಎದುರಿಸಲು ಮಾರ್ಗಗಳನ್ನು ಹುಡುಕುತ್ತಿರುವಾಗ, ಬಿಜೆಪಿ ಐಟಿ ಸೆಲ್ ಇಲ್ಲಿ ಹಸುವಿನ ಮೂತ್ರ ಮತ್ತು ಹಸುವಿನ ಸೆಗಣಿಯ ಪ್ರಯೋಜನಗಳ ಬಗ್ಗೆ ಸಂದೇಶಗಳನ್ನು ಪ್ರಸಾರ ಮಾಡುತ್ತ ಜನರನ್ನು ದಾರಿ ತಪ್ಪಿಸುತ್ತಿತ್ತು. ಕೊರೋನಾ ತಡೆಗೆ ಹಸುವಿನ ಮೂತ್ರವನ್ನು ಕುಡಿಯಿರಿ ಮತ್ತು ಮನೆಗಳನ್ನು ಸೆಗಣಿಯಿಂದ ಸಾರಿಸಿ ಎಂಬ ಸಂದೇಶಗಳೊಂದಿಗೆ ವಾಟ್ಸಾಪ್ ಗುಂಪುಗಳು ತುಂಬಿ ತುಳುಕುತ್ತಿದ್ದವು. ಹಾಗೆ ಮಾಡಿದರೆ, ಕೊರೋನಾ ಅಲ್ಲ, ಅದರ ಅಪ್ಪನೂ ಕೂಡ ಹತ್ತಿರ ಬರಲು ಧೈರ್ಯ ಮಾಡುವುದಿಲ್ಲ ಎಂದು ಸಂದೇಶಗಳು ತಿಳಿಸಿದ್ದವು. ಇದು ಮಾತ್ರವಲ್ಲ, ಅವರ ಪ್ರಚಾರವು ವಿಶ್ವಾಸಾರ್ಹವೆಂದು ತೋರಿಸಲು ಮತ್ತು ಅದಕ್ಕೆ ಆಯುರ್ವೇದ ಬಣ್ಣವನ್ನು ನೀಡಲು, ತುಳಸಿ ಮತ್ತು ಬೇವಿನ ಎಲೆಗಳನ್ನು ಸೇರಿಸಿದರು! ಆದರೆ ಹಾಗೆ ಮಾಡಿದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದರು.

 

ಕೊರೊನಾ ಕಾಲದಲ್ಲಿ ಬಿಜೆಪಿ ಹರಡಿದ ಫೇಕ್‌ ನ್ಯೂಸ್‌ಗಳು

ಸುಳ್ಳು: ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಕೇವಲ ಒಂದು ಏಮ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಪ್ರಧಾನಿ ಮೋದಿ ಕಳೆದ ಏಳು ವರ್ಷಗಳಲ್ಲಿ 15 ಏಮ್ಸ್ ಸ್ಥಾಪಿಸಿದ್ದಾರೆ ಎಂದು ಬಿಹಾರ ಸರ್ಕಾರದ ಕ್ಯಾಬಿನೆಟ್ ಸಚಿವ ನಂದ್ ಕಿಶೋರ್ ಯಾದವ್ ಪ್ರತಿಪಾದಿಸಿದ್ದಾರೆ.

ವಾಸ್ತವ: 2003 ರಲ್ಲಿ ಅವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಮಾಜಿ ಪ್ರಧಾನಿ ವಾಜಪೇಯಿರವರು PMSSY ಅಡಿಯಲ್ಲಿ “ದೆಹಲಿಯ ಏಮ್ಸ್‌ನಲ್ಲಿ ಲಭ್ಯವಿರುವಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಆರು ಹೊಸ ಆಸ್ಪತ್ರೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಸ್ಥಾಪಿಸಲಾಗುವುದು” ಎಂದು ಘೋಷಿಸಿದರು. ಆದರೆ ಘೋಷಣೆ ಮಾಡಿದ ಒಂಬತ್ತು ತಿಂಗಳ ನಂತರ ವಾಜಪೇಯಿ ಸರ್ಕಾರ ಅಧಿಕಾರದಿಂದ ಹೊರಬಂದಿತು. ಆರು ಆಸ್ಪತ್ರೆಗಳನ್ನು ಯುಪಿಎ ಅಧಿಕಾರಾವಧಿಯಲ್ಲಿ ಸ್ಥಾಪಿಸಲಾಯಿತು. ಇತರ 15 ಏಮ್ಸ್ ಅನ್ನು ಬಿಜೆಪಿ ಸರ್ಕಾರವು ಘೋಷಿಸಿತು ಆದರೆ ಅವು ಭಾಗಶಃ ಕಾರ್ಯನಿರ್ವಹಿಸುತ್ತಿದ್ದರೇ ಕೆಲವು ಇನ್ನೂ ನಿರ್ಮಾಣ ಹಂತದಲ್ಲಿದೆ.

