ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ದೇಶದಲ್ಲಿ ಕೊರೊನಾ ಸಾಂಕ್ರಮಿಕ ತೀವ್ರ ರೀತಿಯಲ್ಲಿ ಹರಡುತ್ತಿದ್ದು ಭಾರತಕ್ಕಾಗಿ ಇಡಿ ವಿಶ್ವವೇ ಮರುಗುತ್ತಿದೆ. ಜಗತ್ತಿನ ಹಲವು ದೇಶಗಳು ತಮ್ಮ ಸಹಾಯ ಹಸ್ತವನ್ನೂ ಭಾರತಕ್ಕೆ ಚಾಚಿ ತಮ್ಮ ಬೆಂಬಲ ನೀಡಿವೆ. ಆಮ್ಲಜನಕವಿಲ್ಲದ, ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗದ ಜನರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಬಗ್ಗೆ ಅಂತರಾಷ್ಟ್ರೀಯ ಪತ್ರಕೆಗಳು ವರದಿ ಮಾಡಿವೆ. ಕೊರೊನಾ ಬಂದು ಒಂದು ವರ್ಷವಾದರೂ, ಎರಡನೆ ಅಲೆಯ ಬಗ್ಗೆ ಮಾಹಿತಿ ಇದ್ದರೂ ಆರೋಗ್ಯ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳದ ಸರ್ಕಾರಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮಧ್ಯೆ ದೇಶದಲ್ಲಿ ಐಪಿಎಲ್‌ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನಗಳೆದ್ದಿವೆ. ಪ್ರಸ್ತುತ ಐಪಿಎಲ್ ನಡೆಯುತ್ತಿರುವ ದೆಹಲಿಯಲ್ಲಿ ಜನರು ಮೂಲ ಆರೋಗ್ಯ ಸೌಕರ್ಯವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದರೆ, ಕ್ರೀಡಾಂಗಣದ ಹೊರಗೆ ಆಂಬುಲೆನ್ಸ್‌ಗಳನ್ನು, ಆರೋಗ್ಯ ಸೌಲಭ್ಯವನ್ನು ಸೀಮಿತ ಜನರಿಗೆ ಮೀಸಲಾಗಿಟ್ಟು, ಸಾಮಾನ್ಯ ಜನರಿಗೆ ಅದರಿಂದ ವಂಚಿತರನ್ನಾಗಿ ಮಾಡುವುದು ನೈತಿಕತೆಯೆ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಮುಂದಿಟ್ಟಿದ್ದಾರೆ.

ಮುಂದಿನ ತಿಂಗಳಿನಿಂದ ಬೆಂಗಳೂರಿನಲ್ಲೂ ಐಪಿಎಲ್ ಪಂದ್ಯಾಟ ನಡೆಯಲಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರಿನ ಪರಿಸ್ಥಿತಿ ಮುಂದಿನ ತಿಂಗಳು ಇನ್ನೂ ಹದಗೆಡಲಿದೆ ಎಂದು ಈಗಾಗಲೇ ಹಲವರು ಊಹಿಸಿದ್ದು, ಈ ಸಮಯದಲ್ಲಿ ಜೂಜಿನ ಆಟವಾದ ಐಪಿಎಲ್ ಬೇಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಯಿತೆ…?

ದೇಶದ ಖ್ಯಾತ ಪತ್ರಕರ್ತೆ ಬರ್ಖಾದತ್‌ ಐಪಿಎಲ್ ಅನ್ನು ‘ಕಿವುಡು’ ಎಂದು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ನಿಖಿಲ್ ಜೆ ಆಳ್ವಾ ಅವರು, “ಪ್ರಾಚೀನ ಕಾಲದಲ್ಲಿ, ಪರಿಸ್ಥಿತಿಯು ಕೆಟ್ಟದಾಗಿದ್ದಾಗ ನಾಗರೀಕರ ಗಮನವನ್ನು ಬೇರೆಡೆಗೆ ಸೆಳೆಯಲು ರೋಮ್‌ನ ಚಕ್ರವರ್ತಿಗಳು ಕಾಲೊಸಿಯಂನಲ್ಲಿ ಗ್ಲಾಡಿಯೇಟರ್ ಆಟಗಳನ್ನು ಆಯೋಜಿಸಿಸುತ್ತಿದ್ದರು. ಭಾರತದಲ್ಲಿ ನಮಗೆ ಐಪಿಎಲ್ ಇದೆ” ಎಂದು ಹೇಳಿದ್ದಾರೆ.

