ಕೋವಿಡ್ ಎರಡನೇ ಅಲೆಯ ನಡುವೆಯೂ ಏಪ್ರಿಲ್ 27 ರಂದು 8 ಜಿಲ್ಲೆಗಳಲ್ಲಿ ನಡೆದಿದ್ದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿಗಳ ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಜೆಡಿಎಸ್ ಎರಡನೇ ಸ್ಥಾನ ಪಡೆದಿದ್ದು ಬಿಜೆಪಿಗೆ ಮುಖಭಂಗವಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ- ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಉಳಿದಂತೆ ಚನ್ನಪಟ್ಟಣ ನಗರಸಭೆ ಮತ್ತು ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆದರೆ ಬಿಜೆಪಿ ಕೇವಲ ಮಡಿಕೇರಿ ನಗರಸಭೆಗೆ ಮಾತ್ರ ಸೀಮಿತವಾಗಿದೆ.
ಫಲಿತಾಂಶದ ಪೂರ್ಣ ವಿವರ ಹೀಗಿದೆ.
ಬಳ್ಳಾರಿ ಮಹಾನಗರ ಪಾಲಿಕೆ – ಕಾಂಗ್ರೆಸ್
ಒಟ್ಟು ಸ್ಥಾನಗಳು 39: ಕಾಂಗ್ರೆಸ್-21, ಬಿಜೆಪಿ-13, ಜೆಡಿಎಸ್-00, ಪಕ್ಷೇತರ-05
ಬೀದರ್ ನಗರಸಭೆ – ಕಾಂಗ್ರೆಸ್
ಒಟ್ಟು ಸ್ಥಾನಗಳು 35: ಕಾಂಗ್ರೆಸ್-15, ಬಿಜೆಪಿ-08, ಜೆಡಿಎಸ್-07 ಪಕ್ಷೇತರ-05
ರಾಮನಗರ ನಗರಸಭೆ – ಕಾಂಗ್ರೆಸ್
ಒಟ್ಟು ಸ್ಥಾನಗಳು 31: ಕಾಂಗ್ರೆಸ್-19, ಬಿಜೆಪಿ-00, ಜೆಡಿಎಸ್-11, ಪಕ್ಷೇತರ-01
ಭದ್ರಾವತಿ ನಗರಸಭೆ – ಕಾಂಗ್ರೆಸ್
ಒಟ್ಟು ಸ್ಥಾನಗಳು 35: ಕಾಂಗ್ರೆಸ್-18, ಬಿಜೆಪಿ-04, ಜೆಡಿಎಸ್-11, ಪಕ್ಷೇತರ-01
ಚನ್ನಪಟ್ಟಣ ನಗರಸಭೆ – ಜೆಡಿಎಸ್
ಒಟ್ಟು ಸ್ಥಾನಗಳು 31: ಕಾಂಗ್ರೆಸ್-07, ಬಿಜೆಪಿ-07, ಜೆಡಿಎಸ್-16, ಪಕ್ಷೇತರ-01
ಮಡಿಕೇರಿ ನಗರಸಭೆ – ಬಿಜೆಪಿ
ಒಟ್ಟು ಸ್ಥಾನಗಳು 23: ಕಾಂಗ್ರೆಸ್-01, ಬಿಜೆಪಿ-16, ಜೆಡಿಎಸ್-01, ಎಸ್‌ಡಿಪಿಐ-05 ಪಕ್ಷೇತರ-00
ಬೇಲೂರು ಪುರಸಭೆ – ಕಾಂಗ್ರೆಸ್
ಒಟ್ಟು ಸ್ಥಾನಗಳು 23: ಕಾಂಗ್ರೆಸ್-17, ಬಿಜೆಪಿ-01, ಜೆಡಿಎಸ್-05, ಪಕ್ಷೇತರ-00
ವಿಜಯಪುರ ಪುರಸಭೆ – ಜೆಡಿಎಸ್
ಒಟ್ಟು ಸ್ಥಾನಗಳು 23: ಕಾಂಗ್ರೆಸ್-06, ಬಿಜೆಪಿ-01, ಜೆಡಿಎಸ್-14, ಪಕ್ಷೇತರ-02
ಗುಡಿಬಂಡೆ ಪಟ್ಟಣ ಪಂಚಾಯಿತಿ – ಕಾಂಗ್ರೆಸ್
ಒಟ್ಟು ಸ್ಥಾನಗಳು 11: ಕಾಂಗ್ರೆಸ್-06, ಬಿಜೆಪಿ-00, ಜೆಡಿಎಸ್-02, ಪಕ್ಷೇತರ-03
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ – ಕಾಂಗ್ರೆಸ್
ಒಟ್ಟು ಸ್ಥಾನಗಳು 15: ಕಾಂಗ್ರೆಸ್-09, ಬಿಜೆಪಿ-06, ಜೆಡಿಎಸ್-00, ಪಕ್ಷೇತರ-00
ಒಟ್ಟು 266 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು 119 ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು 44.73% ಮತಗಳನ್ನು ಪಡೆದಿದೆ. ಜೆಡಿಎಸ್ 67 ಸ್ಥಾನಗಳಲ್ಲಿ ಜಯಿಸಿದ್ದು, 25.18% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದ್ದು, 21.05% ರಷ್ಟು ಮತಗಳನ್ನು ಪಡೆದಿದೆ.
ಇದನ್ನೂ ಓದಿ: ಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?



ಶುಬ ಸೂಚನೆ, ವಿರೋಧ ಪಕ್ಷಗಳು ಜವಾಬ್ದಾರಿಯಿಂದ ಒಗ್ಗಟ್ಟಿನಿಂದ ವರ್ತಿಸಿದರೆ, ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮನುವಾದಿಗಳನ್ನು ಮನೆಗೆ ಕಳುಹಿಸಬಹುದು.
ವಿರೋದ ಪಕ್ಷಗಳು ಅವರ ಜವಬ್ದಾರಿಯನ್ನು ಅರಿತು ಒಗ್ಗಟ್ಡಿನಿಂದ ಜನಪರವಾಗಿ ಜನರಿಗೋಸ್ಕರ ಕೆಲಸ ಮಾಡಬೇಕು ಹಾಗ ಮಾತ್ರ ಈ ಮನುವಾದಿಗಳನ್ನು ೦ ಲೆವೆಲ್ಗೆ ತಂದು ಕೂರಿಸಬಹುದು ಜನರ ನಡುವೆ ಹೆಚ್ಚು ಹೆಚ್ಚು ಕೆಲಸ ಮಾಡಬೇಕು.
ಧನರಾಜು ಬೆಂಗಳೂರು