ಮಾಸ್ಕ್‌‌ ಧರಿಸಿರುವ ವ್ಯಕ್ತಿಯೊಬ್ಬ ರೋಗಿಯೊಬ್ಬರನ್ನು ಉಸಿರುಗಟ್ಟಿಸುವ ರೀತಿಯಲ್ಲಿ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊ ಜೊತೆಗೆ, ಕೊರೊನಾ ರೋಗಿಗಳನ್ನು ದುಡ್ಡಿಗಾಗಿ ಆಸ್ಪತ್ರೆಯ ಜನರು ಕೊಲ್ಲುತ್ತಿದ್ದಾರೆ ಎಂದು ಸಂದೇಶ ಕೂಡಾ ಹರಿದಾಡುತ್ತಿದೆ.

ಕೆಲವರು, ಕೊರೊನಾ ಸೋಗಿನಲ್ಲಿ ಭಾರಿ ಪಿತೂರಿ ನಡೆಯುತ್ತಿದೆ ಎಂದು ಪ್ರತಿಪಾದಿಸಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಹಲವಾರು ಜನರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೊರೊನಾ ಸಮಯದಲ್ಲಿ ಕುಂಭಮೇಳಕ್ಕೆ ಆಕ್ಷೇಪ; ಪತ್ರಕರ್ತೆಯ ಇರಿದು ಕೊಲೆ ಎಂಬುದು ಸುಳ್ಳು

ಫ್ಯಾಕ್ಟ್‌ಚೆಕ್‌

ಈ ಬಗ್ಗೆ ಫ್ಯಾಕ್ಟ್‌ಚೆಕ್‌‌ ವೆಬ್‌ಸೈಟ್‌‌ ಆಲ್ಟ್‌ನ್ಯೂಸ್‌‌‌‌ ವಿಡಿಯೊವನ್ನು ಇಂಟರ್‌ನೆಟ್‌‌ನಲ್ಲಿ ಹುಡುಕಾಡಿದ್ದು, ಅದು ಮೇ 19, 2020 ರಂದು ಮಾಡಿದ್ದ ಟ್ವೀಟ್‌ ಒಂದರಲ್ಲಿ ಈ ವಿಡಿಯೊ ಬಗ್ಗೆಗಿನ ವರದಿ ಇರುವುದನ್ನು ಕಂಡುಕೊಂಡಿದೆ. ಈ ವರದಿಯನ್ನು ಬಾಂಗ್ಲಾದೇಶ ಮೂಲದ ಸೊಕಲರ್‌ಸೊಂಗ್‌ಬಾದ್.ಕಾಮ್ ಬರೆದಿತ್ತು. “ಇಬ್ಬರು ವ್ಯಕ್ತಿಗಳು ಜಗಳವಾಡಿದ್ದು, ಹಿರಿಯ ವ್ಯಕ್ತಿಯಾದ ಮನ್ಸೂರ್‌ ಮೊಲ್ಲಾ ಅವರನ್ನು ಏಪ್ರಿಲ್ 21, 2020 ರಂದು ಆಸ್ಪತ್ರೆಯ ಹಾಸಿಗೆಯಲ್ಲಿ ಕತ್ತು ಹಿಸುಕಲಾಗಿದೆ. ಅವರು ಮರುದಿನ ನಿಧನರಾದರು. ಈ ಘಟನೆ ಬಾಂಗ್ಲಾದೇಶದ ಬೋಲ್‌ಮರಿಯ ಫರೀದ್‌ಪುರದ ದಾದ್ಪುರದಲ್ಲಿ ನಡೆದಿದೆ” ಎಂದು ವರದಿ ಹೇಳಿದೆ.

ಆದಾಗ್ಯೂ, ಘಟನೆಯ ಆರಂಭಿಕ ವರದಿಗಳಲ್ಲಿ ವೀಡಿಯೊ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಜೊತೆಗೆ ಘಟನೆಯ ವಿವರಗಳಿಗೆ ವೀಡಿಯೊ ಹೊಂದಿಕೆಯಾಗುವುದಿಲ್ಲ.