ಸುಳ್ಳು: “ದೆಹಲಿ, ಪಂಜಾಬ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಕ್ಸಿಜನ್‌ಗಾಗಿ ಮೋದಿ ಬಳಿ ಗೋಗರೆಯುತ್ತಿದ್ದರೆ ಉತ್ತರ ಪ್ರದೇಶ ಸಂತ ಕಾವಿಧಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಎಂಟರಿಂದ ಹತ್ತು ಆಕ್ಸಿಜನ್ ಘಟಕಗಳನ್ನೇ ಸ್ಥಾಪಿಸಿದರು” ಎಂದು ಪೋಸ್ಟ್ ಕಾರ್ಡ್ ಮಹೇಂದ್ರ ಹೆಗಡೆ ಪೋಸ್ಟರ್ ಮಾಡಿದ್ದಾರೆ.

ವಾಸ್ತವ: ಅದೇ ದಿನ ಲಕ್ನೋದ ಮಯೋ ಆಸ್ಪತ್ರೆ ಮತ್ತು ಮೇಕ್ ವೆಲ್ ಆಸ್ಪತ್ರೆ ಒಂದೋ ಅಕ್ಸಿಜನ್ ಸಿಲಿಂಡರ್ ನೀಡಿ, ಇಲ್ಲಾಂದ್ರೆ ಕೊರೊನಾ ರೋಗಿಗಳನ್ನು ನಮ್ಮ ಆಸ್ಪತ್ರೆಯಿಂದ ಸ್ಥಳಾಂತರಿಸಿ ಎಂದು ನೋಟಿಸ್ ನೀಡಿದೆ. ತದನಂತರ ಮೋದಿ ಸರ್ಕಾರ ಉತ್ತರ ಪ್ರದೇಶಕ್ಕೆ ಹೆಚ್ಚಿನ ಆಕ್ಸಿಜನ್ ಪೂರೈಕೆ ಮಾಡಿತ್ತು. ಇನ್ನು ಸಣ್ಣ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು 45 ದಿನ ಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸುಳ್ಳು: ಕೇಂದ್ರ ಸರ್ಕಾರ ಹಣ ನೀಡಿದರೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ 8 ಆಕ್ಸಿಜನ್ ಪ್ಲಾಂಟ್‌ಗಳನ್ನು, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ 10 ಪ್ಲಾಂಟ್‌ಗಳನ್ನು ನಿರ್ಮಿಸಿಲ್ಲ. ಹಣವೆಲ್ಲಾ ನುಂಗಿ ನೀರು ಕುಡಿದಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಸೇರಿದಂತೆ ಬಿಜೆಪಿಯ ಹಲವು ಸಚಿವರು, ನಾಯಕರು ಮತ್ತು ಅನುಯಾಯಿಗಳು ಆರೋಪಿಸಿದ್ದಾರೆ.

ವಾಸ್ತವ: ಈ ಮೇಲಿನ ಆರೋಪಗಳು ಸಂಪೂರ್ಣ ಸುಳ್ಳಾಗಿವೆ. ಏಕೆಂದರೆ ಆಮ್ಲಜನಕ ಘಟಕಗಳ ಸ್ಥಾಪನೆಗೆ ಪಿಎಂ ಕೇರ್ಸ್‌ನಿಂದ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಬದಲಿಗೆ ದೇಶಾದ್ಯಂತ 162 ಆಮ್ಲಜನಕ ಘಟಕಗಳ ಸ್ಥಾಪನೆಯ ಹೊಣೆ ಹೊತ್ತಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಆರೋಗ್ಯ ಸೇವೆಗಳ ಸೊಸೈಟಿ. ಹೀಗಾಗಿ ಇದು ಕೇಂದ್ರ ಸರ್ಕಾರ ಮತ್ತು ಮೋದಿಯವರ ವೈಫಲ್ಯವೇ ಹೊರತು, ದೆಹಲಿ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ವೈಫಲ್ಯ ಅಲ್ಲವೇ ಅಲ್ಲ.

