ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಗಿತ್ತೆ...?

ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಲವಾರು ನಾಯಕರು ಮತ್ತು ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಹಿಂದಿನ ಪ್ರಧಾನ ಮಂತ್ರಿಗಳಿಗೆ ಹೋಲಿಸಿದರೆ ದೇಶದಲ್ಲಿ ಗರಿಷ್ಠ ಸಂಖ್ಯೆಯ ಏಮ್ಸ್ ಸ್ಥಾಪನೆಯಾಗಿವೆ ಎಂದು ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದಾರೆ.

ಈ ವಿಷಯದ ಆಧಾರದಲ್ಲಿ ಪಟ್ಟಿ ರಚನೆ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.  ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಕೇವಲ ಒಂದು ಏಮ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಪ್ರಧಾನಿ ಮೋದಿ ಕಳೆದ ಏಳು ವರ್ಷಗಳಲ್ಲಿ 15 ಏಮ್ಸ್ ಸ್ಥಾಪಿಸಿದ್ದಾರೆ ಎಂದು ಪಟ್ಟಿ ಹೇಳುತ್ತದೆ.

ಬಿಹಾರ ಸರ್ಕಾರದ ಕ್ಯಾಬಿನೆಟ್ ಸಚಿವ ನಂದ್ ಕಿಶೋರ್ ಯಾದವ್ ಕೂಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್​ ಹೈಕೋರ್ಟ್

 

ರಾಜಕೀಯ ವಿಶ್ಲೇಷಕ ಅಭಿನವ್ ಪ್ರಕಾಶ್ ಅವರು 14 ಏಮ್ಸ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ, ಅದರಲ್ಲಿ 11 ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. ಅವರ ಪೋ 8,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ ಮತ್ತು 3,400 ಕ್ಕೂ ಹೆಚ್ಚು ರಿಟ್ವೀಟ್‌ ಆಗಿದೆ.

 

ಬಿಜೆಪಿ ಬೆಂಬಲಿಗರಾದ ಅರುಣ್ ಪುದೂರ್ ಮತ್ತು ಸೂತ್ರಾಧರ್ ಕೂಡ ಈ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. “10 ವರ್ಷಗಳ ಅಧಿಕಾರಾವಧಿಯಲ್ಲಿ ಮನಮೋಹನ್ ಸಿಂಗ್ ಅವರು 1 ಏಮ್ಸ್ ಅನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ ”ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್ ಉಲ್ಬಣ: ಖಾಸಗಿ ಜೆಟ್‌ಗಳ ಮೂಲಕ ವಿದೇಶಕ್ಕೆ ಹಾರುತ್ತಿರುವ ಭಾರತದ ಅತಿ ಸಿರಿವಂತರು!

 

ಫೇಸ್‌ಬುಕ್‌ನಲ್ಲೂ ಹಲವು ಮಂದಿ ಇದನ್ನೂ ಶೇರ್‌ ಮಾಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾಗಿದ್ದು, ಜನರನ್ನು ದಾರಿ ತಪ್ಪಿಸುವ ಪಟ್ಟಿಯಾಗಿದೆ.

ದೇಶದ ಮೊದಲ ಆರೋಗ್ಯ ಸಚಿವ ಅಮೃತ್ ಕೌರ್ ಅವರ ನೇತೃತ್ವದಲ್ಲಿ 1956 ರಲ್ಲಿ ದೇಶದಲ್ಲಿ ಮೊದಲ ಏಮ್ಸ್ ಸ್ಥಾಪಿಸಲಾಯಿತು. ಅಂದಿನಿಂದ, ಆರು ಹೊಸ ಏಮ್ಸ್ ಅನ್ನು ಕ್ರಿಯಾತ್ಮಕಗೊಳಿಸಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು 2003 ರಲ್ಲಿ ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY) ಯನ್ನು ಘೋಷಿಸಿತು, “ದೇಶದಲ್ಲಿ ಕೈಗೆಟುಕುವ / ವಿಶ್ವಾಸಾರ್ಹ ತೃತೀಯ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವುದು ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಹೆಚ್ಚಿಸುವುದು” ಇದರ ಉದ್ದೇಶವಾಗಿತ್ತು.