ಪತ್ರಕರ್ತ ಶಶಿಧರ್‌ ಹೆಮ್ಮಾಡಿ, “IPL ಗೂ ಈ ದೇಶಕ್ಕೂ ಸಂಬಂಧವಿದೆಯೆ? BCCI ಗೆ ಈ ದೇಶದ ಕುರಿತು ಏನಾದರೂ ಕಾಳಜಿ ಇದೆಯೆ? ಇದ್ದರೆ ಇಷ್ಟೊಂದು ಅಮಾನವೀಯತೆಯಿಂದ BCCI ವರ್ತಿಸುತ್ತಿರಲಿಲ್ಲ. ಇಂದು ದೆಹಲಿಯಲ್ಲಿ IPL ಮ್ಯಾಚ್ ಇದೆ. ದೆಹಲಿಯಲ್ಲಿ ನಿತ್ಯವೂ ನೂರಾರು ಜನರು ಕೋವಿಡ್‌ನಿಂದ ಸಾಯುತ್ತಿದ್ದು ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ” ಎಂದು ಬುಧವಾರ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

“ಜನಸಾಮಾನ್ಯರಿಗೆ ಹೆಣ ಸಾಗಿಸಲೂ ಸಹ ಆಂಬುಲೆನ್ಸ್‌ಗಳು ಸಿಗುತ್ತಿಲ್ಲ. ಆದರೆ IPL ಮ್ಯಾಚ್ ನಡೆಯುತ್ತಿರುವ ಮೈದಾನದ ಸುತ್ತ ಪೊಲೀಸರು ನೂರಾರು ಸಂಖ್ಯೆಯಲ್ಲಿದ್ದಾರೆ. ಆಟಗಾರರಿಗಾಗಿ ಆಂಬುಲೆನ್ಸ್‌ಗಳು ಸಜ್ಜಾಗಿ ನಿಂತಿವೆ. ಆಕ್ಸಿಜನ್ ಪೂರೈಕೆ, ಪರೀಕ್ಷೆ ಸೌಲಭ್ಯ ಎಲ್ಲವೂ ಇಲ್ಲಿ ಸಿದ್ಧವಿದೆ. ದೆಹಲಿಯಲ್ಲಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಲಭ್ಯವಾಗಬೇಕಾದ ಸೌಲಭ್ಯಗಳು IPL ಗಾಗಿ ಮೀಸಲಿಡಲಾಗಿದೆ. ಇದೇ ಮೈದಾನದ ಪಕ್ಕದಲ್ಲಿ ಇರುವ ಸ್ಮಶಾನದಲ್ಲಿ ಕಳೆದೆರಡು ದಿನಗಳಲ್ಲಿ ನೂರಕ್ಕೂ ಹೆಚ್ಚು ಹೆಣಗಳನ್ನು ದಹನ ಮಾಡಲಾಗಿದೆ. IPL ಇಂತಹ ಸ್ಥಿತಿಯಲ್ಲೂ ಮುಂದುವರಿಯಬೇಕೆ?” ಎಂದು ಶಶಿಧರ್‌ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಸಿಪಿಎಂ ನಾಯಕನ ಪುತ್ರ ನಿಧನ; ವಿಕೃತಿ ಮೆರೆದ ಬಿಜೆಪಿ ಉಪಾಧ್ಯಕ್ಷ

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು, “ಈ ಸಮಯದಲ್ಲಿ 2 ಭಾರತಗಳಿವೆ ಎಂದು ತೋರುತ್ತದೆ. ಒಂದು ಜನರು ಹಾಸಿಗೆ ಪಡೆಯಲು ಹೆಣಗಾಡುತ್ತಿರುವ ಭಾರತ. ಇನ್ನೊಂದು ಆರಾಮದಾಯ ಬಬಲ್‌ನಲ್ಲಿನ ಐಪಿಎಲ್” ಎಂದು ಹೇಳಿದ್ದಾರೆ.