ಏಪ್ರಿಲ್ 22 ರಂದು ಡಾಕಾಟೈಮ್ಸ್ 24.ಕಾಂನಲ್ಲಿ ಪ್ರಕಟವಾದ ವರದಿಯ ಪ್ರಕಾರ, “ಬೋಲ್ಮರಿ ಪೊಲೀಸ್ ಅಧಿಕಾರಿ (ಒಸಿ) ಅಮಿನೂರ್ ರಹಮಾನ್ ಹೇಳುವಂತೆ, ‘ದೋಲ್ಪುರ್ ಗ್ರಾಮದ ಫಜಲ್ ಖಾರ್ ಅವರ ಪುತ್ರ ಅಬುಬಕ್ಕರ್ ಎಂಬವರು ಮಂಗಳವಾರ [ಏಪ್ರಿಲ್ 21] ಸಂಜೆ ಕ್ರಿಕೆಟ್ ಆಡುತ್ತಿದ್ದಾಗ, ಸೊಲೈಮಾನ್ ಮೊಲ್ಲಾ ಅವರ ಪುತ್ರ ಕಿಬ್ರಿಯಾ ಮೊಲ್ಲಾ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಕಾರಣದಿಂದಾಗಿ, ಫಜಲ್ ಖಾರ್‌ನ ಜನರು ರಾತ್ರಿ ವೇಳೆಯಲ್ಲಿ ಛೇಲಮಾನ್ ಮೊಹಲ್ಲಾ ಜನರ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಈ ಗಲಾಟೆಯನ್ನು ನಿಲ್ಲಿಸಲು ಪ್ರಯತ್ನಿಸಿದ ಮನ್ಸೂರ್ ಮೊಲ್ಲಾ ಅವರಿಗೆ ತಲೆಗೆ ಹೊಡೆಯಲಾಗಿದೆ. ಅವರನ್ನು ಫರೀದ್ಪುರ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಜಾನೆ 1 ಗಂಟೆ ಸುಮಾರಿಗೆ ನಿಧನರಾದರು”

ಇದನ್ನೂ ಓದಿ: ಆಮ್ಲಜನಕ ಮಟ್ಟ ಹೆಚ್ಚಳಕ್ಕೆ ಕರ್ಪೂರ, ಲವಂಗ, ಅಜಿವಾನ ಮತ್ತು ನೀಲಗಿರಿ ಎಣ್ಣೆ ಬಳಸಬೇಡಿ, ಇದು ಮಾರಣಾಂತಿಕವೂ ಆಗಬಹುದು

ಏಪ್ರಿಲ್ 21 ರಂದು ಕೆಲವು ಯುವಕರ ನಡುವಿನ ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದ ಜಗಳದಲ್ಲಿ ಮನ್ಸೂರ್ ಮೊಲ್ಲಾ ಗಾಯಗೊಂಡಿದ್ದಾರೆ. ಏಪ್ರಿಲ್ 22 ರ ಮುಂಜಾನೆ ಅವರು ನಿಧನ ಹೊಂದಿದರು ಎಂದು ದಿ ಡೈಲಿ ಪ್ರೋಥಮ್ ಅಲೋದಲ್ಲಿ ಪ್ರಕಟವಾದ ಮತ್ತೊಂದು ವರದಿ ಹೇಳುತ್ತದೆ.

ಈ ಬಗ್ಗೆ ‘ভিডিও মনসুর মোল্লা’ (ವಿಡಿಯೋ ಮನ್ಸೂರ್ ಮೊಲ್ಲಾ) ಎಂಬ ಕೀವರ್ಡ್‌ಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹುಡುಕಾಡಿದಾಗ ಬಾಂಗ್ಲಾದೇಶದ ಡಾಕಾ ನಿವಾಸಿ ಹಸನ್ ಮೊಲ್ಲಾ ಎಂಬವರ ಫೇಸ್‌ಬುಕ್ ಸ್ಟೇಟಸ್ ಒಂದು ಕಂಡು ಬಂದಿದೆ. ಅದರಲ್ಲಿ ಮನ್ಸೂರ್ ಮೊಲ್ಲಾಗೆ ಸಂಬಂಧಿಸಿದ ಘಟನೆಯ ವೀಡಿಯೊವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ ಎಂದು ಅವರು ಮೇ 18 ರಂದು ಬರೆದಿದ್ದಾರೆ.

ವೈರಲ್ ವಿಡಿಯೊದಲ್ಲಿ ಇರುವ ವ್ಯಕ್ತಿಗೂ, ಮನ್ಸೂರ್‌‌ ಮೊಲ್ಲಾ ಅವರಿಗೂ ಸಂಬಂಧವಿಲ್ಲ ಎಂದು ಮನ್ಸೂರ್‌ ಮೊಲ್ಲರಿಗೆ ಆಗಿರುವ ಗಾಯಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮನ್ಸೂರ್‌ ಮೊಲ್ಲಾ ದಪ್ಪ ಗಡ್ಡವನ್ನು ಹೊಂದಿದ್ದು ಅದು ಅವನ ಕುತ್ತಿಗೆ ಪೂರ್ತಿ ಆವರಿಸಿದೆ. ಆದರೆ ವೀಡಿಯೊದಲ್ಲಿರುವ ವ್ಯಕ್ತಿಗೆ ಗಡ್ಡವಿಲ್ಲ ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!