2003 ರಲ್ಲಿ ಅವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಮಾಜಿ ಪ್ರಧಾನಿ PMSSY ಅಡಿಯಲ್ಲಿ “ದೆಹಲಿಯ ಏಮ್ಸ್ನಲ್ಲಿ ಲಭ್ಯವಿರುವಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಆರು ಹೊಸ ಆಸ್ಪತ್ರೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಸ್ಥಾಪಿಸಲಾಗುವುದು” ಎಂದು ಘೋಷಿಸಿದರು. ಆದರೆ ಘೋಷಣೆ ಮಾಡಿದ ಒಂಬತ್ತು ತಿಂಗಳ ನಂತರ ವಾಜಪೇಯಿ ಸರ್ಕಾರ ಅಧಿಕಾರದಿಂದ ಹೊರಬಂದಿತು. ಆರು ಆಸ್ಪತ್ರೆಗಳನ್ನು ಯುಪಿಎ ಅಧಿಕಾರಾವಧಿಯಲ್ಲಿ ಸ್ಥಾಪಿಸಲಾಯಿತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೊರೊನಾ ಸಮಯದಲ್ಲಿ ಕುಂಭಮೇಳಕ್ಕೆ ಆಕ್ಷೇಪ; ಪತ್ರಕರ್ತೆಯ ಇರಿದು ಕೊಲೆ ಎಂಬುದು ಸುಳ್ಳು

PMSSYನ ಮೊದಲ ಹಂತದಲ್ಲಿ ಈ ಆರು ಹೊಸ ಏಮ್ಸ್ ಅನ್ನು ಭೋಪಾಲ್, ಭುವನೇಶ್ವರ, ಜೋಧ್‌ಪುರ, ಪಾಟ್ನಾ, ರಾಯ್‌ಪುರ, ಮತ್ತು ರಿಷಿಕೇಶದಲ್ಲಿ ಸ್ಥಾಪಿಸಲಾಯಿತು. 2012 ರಲ್ಲಿ ಈ ಏಮ್ಸ್‌ನಲ್ಲಿ ನಿಯಮಿತ ಎಂಬಿಬಿಎಸ್ ಬ್ಯಾಚ್‌ಗಳು ಪ್ರಾರಂಭವಾದರೆ, ನಿಯಮಿತ ನರ್ಸಿಂಗ್ ಕೋರ್ಸ್‌ಗಳು 2013 ರಲ್ಲಿ ಪ್ರಾರಂಭವಾದವು ಎಂದು PMSSY ವೆಬ್‌ಸೈಟ್ ಮಾಹಿತಿ ನೀಡುತ್ತದೆ.

ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳ ಅಡಿಯಲ್ಲಿ ಏಮ್ಸ್ ಕೆಲಸಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ಗಮನಾರ್ಹ. ಉದಾಹರಣೆಗೆ, ಏಮ್ಸ್ ಭೋಪಾಲ್‌ನಲ್ಲಿ 2013 ರಲ್ಲಿ ವೈದ್ಯಕೀಯ ಕಾಲೇಜು ಮತ್ತು ಹೊರ ರೋಗಿಗಳ ವಿಭಾಗ (ಒಪಿಡಿ) ಸೇವೆಗಳನ್ನು ಪ್ರಾರಂಭಿಸಲಾಗಿದ್ದರೆ, ಇನ್-ಪೇಷಂಟ್ ಡಿಪಾರ್ಟ್‌ಮೆಂಟ್ (ಐಪಿಡಿ) ಮತ್ತು ಖಾಸಗಿ ವಾರ್ಡ್‌ಗಳನ್ನು ಕ್ರಮವಾಗಿ 2014 ಮತ್ತು 2017 ರಲ್ಲಿ ಉದ್ಘಾಟಿಸಲಾಯಿತು. 2019 ರಲ್ಲಿ ಸಿಎಜಿ ವರದಿಯೊಂದು ಈ ಹೊಸ ಏಮ್ಸ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇನ್ನೂ ಬಾಕಿ ಉಳಿದಿದೆ.

ಹೀಗಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ವೈರಲ್ ಆಗಿರುವ ಪಟ್ಟಿಯಲ್ಲಿ ಮನ್ನಣೆ ಪಡೆಯುತ್ತಿರುವ ಎಲ್ಲಾ ಆರು ಏಮ್ಸ್‌ಗಳನ್ನು ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಸ್ಥಾಪಿಸಲಾಗಿದೆ.