ಸುಳ್ಳು; ವಿಡಿಯೊ ಕ್ಲಿಪ್ ಒಂದನ್ನು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್‌, “ಕುಂಭಮೇಳದ ನಂತರ …. ಗೌರವಾನ್ವಿತ ಪ್ರಧಾನಿಯವರೆ, ದಯವಿಟ್ಟು ರಂಜಾನ್ ಸಭೆಯನ್ನು ಕೂಡಾ ನಿಲ್ಲಿಸುವಂತೆ ವಿನಂತಿಸುತ್ತೇನೆ” ಎಂದು ಬರೆದು ಕೊಂಡಿದ್ದಾರೆ. ಆದರೆ ಈ ಟ್ವೀಟನ್ನು ಅವರು ಡಿಲಿಟ್ ಮಾಡಿದ್ದಾರೆ. ಅವರ ಟ್ವೀಟ್‌ನ ಆರ್ಕೈವ್‌ ಅನ್ನು ಇಲ್ಲಿ ನೋಡಬಹುದು.

ವಾಸ್ತವ: ವೈರಲ್‌ ವೀಡಿಯೊದಲ್ಲಿ ನೋಡಿದ ಜನಸಮೂಹವು, ಎರಡು ವಾರಗಳಿ ಹಿಂದೆ ಮೌಲಾನಾ ಅಬ್ದುಲ್ ಮೊಮಿನ್ ನದ್ವಿ ನಿಧನರಾದಾಗ “ಸಂಭಾಲ್‌ನ ನಖಾಸ್ ಪ್ರದೇಶದಲ್ಲಿನ ಅಂಜುಮಾನ್ ಮುಯಿನುಲ್ ಇಸ್ಲಾಂ ಮದ್ರಸದಲ್ಲಿ ಅಂತ್ಯಕ್ರಿಯೆಗೆ ಸೇರಿದ ಜನ ಸಮೂಹವಾಗಿದೆ” ಎಂದು ಸಂಭಾಲ್ ನಿವಾಸಿ ಶಾನ್ ಅವರು ತಿಳಿಸಿದ್ದಾರೆಂದು ಬೂಮ್‌ಲೈವ್‌ ವರದಿ ಮಾಡಿದೆ.

ಸುಳ್ಳು: ತಬ್ಲಿಗಿ ಸಮಾವೇಶದ ನಂತರ, ತಬ್ಲಿಗಿಗಳು ಬೇಕೆಂತಲೇ ಸಾಮೂಹಿಕವಾಗಿ ಸೀನಿದರು, ತಟ್ಟೆ ನೆಕ್ಕಿದರು ಎಂದೆಲ್ಲ ಸುಳ್ಳು ಹರಡಿದರು.

ವಾಸ್ತವ: ಈ ವೀಡಿಯೊವನ್ನು ಜುಲೈ 31, 2018 ರಂದು ಮೊದಲ ಬಾರಿಗೆ ಅಪ್‌ಲೋಡ್ ಮಾಡಲಾಗಿದೆ. ಆಹಾರದ ಒಂದು ಅಗುಳನ್ನು ಸಹ ವ್ಯರ್ಥ ಮಾಡಬಾರದು ಎಂಬ ಸಂದೇಶ ನೀಡಲು ಬೋಹ್ರಾ ಸಮುದಾಯವು ನಡೆಸುವ ಸಾಂಕೇತಿಕ ಅಭ್ಯಾಸವನ್ನು ವೀಡಿಯೊ ಮಾಡಲಾಗಿದೆ. ಈ ಕ್ಲಿಪ್ ಹಳೆಯದು ಮತ್ತು ಕೊರೊನಾ ವೈರಸ್‌ಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ.

ಸುಳ್ಳು: ಭಾರತದ ಪ್ರಧಾನಿ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ಹಲವು ದೇಶಗಳಿಗೆ ರಫ್ತು ಮಾಡಿದ ನಂತರ ಭಾರತದ ಈ ಮಹಾನ್ ಕಾರ್ಯಕ್ಕಾಗಿ ಸ್ವಿಟ್ಜರ್‌ಲ್ಯಾಂಡ್‌ ದೇಶವು ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸುವ ಮೂಲಕ ಗೌರವ ಸಲ್ಲಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟ್ವೀಟ್ ಮಾಡಿದ್ದರು.

ವಾಸ್ತವ: ಕೋವಿಡ್‌ ವಿರುದ್ಧ ಹೋರಾಟುತ್ತಿರುವ ಭಾರತೀಯರಿಗೆ ಸಾಲಿಡಾರಿಟಿ ತೋರಿಸಲು ಈ ಚಿತ್ರವನ್ನು ಪ್ರೊಜೆಕ್ಟ್‌ ಮಾಡಲಾಗಿತು ಎಂದು ಎಂಬೆಸ್ಸಿಯು ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಸ್ಪಷ್ಟವಾಗಿ ಬರೆದಿದೆ. ಅಲ್ಲಿ ಕೇವಲ ಭಾರತೀಯ ತ್ರಿವರ್ಣ ಮಾತ್ರವಲ್ಲದೇ ಚೀನಾ, ಅಮೆರಿಕ, ಜಪಾನ್, ಜರ್ಮನಿ, ಬ್ರಿಟನ್, ಸ್ಪೇನ್, ಫ್ರಾನ್ಸ್ ಮತ್ತು ಇಟಲಿಯ ರಾಷ್ಟ್ರೀಯ ಧ್ವಜಗಳೊಂದಿಗೆ ಬೆಳಗಿದ ಪರ್ವತದ ಚಿತ್ರಗಳನ್ನು ನೀವು ನೋಡಬಹುದು.

