ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿಕ್ಕಮ್ಮ ನರ್ಮದಾ ಬೆನ್ ಅವರು ಚಿಕಿತ್ಸೆ ಫಲಕಾರಿಯಾಗದೇ ಅಹಮದಾಬಾದ್‌ನಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.
80 ವರ್ಷದ ನರ್ಮದಾಬೆನ್ ಅವರು ಕೊರೊನಾಗೆ ಒಳಗಾದ ಬಳಿಕ ಗುಜರಾತ್ನ ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಆಸ್ಪತ್ರೆಯಲ್ಲೆ ಅವರು ಕೊನೆ ಉಸಿರೆಳೆದಿದ್ದಾರೆ.
ಇದನ್ನೂ ಓದಿ: ಕೋವಿಡ್ ಕಾಲ: ಕೇರಳದ ಬೀಡಿ ಕಾರ್ಮಿಕರೊಬ್ಬರಿಂದ ಸಿಎಂ ಫಂಡ್‌ಗೆ 2 ಲಕ್ಷ ರೂ. ದೇಣಿಗೆ
ನಮ್ಮ ಚಿಕ್ಕಮ್ಮನನ್ನು ಕಳೆದ 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ತಿಳಿಸಿದ್ದಾರೆ.
ನರ್ಮದಾ ಬೆನ್ ಅವರು ಅಹಮದಾಬಾದ್‌ನ ನ್ಯೂ ರ್‍ಯಾನಿಪ್ ಪ್ರದೇಶದಲ್ಲಿ ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ನರ್ಮದಾ ಬೆನ್ ಅವರ ಪತಿ ಜಗಜೀವನ್ದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಸಹೋದರರಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ರೋಗಿಯನ್ನು ಆಸ್ಪತ್ರೆಯ ಸಿಬ್ಬಂದಿ ಕೊಲ್ಲುತ್ತಿದ್ದಾರೆ ಎಂಬ ಈ ವಿಡಿಯೊ ಸುಳ್ಳು!