ದೇಶದ ಏಮ್ಸ್ ಸಂಸ್ಥೆಗಳ ಸ್ಥಿತಿಗತಿ ಕುರಿತು ಪ್ರಶ್ನೆಗಳಿಗೆ ಉತ್ತರಿಸಿರುವ ಕುಟುಂಬ ಕಲ್ಯಾಣ ಆರೋಗ್ಯ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕಳೆದ ವರ್ಷ ನೀಡಿರುವ ಮಾಹಿತಿಯಂತೆ, “22 ಏಮ್ಸ್ ಅನ್ನು PMSSY ಅಡಿಯಲ್ಲಿ ಸ್ಥಾಪಿಸಲು ಘೋಷಿಸಲಾಗಿದೆ. ಅದರಲ್ಲಿ, ಭೋಪಾಲ್, ಭುವನೇಶ್ವರ, ಜೋಧ್ಪುರ್, ಪಾಟ್ನಾ, ರಾಯ್‌ಪುರ ಮತ್ತು ರಿಷಿಕೇಶ್‌ನಲ್ಲಿ 06 ಏಮ್ಸ್ ಕಾರ್ಯನಿರ್ವಹಿಸುತ್ತಿವೆ. ಇತರ 16 ಏಮ್ಸ್ ನಿರ್ಮಾಣದ ವಿವಿಧ ಹಂತಗಳಲ್ಲಿವೆ” ಎಂದಿದ್ದಾರೆ.

ಇದನ್ನೂ ಓದಿ: ಆದಿತ್ಯನಾಥ್ ಕುರಿತ ಪೋಸ್ಟ್ ಕಾರ್ಡ್‌ ಸುಳ್ಳು ಬಯಲು; ವಾಸ್ತವದಲ್ಲಿ ಇದು ಉಲ್ಟಾ ಕೇಸು | ನವೀನ್ ಸೂರಿಂಜೆ

16 ಏಮ್ಸ್ ಪೈಕಿ, ರೇ ಬರೇಲಿಯಲ್ಲಿ ಒಂದನ್ನು 2009 ರಲ್ಲಿ ಪಿಎಂಎಸ್ಎಸ್‌ವೈಯ ಎರಡನೇ ಹಂತದ ಅಡಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರವು ಅನುಮೋದಿಸಿತು. “ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಒಂದು ದಶಕದ ನಂತರ, ರೇ ಬರೇಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊರ ರೋಗಿಗಳ ವಿಭಾಗ (ಒಪಿಡಿ) 2018 ರ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇತರ 15 ಏಮ್ಸ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ, ಅವುಗಳಲ್ಲಿ ಕೆಲವು ಭಾಗಶಃ ಹೊರ ರೋಗಿಗಳ ವಿಭಾಗ ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಕೆಲವು ಸೇವೆಗಳನ್ನು ಪ್ರಾರಂಭಿಸಿವೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪಟ್ಟಿ ತಪ್ಪುದಾರಿಗೆಳೆಯುವ ಚಿತ್ರಣವನ್ನು ನೀಡುತ್ತದೆ. ಇಲ್ಲಿಯವರೆಗೆ, ದೆಹಲಿಯ ಏಮ್ಸ್ಅನ್ನು ಒಳಗೊಂಡು, ಏಳು ಏಮ್ಸ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ.

ಆರು ಹೊಸ ಏಮ್ಸ್‌ಗಳನ್ನು ಬಿಜೆಪಿ ಸರ್ಕಾರ ಘೋಷಿಸಿತು ಆದರೆ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಸ್ಥಾಪಿಸಲಾಯಿತು. ಏಮ್ಸ್ ರೇ ಬರೇಲಿಯನ್ನು ಕಾಂಗ್ರೆಸ್ ಆಡಳಿತದಡಿಯಲ್ಲಿ ಸ್ಥಾಪಿಸಲಾಯಿತು, ಆದರೆ, ಅದರ ಒಪಿಡಿ ಸೇವೆಗಳನ್ನು ಬಿಜೆಪಿಯ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾಯಿತು. ಇತರ 15 ಏಮ್ಸ್ ಅನ್ನು ಬಿಜೆಪಿ ಸರ್ಕಾರವು ಘೋಷಿಸಿತು ಆದರೆ ಅವು ಭಾಗಶಃ ಕಾರ್ಯನಿರ್ವಹಿಸುತ್ತಿದ್ದರೇ ಕೆಲವು ನಿರ್ಮಾಣ ಹಂತದಲ್ಲಿದೆ.

ಕೃಪೆ: ಆಲ್ಟ್ ನ್ಯೂಸ್


ಇದನ್ನೂ ಓದಿ: ರೈತ ಹೋರಾಟಕ್ಕೆ 150 ದಿನ: ಬಿರು ಬೇಸಿಗೆಯಲ್ಲೂ ಬತ್ತದ ಉತ್ಸಾಹ, ಮೇ 10 ರಿಂದ ಮತ್ತಷ್ಟು ಬಿರುಸು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here