ಪ್ರದೀಪ್ ಅವರು, “ದೆಹಲಿಯಲ್ಲಿ ಲಾಕ್ ಡೌನ್ ಇದೆ ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ಇದೆ. ಐಪಿಎಲ್ ನಂತಹ ಸಂಪೂರ್ಣ ವಾಣಿಜ್ಯ ಚಟುವಟಿಕೆಯನ್ನು ಏಕೆ ಅನುಮತಿಸಲಾಗಿದೆ ಎಂದು ಯಾರಾದರೂ ವಿವರಿಸಬಹುದೇ? ಲೈವ್ ಮನರಂಜನೆಗೆ ವಿನಾಯಿತಿ ಇದೆಯೇ ಅಥವಾ ಐಪಿಎಲ್‌ ರಾಜ್ಯದ ಕಾನೂನುಗಳಿಗೆ ನಿರೋಧಕವಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ

ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ

ಸಾಮಾಜಿಕ ಕಾರ್ಯಕರ್ತ ವಿ.ಎಲ್. ಬಾಲು ಅವರು, “IPL ನಡಿಲಿ 100% ತಪ್ಪಿಲ್ಲ. ಜನ ಸ್ವಲ್ಪ (ಆಮ್ಲಜನಕ ಇಲ್ಲದೆ ಸತ್ತ ಕುಟುಂಬ, ಬೆಡ್ ಸಿಗದ ಸ್ನೇಹಿತರು) ಬಯ್ದರೆ ಅಡ್ಜಸ್ಟ್ ಮಾಡ್ಕೋಳಿ! ಅವರಿಗೆ ಬಯ್ಯೊದಿಕ್ಕಾದರು ಸ್ವಾತಂತ್ರ್ಯ ಕೋಡೋಣ ಸರ್!” ಎಂದು ವ್ಯಂಗ್ಯವಾಡಿದ್ದಾರೆ.

ವರ್ಡ್ ಟೇಲ್‌ ಎಂಬ ಟ್ವಿಟರ್‌ ಅಕೌಂಟ್‌, “ದೆಹಲಿಯ ಹೊರಗಿನ ಐಪಿಎಲ್‌ಗಾಗಿ ಕ್ರಿಕೆಟ್ ಮೈದಾನದಲ್ಲಿ ಆಂಬುಲೆನ್ಸ್‌ ನಿಲ್ಲಿಸಲಾಗಿದೆ. ಆದರೆ ರೋಗಿಗಳಿಗೆ ಅಥವಾ ಮೃತ ದೇಹಗಳಿಗೆ ಈ ಆಂಬುಲೆನ್ಸ್‌‌ ಲಭ್ಯವಿಲ್ಲ” ಎಂದು ಹೇಳಿದ್ದಾರೆ.

“ಇಡೀ ಭಾರತ ಸಂಕಷ್ಟದಲ್ಲಿರುವಾಗ, ಈ ಕ್ರಿಕೆಟಿಗರು ಮೈದಾನದಲ್ಲಿ ಆನಂದಿಸುತ್ತಿದ್ದಾರೆ! ಭಾರಿ ಅಸೂಕ್ಷ್ಮತೆ’’ ಎಂದು ಶಿಬಾ ಬಿಸ್ವಾಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಎಚ್ಚರ: ದೈಹಿಕ ಅಂತರ ಕಾಪಾಡದ ಸೋಂಕಿತ ವ್ಯಕ್ತಿ 406 ಜನರಿಗೆ ಕೊರೊನಾ ಹರಡಬಲ್ಲ!

ಇದನ್ನೂ ಓದಿ: #ResignModi ಹ್ಯಾಷ್‌ಟ್ಯಾಗ್‌ ನಿರ್ಬಂಧಿಸಿ ಟೀಕೆಗೊಳಗಾದ ಫೇಸ್‌ಬುಕ್: ಟೀಕೆ ನಂತರ ಎಚ್ಚೆತ್ತು ಮರುಸ್ಥಾಪನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here