ಸುಳ್ಳು: ಕೋವಿಡ್ ಪರೀಕ್ಷೆ ನಡೆಸುವವರ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ- ಯುಪಿ ವೈದ್ಯೆ ವಂದನಾ ತಿವಾರಿ ಸಾವು ಎಂದು ಬಿಜೆಪಿ ಮುಖಂಡ ಪ್ರಮೋದ್ ಸಿಂಗ್ ಆಪಾದಿಸಿದ್ದರು.

ವಾಸ್ತವ: ಆ ಸುದ್ದಿ ಸುಳ್ಳಾಗಿದ್ದು ವೈರಲ್‌ ಫೋಟೊದಲ್ಲಿರುವ ಮಹಿಳೆಯರು ಮಧ್ಯಪ್ರದೇಶ ಫಾರ್ಮಾಸಿಸ್ಟ್‌ ಆಗಿದ್ದು ಅವರು ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮತ್ತು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜಾಗತಿಕವಾಗಿ ಕೊರೋನಾ ತೀವ್ರವಾಗುತ್ತಿದ್ದ ಸಂದರ್ಭದಲ್ಲಿ, ಸಿಎಎ ವಿರೋಧಿ ಹೋರಾಟ ತುಳಿಯಲು, ಶಹೀನ್ ಬಾಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸ್ಲಿಮರಿಗೆ ಹಣ ನೀಡಲಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ ಮಾಳವಿಯ ಟ್ವೀಟ್ ಮಾಡಿ ಸುಳ್ಳು ಹರಡಿದ್ದರು. ಆದರೆ ಆ ವಿಡಿಯೋ ದೆಹಲಿ ಗಲಭೆ ಸಂತ್ರಸ್ತರಿಗೆ ಸಂಘಟನೆಯೊಂದು ನೆರವು ನೀಡುವ ದೃಶ್ಯ ಒಳಗೊಂಡಿತ್ತು.

ಚೀನಾ ಜೊತೆಗಿನ ಗಡಿ ಸಂಘರ್ಷದ ಸಮಯದಲ್ಲಿ ಭಾರತೀಯ ಸೈನ್ಯ 43 ಚೀನಿ ಸೈನಿಕರನ್ನು ಕೊಂದಿದೆ ಎಂದು 43 ಚೈನಿ ಹೆಸರುಗಳಿರುವ ಪಟ್ಟಿ ಬಿಡುಗಡೆ ಮಾಡಲಾಯ್ತು. ಕೆಲವು ಚಾನೆಲ್‌ಗಳು ಇದನ್ನು ಪ್ರಸಾರ ಮಾಡಿದವು! ಆದರೆ ಫ್ಯಾಕ್ಟ್ಚೆಕ್ ಪೋರ್ಟಲ್‌ಗಳು ಇದು ಫೇಕ್ ಎಂದು ಸಾಬೀತು ಮಾಡಿದವು.

ಬಿಜೆಪಿಯ ಐಟಿ ಸೆಲ್ ಈ ದೇಶದಲ್ಲಿ ಸುಳ್ಳು, ದ್ವೇಷ, ತಪ್ಪು ಮಾಹಿತಿಗಳನ್ನು ಉತ್ಪಾದಿಸುವ ಅತಿ ದೊಡ್ಡ ಕಾರ್ಖಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ಅದು ತನ್ನ ‘ವ್ಯವಹಾರ’ ಮತ್ತು ಕ್ಷುಲ್ಲಕ ರಾಜಕೀಯವನ್ನು ಬಿಡಲೇ ಇಲ್ಲ.
2018 ರಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಮತ್ತು ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದ್ದಾರೆಂದು ಹೇಳಿದ್ದರು. ಬಿಜೆಪಿಯ ವಾಟ್ಸಾಪ್ ಗುಂಪು 32 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಎನ್ನಲಾಗಿದೆ.

ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು

ನಮ್ಮ ದಿಟನಾಟರ ಸೆಕ್ಷನ್‌ನಲ್ಲಿ ಮತ್ತಷ್ಟು ಫ್ಯಾಕ್ಟ್‌ಚೆಕ್‌ಗಳನ್ನು ಓದಿ: 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...