ಹಸನ್ ಮೊಲ್ಲಾ ಅವರ ಫೇಸ್‌ಬುಕ್‌ ಪೋಸ್ಟ್ ಬಗ್ಗೆ ಹಲವಾರು ಜನರು ಕಮೆಂಟ್ ಮಾಡಿದ್ದು, ಹಲವು ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ವೀಡಿಯೊವನ್ನು ಸಂಪೂರ್ಣವಾಗಿ ವಿಭಿನ್ನ ಸಂದರ್ಭದೊಂದಿಗೆ ಹಂಚಿಕೊಳ್ಳಲಾಗಿದೆ.

ಮೇ 14 ರಂದು ಬಾಂಗ್ಲಾದೇಶದ ಸಿಲ್ಹೆಟ್‌ನ ರಾಜೇಶ್ ಸರ್ಕಾರ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಕತ್ತು ಹಿಸುಕುತ್ತಿದ್ದಾನೆ ಎಂದು ಬರೆದಿದ್ದಾರೆ. ಅವರು ಹಂಚಿರುವ ವೀಡಿಯೊ slynewsbd.com ನ ಲೋಗೊವನ್ನು ಹೊಂದಿದೆ. ಅದೆ ವೀಡಿಯೊವನ್ನು ಅದೇ ರೀತಿಯ ನಿರೂಪಣೆಯೊಂದಿಗೆ ಔಟ್‌ಲೆಟ್‌ ಹಂಚಿಕೊಂಡಿತ್ತು.

ಇದನ್ನೂ ಓದಿ: ಗೌರಿ ಲಂಕೇಶ್‌ ನ್ಯಾಯಪಥ ಪತ್ರಿಕೆಯ ಚಂದಾದಾರರಾಗಲು ಇಲ್ಲಿ ಕ್ಲಿಕ್ಕಿಸಿ

ಮಗನೊಬ್ಬ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಕತ್ತು ಹಿಸುಕುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಬಾಂಗ್ಲಾದೇಶದಲ್ಲಿ ವೈರಲ್ ಆಗಿದೆ. ಆದರೆ ದೇಶದ ಯೂಟ್ಯೂಬರ್ ಒಬ್ಬರು, ಮಗನೊಬ್ಬ ತನ್ನ ತಂದೆಗೆ ಬಲವಂತವಾಗಿ ಆಹಾರವನ್ನು ನೀಡಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳುತ್ತಾರೆ.

ಈ ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, ವಯಸ್ಸಾದ ವ್ಯಕ್ತಿಯ ಕೈಗಳು ಅವರ ಕುತ್ತಿಗೆಗೆ ಹೋಗುವುದೆ ಇಲ್ಲ. ಅವರು ತಮ್ಮ ಬಾಯಿಯನ್ನು ಮುಚ್ಚಲು ಪ್ರಯತ್ನಿಸುತ್ತಾ ಇದ್ದಾರೆ. ಅದಕ್ಕಾಗಿ ಅವರ ಮಗ ಅವರ ಕೈಗಳನ್ನು ತನ್ನ ಕೈಯಿಂದ ತಳ್ಳುತ್ತಾ ಇರುವುದನ್ನು ನೋಡಬಹುದಾಗಿದೆ.

ಈ ವೀಡಿಯೊ ಮೊದಲಿಗೆ ಬಾಂಗ್ಲಾದೇಶದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಆಗಿತ್ತು ಮತ್ತು ಅದನ್ನು ಹಲವಾರು ಮಾಧ್ಯಮಗಳು ಕೂಡಾ ಸುಳ್ಳು ಪ್ರತಿಪಾದನೆಯೊಂದಿಗೆ ವರದಿ ಮಾಡಿದ್ದವು. ಈಗ ಅದು ಕೊರೊನಾ ಸಮಯದಲ್ಲಿ ಭಾರತದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಗಳು ರೋಗಿಗಳನ್ನು ಹಣಕ್ಕಾಗಿ ಕೊಲ್ಲುತ್ತಿದೆ ಎಂಬ ಸುಳ್ಳು ಪ್ರತಿಪಾದನೆಯೊಂದಗೆ ವೈರಲ್ ಆಗಿದೆ.

ಕೃಪೆ: Alt News

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಏರ್‌ಪೋರ್ಟ್-ಸಿಲ್ಕ್‌ಬೋರ್ಡ್ ಮೆಟ್ರೋ ಕಾಮಗಾರಿಗೆ 15,000 ಕೋಟಿ ಮಂಜೂರು?: ವಾಸ್ತವವೇನು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here