ಕೊರೊನಾ ಎರಡನೇ ಅಲೆ ಉತ್ತರಪ್ರದೇಶದಲ್ಲಿ ವ್ಯಾಪಕವಾಗತೊಡಗಿದ್ದು, ಅಲ್ಲಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮೂವರು ಶಾಸಕರನ್ನು ಒಂದು ವಾರದೊಳಗೆ ಸಾಂಕ್ರಾಮಿಕ ರೋಗದಿಂದ ಕಳೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾದಿಂದ ಬಳಲುತ್ತಿದ್ದ ಬರೇಲಿಯ ನವಾಬ್‌ಗಂಜ್ ಕ್ಷೇತ್ರದ ಶಾಸಕ, ಬಿಜೆಪಿಯ ನಾಯಕ ಕೇಸರ್ ಸಿಂಗ್ ಅವರು ಬುಧವಾರ ನೋಯ್ಡಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸಿಂಗ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಮೌನವಾಗಿರಲ್ಲ, ನೀವು ಪ್ರಯತ್ನಿಸುತ್ತಲೇ ಇರಿ’: ತನ್ನ ನಂಬರ್ ಲೀಕ್ ಮಾಡಿದ ಬಿಜೆಪಿಗೆ ಸಿದ್ದಾರ್ಥ್
ಕಳೆದ ತಿಂಗಳಿನಿಂದ ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದರು. ಆರಂಭದಲ್ಲಿ ಭೋಜಪುರದ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಅವರನ್ನು ಅಲ್ಲಿಂದ ಬಿಡುಗಡೆ ಮಾಡಲಾಯಿತು. ನಂತರ ಅವರ ಆರೋಗ್ಯವು ಮತ್ತೆ ಹದಗೆಟ್ಟಿದ್ದು, ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಅಲ್ಲಿ ಅವರಿಗೆ ಮತ್ತೆ ಪಾಸಿಟಿವ್ ಆಗಿದೆ. ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದ ನಂತರವೂ ಯಾವುದೇ ಮಹತ್ವದ ಸುಧಾರಣೆ ಕಂಡುಬರಲಿಲ್ಲ.
ಏಪ್ರಿಲ್ 18 ರಂದು, ಅವರ ಮಗ ವಿಶಾಲ್ ಗಂಗ್ವಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿ, ಒಬ್ಬ ಆಡಳಿತ ಪಕ್ಷದ ಶಾಸಕರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಟೀಕಿಸಿ, ರಾಜ್ಯ ಸರ್ಕಾರವನ್ನು ದೂಷಿಸಿದ್ದರು.
ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್ ಚಕ್ರವರ್ತಿಗಳು ಗ್ಲಾಡಿಯೇಟರ್‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!
ನಂತರ ಆರೋಗ್ಯ ಸಚಿವಾಲಯವು ಗಂಗ್ವಾರ್ ಅವರನ್ನು ಏಪ್ರಿಲ್ 19 ರಂದು ನೋಯ್ಡಾದ ಆಸ್ಪತ್ರೆಗೆ ದಾಖಲಿಸಿತು.
ಒಂದು ವಾರದೊಳಗೆ ಉತ್ತರ ಪ್ರದೇಶದಲ್ಲಿ ಇದು ಮೂರನೇ ಬಿಜೆಪಿ ಶಾಸಕರ ಸಾವಾಗಿದೆ. ಇದಕ್ಕೂ ಮೊದಲು ಬಿಜೆಪಿ ಶಾಸಕರಾದ ರಮೇಶ್ ಚಂದ್ರ ದಿವಾಕರ್ ಮತ್ತು ಸುರೇಶ್ ಶ್ರೀವಾಸ್ತವ ಕೂಡ ಕೊರೊನಾದಿಂದ ಮೃತಪಟ್ಟಿದ್ದರು.
ಬುಧವಾರ ಮೃತರಾದ ಸಿಂಗ್ ಬಹಳ ಸಮಯದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಬಿಎಸ್‌ಪಿ ಸರ್ಕಾರದಲ್ಲಿ ಎಂಎಲ್ ಸಿ ಆಗಿದ್ದರು. ಇದಲ್ಲದೆ, ಅವರ ಸಹೋದರನ ಪತ್ನಿ ಉಷಾ ಗಂಗ್ವಾರ್ ಅವರು ಬರೇಲಿಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ಅದರು ಬಿಜೆಪಿಗೆ ಸೇರಿದ ನಂತರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನವಾಬ್ ಗಂಜ್‌ನಿಂದ ಭಾರಿ ಮತ ಅಂತರದಿಂದ ಜಯಗಳಿಸಿದ್ದರು.
ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ



ಜನಸಾಮಾನ್ಯರ ಬದಲಿಗೆ, ಈ ವ್ಯವಸ್ಥೆ ಕೆಡಿಸಿದ ದರಿದ್ರ ನಾಯಕರ ಜೀವ ಬಲಿಯಾಗುವುದು ೧೦೦% ವಾಸಿ. ಆಗಲೇ ಈ ಭಿಕಾರಿಗಳಿಗೆ ಬುದ್ದಿಬರುವುದು.
ಇಂತಹ ಶುಭಸುದ್ದಿ ದಿನಾಲೂ ಕೇಳಿಸಿದರೆ ಮನಸಿಗೆ ತುಂಬಾ ಆನಂದ.